ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಗುರುವಾರ ನಡೆದ ಸಮಾರಂಭದಲ್ಲಿ ಮಾತನಾಡಿದ, ಸಂಚಾಲಕ, ಮತದಾರ ಸಾಕ್ಷರತಾ ಅಧಿಕಾರಿ ಸರಳಾ, ನಾಳಿನ ಸುಂದರ ದೇಶವನ್ನು ದೇಶವನ್ನು ಕಟ್ಟುವ ತೀಕ್ಷ್ಣ ಆಯುಧವೇ ಮತದಾನ. ಸಂವಿಧಾನವು ನಮಗೆ ಮತದಾನದ ಪವಿತ್ರದ ಹಕ್ಕು ಕೊಟ್ಟು ದೇಶಕಟ್ಟುವ ಕಾಯಕದಲ್ಲಿ ಪ್ರಜೆಗಳು ಭಾಗಿಯಾಗುವ ಅವಕಾಶವನ್ನು ಕಲ್ಪಿಸಿಕೊಟ್ಟಿದೆ ಎಂದು ವಿವರಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಶ್ರೀಲತಾ ಮಾತನಾಡಿ, ಭವಿಷ್ಯದ ಮತದಾನ ಮಹತ್ವ ಮತ್ತು ಚುನಾವಣಾ ಪ್ರಕ್ರಿಯೆಗಳ ಬಗ್ಗೆ ವಿದ್ಯಾರ್ಥಿಗಳು ಸ್ಪಂದಿಸುವಂತೆ ಮಾಡುವ ಉದ್ದೇಶದಿಂದ ಮಾದರಿ ಕಾಲೇಜು ರಚಿಸುವ ಈ ಕಾರ್ಯಕ್ರಮವನ್ನು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.ಪ್ರಜಾಪ್ರಭುತ್ವ ಮಾದರಿಯಲ್ಲಿ ಮತದಾನ ಮಾಡುವ ಮೂಲಕ ಉತ್ತಮ ಆಭ್ಯರ್ಥಿಗಳನ್ನು ಆಯ್ಕೆ ಮಾಡುವ ಪವಿತ್ರವಾದ ಹಕ್ಕಿನ ಶ್ರೇಷ್ಠತೆಯನ್ನು ವಿದ್ಯಾರ್ಥಿಗಳು ತಮ್ಮ ಕಾಲೇಜು ವ್ಯಾಸಂಗದ ಅವಧಿಯಲ್ಲಿಯೇ ಮನವರಿಕೆ ಮಾಡಿಕೊಳ್ಳಬೇಕು ಎಂದರು.
ನಂತರ ಮಕ್ಕಳಿಂದ ಗೌಪ್ಯ ಮತದಾನ ನಡೆಯಿತು. ಮತ ಎಣಿಕೆಯನ್ನು ಉಪನ್ಯಾಸಕರಾದ ಸುನೀತಾ, ಅಭಿಷೇಕ್, ಪದ್ಮಾವತಿ, ಸುಚಿತ್ರಾ, ಅನುಷಾ, ಸಂಧ್ಯಾ, ಕವಿತಾಭಕ್ತಾ, ಈಶ ನೇರವೇರಿಸಿದರು.ಮತದಾನದಲ್ಲಿ ಕಾಲೇಜು ನಾಯಕನಾಗಿ ಜೋಶ್ವರದಿ, ಉಪನಾಯಕಿಯಾಗಿ ರಿಶಾನ, ಕ್ರೀಡಾ ಮಂತ್ರಿ ಸಾಹುಲ್ ಹಮಿತಿ, ಸಾಂಸ್ಕೃತಿಕ ಮಂತ್ರಿ ಫಾತಿಮತ್ ಸುಹೇರಾ, ಆರೋಗ್ಯ ಮಂತ್ರಿ, ಸ್ವಚ್ಚತಾ ಮಂತ್ರಿಯಾಗಿ ಸಮೀರಾ ಆಯ್ಕೆಗೊಂಡರು.