11ರಂದು ಸೂಪರ್ ಸಂಸಾರ ಹಾಸ್ಯ ನಾಟಕ ಪ್ರದರ್ಶನ: ಡಾ. ಯಶವಂತ ಸರದೇಶಪಾಂಡೆ

KannadaprabhaNewsNetwork | Published : Feb 3, 2024 1:45 AM

ಸಾರಾಂಶ

ಗದುಗಿನ ವಿದ್ಯಾದಾನ ಸಮಿತಿ, ಕಲಾಚೇತನ ಹಾಗೂ ಹುಬ್ಬಳ್ಳಿಯ ಗುರು ಇನ್ಸ್‌ಸ್ಟಿಟ್ಯೂಟ್ ಸಹಯೋಗದಲ್ಲಿ ನಗರದ ವಿದ್ಯಾದಾನ ಸಮಿತಿ ಶಾಲೆ ಆವರಣದಲ್ಲಿ ಫೆ. 11ರಂದು ಸಂಜೆ 6.30ಕ್ಕೆ ಸೂಪರ್ ಸಂಸಾರ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ರಂಗಕಲಾವಿದ, ನಿರ್ದೇಶಕ ಡಾ. ಯಶವಂತ ಸರದೇಶಪಾಂಡೆ ಹೇಳಿದರು.

ಗದಗ: ಗದುಗಿನ ವಿದ್ಯಾದಾನ ಸಮಿತಿ, ಕಲಾಚೇತನ ಹಾಗೂ ಹುಬ್ಬಳ್ಳಿಯ ಗುರು ಇನ್ಸ್‌ಸ್ಟಿಟ್ಯೂಟ್ ಸಹಯೋಗದಲ್ಲಿ ನಗರದ ವಿದ್ಯಾದಾನ ಸಮಿತಿ ಶಾಲೆ ಆವರಣದಲ್ಲಿ ಫೆ. 11ರಂದು ಸಂಜೆ 6.30ಕ್ಕೆ ಸೂಪರ್ ಸಂಸಾರ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ರಂಗಕಲಾವಿದ, ನಿರ್ದೇಶಕ ಡಾ. ಯಶವಂತ ಸರದೇಶಪಾಂಡೆ ಹೇಳಿದರು.

ಅವರು ಗದಗ ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ ಮಾತನಾಡಿದ ಅವರು, ಉದಯವಾಗಲಿ ಚೆಲುವ ಕನ್ನಡ ನಾಡು ಗೀತೆ ರಚಿಸಿದ ನಾಡಕವಿ ಹುಯಿಲಗೋಳ ನಾರಾಯಣರಾವ್ ಸ್ಮರಣಾರ್ಥ ರಂಗ ನಮನ ಸಲ್ಲಿಸಲು ನಗೆ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಗದಗ ನಗರದಲ್ಲಿ ಕಳೆದ 6 ವರ್ಷಗಳ ಹಿಂದೆ ''''ಹೀಗೇಕೆ ನೀ ದೂರ ಓಡುವೆ'''' ನಾಟಕ ಪ್ರದರ್ಶನ ಮಾಡಲಾಗಿತ್ತು. ಈಗ ಸಂತೋಷ ಪವಾರ ಮರಾಠಿಯಲ್ಲಿ ರಚಿಸಿದ ನಾಟಕವನ್ನು ನನ್ನ ನೇತೃತ್ವದಲ್ಲಿ ಕನ್ನಡಕ್ಕೆ ಅನುವಾದಿಸಿ ನಿರ್ದೇಶನ ಮಾಡಿರುವ ಸೂಪರ್ ಸಂಸಾರ ಹಾಸ್ಯ ನಾಟಕವು ಈಗಾಗಲೇ ಹುಬ್ಬಳ್ಳಿ, ಧಾರವಾಡ, ಬೆಂಗಳೂರ, ಬೆಳಗಾವಿ, ಶಿವಮೊಗ್ಗ, ದಾವಣಗೆರೆಯಲ್ಲಿ ಯಶಸ್ವಿ ಪ್ರದರ್ಶನದ ಮೂಲಕ ಪ್ರೇಕ್ಷಕರನ್ನು ರಂಜಿಸಿದೆ ಎಂದರು.ಮದುವೆಯಾದ ಮೇಲೆ ಗಂಡ-ಹೆಂಡತಿ ಪರಸ್ಪರ ಸಂಸಾರವನ್ನು ಹೇಗೆ ಹೊಂದಿಕೊಂಡು ಹೋಗಬೇಕು ಎಂಬುದರ ಮೂಲ ಅಂಶವನ್ನಿಟ್ಟುಕೊಂಡು ಕುರಿತಾಗಿ ನಾಟಕ ಪ್ರದರ್ಶನಗಳನ್ನು ನಡೆಯಲಿದೆ. ನಾಟಕದಲ್ಲಿ ನಾಯಕನಿಗೆ ರಾತ್ರಿ ಕಣ್ಣು ಕಾಣುವುದಿಲ್ಲ, ಹೆಂಡತಿಗೆ ಬೆಳಗ್ಗೆ ಕಣ್ಣು ಕಾಣುವುದಿಲ್ಲ. ಹೀಗಿದ್ದರೂ ನಾಯಕ ನಾಯಕಿಯನ್ನು ಬೆಳಗ್ಗೆ, ನಾಯಕಿ ನಾಯಕನನ್ನು ರಾತ್ರಿ ಹೇಗೆ ಸಂಬಾಳಿಸಿಕೊಂಡು ಹೋಗುತ್ತಾನೆ ಎಂಬ ಸನ್ನಿವೇಶಗಳನ್ನು ಹಾಸ್ಯಮಯವಾಗಿ ತೋರಿಸಲಾಗುತ್ತದೆ ಎಂದು ಹೇಳಿದರು.ಒಂದು ಪ್ರಯೋಗ ಪ್ರದರ್ಶನ ಮಾಡಲು ಕನಿಷ್ಠ 70 ಸಾವಿರ ಖರ್ಚಾಗುತ್ತದೆ. ಹೀಗಾಗಿ ಕಲಾವಿದರಿಗೆ, ತಂತ್ರಜ್ಞರಿಗೆ ಅನುಕೂಲ ಕಲ್ಪಿಸಲು 200ರಿಂದ 300 ಟಿಕೆಟ್ ದರ ನಿಗದಿಪಡಿಸಲಾಗಿದೆ. ಆಸಕ್ತರು ಟಿಕೆಟ್‌ಗಾಗಿ ವಿದ್ಯಾದಾನ ಸಮಿತಿ (7676283552) ಹಾಗೂ ನೇಸರ ಹೋಟೆಲ್ (9008826056) ಸಂಪರ್ಕಿಸಬಹುದು ಎಂದು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ವಿದ್ಯಾದಾನ ಸಮಿತಿ ಕಾರ್ಯದರ್ಶಿ ಶ್ರೀನಿವಾಸ ಹುಯಿಲಗೋಳ ಇದ್ದರು.

Share this article