ಕನ್ನಡಪ್ರಭ ವಾರ್ತೆ ಕಾರ್ಕಳ
ಈ ಪ್ರಶಸ್ತಿಯು ಒಂದು ಸಾಂಕೇತಿಕ ಮೊತ್ತ, ಪ್ರಶಸ್ತಿ ಫಲಕ ಮತ್ತು ಸನ್ಮಾನವನ್ನು ಒಳಗೊಂಡಿರುತ್ತದೆ. ಡಾ. ಸುಭಾಷ ಪಟ್ಟಾಜೆ ಮತ್ತು ಭವ್ಯ ಭಟ್ ಅವರು ತೀರ್ಪುಗಾರರಾಗಿದ್ದ ಈ ಪ್ರಶಸ್ತಿಯ ಆಯ್ಕೆಗೆ 30ಕ್ಕೂ ಅಧಿಕ ಕಾದಂಬರಿಗಳು ಬಂದಿದ್ದವು. ಈ ಪ್ರಶಸ್ತಿಗೆ ಲೇಖಕರು, ಪ್ರಕಾಶಕರು ಮತ್ತು ಓದುಗರಿಂದ ಕಾದಂಬರಿಗಳನ್ನು ಆಹ್ವಾನಿಸಲಾಗಿತ್ತು. ಕನ್ನಡದಲ್ಲಿ ಮೊತ್ತ ಮೊದಲ ಬಾರಿಗೆ ಓದುಗರಿಂದ ಕಾದಂಬರಿಗಳನ್ನು ಆಹ್ವಾನಿಸುವ ಮೂಲಕ ಸಾಹಿತ್ಯ ಗಂಗಾ ಸಂಸ್ಥೆಯು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದೆ. ಈ ಪ್ರಶಸ್ತಿಯ ಮತ್ತೊಂದು ವಿಶೇಷವೆಂದರೆ ‘ಭಾರತ ಕಥಾ’ ಕಾದಂಬರಿಯನ್ನು ಲೇಖಕರಾಗಲಿ, ಪ್ರಕಾಶಕರಾಗಲಿ ಕಳಿಸಿರಲಿಲ್ಲ, ಓದುಗರೇ ಕಳುಹಿಸಿದ್ದರು.
ಪ್ರಶಸ್ತಿ ವಿಜೇತರಾದ ಡಾ. ನಾ. ಮೊಗಸಾಲೆ ಅವರಿಗೆ ಸಾಹಿತ್ಯ ಗಂಗಾ ಸಂಸ್ಥೆಯ ಮುಖ್ಯಸ್ಥ ವಿಕಾಸ ಹೊಸಮನಿ, ಸಂಚಾಲಕ ಸುಭಾಷ ಪಟ್ಟಾಜೆ ಮತ್ತು ಪ್ರಾಯೋಜಕರಾದ ಸೀಮಾ ಕುಲಕರ್ಣಿ ಅಭಿನಂದನೆ ಸಲ್ಲಿಸಿದ್ದಾರೆ. ಜೂನ್ 8ರಂದು ಕಾರ್ಕಳದ ಪ್ರಕಾಶ್ ಹೋಟೆಲ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಸಂಚಾಲಕ ಸುಭಾಷ ಪಟ್ಟಾಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.