ಸುಂಟಿಕೊಪ್ಪ: ವಿಶು ಸೌರಮಾನ ಯುಗಾದಿ ಸಾಂಪ್ರದಾಯಿಕ ಆಚರಣೆ

KannadaprabhaNewsNetwork |  
Published : Apr 17, 2026, 02:45 AM IST
ಚಿತ್ರ.1: ಮ¯ಯಾಳಿ ಭಾಂದವರು ವಿಶು ಸೌರಮಾನ ಯುಗಾದಿಯನ್ನು ಆಚರಿಸುತ್ತಿರುವುದು. | Kannada Prabha

ಸಾರಾಂಶ

ಕೊಡಗಿನಲ್ಲಿ ನೆಲೆ ನಿಂತಿರುವ ಮಲಯಾಳಿ ಸಮಾಜದವರು ವಿಶು ಸೌರಮಾನ ಯುಗಾದಿಯನ್ನು ಸಾಂಪ್ರದಾಯಿಕವಾಗಿ ಸಡಗರ ಸಂಭ್ರಮದಿಂದ ಆಚರಿಸಿದರು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಕೊಡಗಿನಲ್ಲಿ ನೆಲೆ ನಿಂತಿರುವ ಮಲಯಾಳಿ ಸಮಾಜದವರು ವಿಶು ಸೌರಮಾನ ಯುಗಾದಿಯನ್ನು ಸಾಂಪ್ರದಾಯಿಕವಾಗಿ ಸಡಗರ ಸಂಭ್ರಮದಿಂದ ಆಚರಿಸಿದರು.ಕೇರಳದಲ್ಲಿ ವಿಶು ಹಬ್ಬವನ್ನು ಮಲಯಾಳಿ ಭಾಂದವರು ಹೊಸ ವರ್ಷದ ಸೌರಮಾನ ಯುಗಾದಿಯನ್ನು ಬರಮಾಡಿಕೊಳ್ಳುವುದರಲ್ಲಿ ವಿಶೇಷ ಉತ್ಸಾಹಕತೆ ಆಸಕ್ತಿಯನ್ನು ಮನೆ ಮಾಡಿಕೊಳ್ಳುತ್ತಾರೆ. 14 ಮಧ್ಯರಾತ್ರಿ ಕಳೆದು ತಾ.15 ರ ಸೌರಮಾನ ಯುಗಾದಿಯಲ್ಲಿ ಮಲಯಾಳಿ ಭಾಂದವರು ಪಟಾಕಿ ಸಂಭ್ರಮಿಸುವುದು ವಾಡಿಕೆಯಾಗಿದೆ. ತಾ.15 ರಂದು ವಿಶು ಹಬ್ಬದಂದು ಮಲಯಾಳಿ ಭಾಂದವರ ಮನೆಯಲ್ಲಿ ಸಾಂಪ್ರದಾಯಿಕ ವಿಶು ಹಬ್ಬ ಆಚರಿಸುತ್ತಾರೆ.ಮಲಯಾಳಿ ಬಾಂಧವರು ದೇವಾಲಯಕ್ಕೆ ತೆರಳಿ ದೇವರಿಗೆ ಅರ್ಚನೆ ಪೂಜೆಗಳನ್ನು ಸಲ್ಲಿಸುವ ಮೂಲಕ ಹಬ್ಬಕ್ಕೆ ಮುನ್ನುಡಿಯನ್ನು ಇಡುತ್ತಾರೆ.ಮಲಯಾಳಿ ಸಮಾಜದ ಪ್ರತಿ ಮನೆಗಳಲ್ಲೂ 15 ರಂದು ಬೆಳಿಗ್ಗೆ 4 ಗಂಟೆಗೆ ಮನೆಯ ಯಾಜಮಾನಿ ಹಾಗೂ ಮಹಿಳೆಯರು ಎದ್ದು ಮನೆಸಾರಿಸಿ ಶುಭ್ರಗೊಳಿಸಿ ಸ್ನಾನ ಮಾಡಿದ ನಂತರ ದೇವರ ಕೋಣೆಯಲ್ಲಿ ವಿಶೇಷ ಪೂಜಾ ಕೈಂಕರ್ಯವನ್ನು ಶ್ರದ್ಧಾಭಕ್ತಿಯಂದ ದೇವರಲ್ಲಿ ಪ್ರಾರ್ಥಿಸುತ್ತಾರೆ. ಅನಂತರ ವಿಶು ಹಬ್ಬದ (ಕೊನ್ನಪೂ) ಹೊನ್ನೆಹೂ, ವಿಶು ಕಣಿಗಳಾದ (ಅಡ) ತಿಂಡಿ ವಿವಿಧ ಬಗೆಯ ಹಣ್ಣು ಹಂಪಲು ತರಕಾರಿ ದವಸಧಾನ್ಯ ಬಾಳೆಹಣ್ಣು, ಹಲಸಿನಗುಜೆ, ಚಿನ್ನದಸರ ಹಾಗೂ ನಗದು ರು.ಗಳನ್ನು ದೇವರ ಕೋಣೆಯಲ್ಲಿ ಇರಿಸಿ ಹೊಸವರ್ಷದಿಂದ ಕುಟುಂಬ ವರ್ಗಕ್ಕೆ ಐಶ್ವರ್ಯ ಆರೋಗ್ಯ ನೆಮ್ಮದಿ ನೀಡಿಲೆಂದು ದೇವರಲ್ಲಿ ಪ್ರಾರ್ಥಿಸುತ್ತಾರೆ. ಆನಂತರ ಮನೆಯ ಮಂದಿಯೆಲ್ಲಾ ಸೇರಿ ದೇವರಲ್ಲಿ ಪ್ರಾರ್ಥಿಸುವುದು ವಾಡಿಕೆಯಾಗಿದೆ. ಮಧ್ಯಾಹ್ನ ವಿವಿಧ ಬಗೆಯ ಸಸ್ಯಹಾರಿ ಭೋಜನ ತಯಾರಿಸುವ ಮೂಲಕ ಮನೆಯ ಮಂದಿ ಹಾಗೂ ಬಂಧು ಮಿತ್ರರು ಸೇರಿ ಸ್ವೀಕರಿಸುತ್ತಾರೆ. ಮನೆಯ ಕುಟುಂಬಸ್ಥರಿಗೆ ಮನೆಯ ಬಂಧು ಬಳಗದವರಿಗೆ ಆ ಮನೆಯ ಹಿರಿಯರು ಕಿರುಕಾಣಿಕೆ ಹಣಗಳನ್ನು ನೀಡುವ ಹಿರಿಯರು ಕಿರಿಯರಿಗೆ ಆಶೀರ್ವಾದ ನೀಡುವುದು ವಿಶು ಹಬ್ಬದ ಪದ್ಧತಿ ಸಾಂಪ್ರಾದಾಯಿಕವಾಗಿ ಬೆಳೆದು ಬಂದ ಪದ್ಧತಿಯಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಂದೆಯ ಆಡಳಿತದಲ್ಲಿ ರಾಜ್ಯ ಸುಭಿಕ್ಷವಾಗಲಿ
ಐದು ವರ್ಷ ತಂದೆಯೇ ರಾಜ್ಯ ಮುುನ್ನಡೆಸಲಿ