ಜಿಲ್ಲೆ ಬೇಡಿಕೆಗೆ ತಕ್ಕಂತೆ ಪೂರಕ ಶಿಕ್ಷಣ ಬೇಕಿದೆ

KannadaprabhaNewsNetwork |  
Published : Feb 04, 2025, 12:30 AM IST
3ಕೆಡಿವಿಜಿ2, 3-ದಾವಣಗೆರೆಯಲ್ಲಿ ಜಿಎಂ ವಿಶ್ವ ವಿದ್ಯಾನಿಲಯದಲ್ಲಿ ವೃತ್ತಿಪರ ಮತ್ತು ಕೌಶಲ್ಯ ತರಬೇತಿ ಸರ್ಟಿಫಿಕೇಟ್ ಕಾರ್ಯಕ್ರಮ ಹಾಗೂ  ಜ್ಞಾನ ಸರಣಿ ಶೀರ್ಷಿಕೆಯ 9 ಪುಸ್ತಕ ಬಿಡುಗಡೆ ಸಮಾರಂಭ ಉದ್ಘಾಟಿಸಿದ ಕುಲಾಧಿಪತಿ ಜಿ.ಎಂ.ಲಿಂಗರಾಜು. | Kannada Prabha

ಸಾರಾಂಶ

ಜಿಲ್ಲೆಯ ಸಮಗ್ರ ಬೇಡಿಕೆಗೆ ಅನುಸಾರ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಸುಮಾರು 900 ಗ್ರಾಮ, 117 ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ತಾಂತ್ರಿಕತೆ ವಿಚಾರದಲ್ಲಿ ಸ್ಥಳೀಯ ಬೇಡಿಕೆಗಳನ್ನು ಪೂರೈಸುವ ಕೆಲಸ ಮಾಡಬೇಕಿದೆ ಎಂದು ಜಿ.ಎಂ. ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್.ಆರ್. ಶಂಕಪಾಲ್ ಹೇಳಿದ್ದಾರೆ.

- ಜಿಎಂ ವಿ.ವಿ.ಯಲ್ಲಿ ಬಿ.ವೋಕ್ ಡಿಗ್ರಿ ಕಾರ್ಯಕ್ರಮದಲ್ಲಿ ಕುಲಪತಿ ಡಾ. ಎಸ್‌.ಆರ್‌. ಶಂಕಪಾಲ್‌ ಸಲಹೆ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಜಿಲ್ಲೆಯ ಸಮಗ್ರ ಬೇಡಿಕೆಗೆ ಅನುಸಾರ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಸುಮಾರು 900 ಗ್ರಾಮ, 117 ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ತಾಂತ್ರಿಕತೆ ವಿಚಾರದಲ್ಲಿ ಸ್ಥಳೀಯ ಬೇಡಿಕೆಗಳನ್ನು ಪೂರೈಸುವ ಕೆಲಸ ಮಾಡಬೇಕಿದೆ ಎಂದು ಜಿ.ಎಂ. ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್.ಆರ್. ಶಂಕಪಾಲ್ ಹೇಳಿದರು.

ನಗರದ ಜಿಎಂ ವಿಶ್ವವಿದ್ಯಾನಿಲಯದ ವೃತ್ತಿಪರ ಮತ್ತು ಕೌಶಲ್ಯ ತರಬೇತಿ ವಿಭಾಗದಿಂದ 2024-25ನೇ ಶೈಕ್ಷಣಿಕ ಸಾಲಿನ ಬಿ.ವೋಕ್ ಡಿಗ್ರಿ ಕಾರ್ಯಕ್ರಮ ಮತ್ತು ವೃತ್ತಿಪರ ಕೌಶಲ್ಯ ತರಬೇತಿ ಸರ್ಟಿಫಿಕೆಟ್ ಕಾರ್ಯಕ್ರಮ ಹಾಗೂ ಜಿಎಂವಿವಿ ಜ್ಞಾನ ಸರಣಿ ಶೀರ್ಷಿಕೆಯಡಿ ಜನೋಪಯುಕ್ತವಾಗುವ ವಿವಿಧ ವಿಷಯಕ್ಕೆ ಸಂಬಂಧಿಸಿದ ಒಟ್ಟು 9 ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿಶ್ವವಿದ್ಯಾಲಯಗಳು ಪದವೀಧರರನ್ನು ರೂಪಿಸುವ ಜೊತೆಗೆ ಸ್ಥಳೀಯ ಬೇಡಿಕೆಗಳ ಆಧಾರದಲ್ಲಿ ಯೋಗ್ಯ ಮಾನವ ಸಂಪನ್ಮೂಲ ಸೃಜೀಸುವ ಶಕ್ತಿ ಕೇಂದ್ರಗಳಾಗಬೇಕು. ಜಿಎಂ ವಿಶ್ವವಿದ್ಯಾಲಯ ಅದೇ ಆಧಾರದಲ್ಲಿ ಕಟ್ಟುತ್ತಿದ್ದೇವೆ. ಜಿಲ್ಲೆಯ ಸಮಗ್ರ ಬೇಡಿಕೆಗೆ ಅನುಸಾರ ಶಿಕ್ಷಣ ಒದಗಿಸುವ ಕೆಲಸ ಮಾಡುತ್ತಿದ್ದೇವೆ. ಹೊಸ ಹೊಸ ಯಂತ್ರೋಪಕರಣ ಬರುತ್ತಿದ್ದು, ಅವುಗಳನ್ನು ಸರಿಯಾಗಿ ಹೇಗೆ ಬಳಸಬೇಕೆಂಬ ಜ್ಞಾನವುಳ್ಳ ತಂತ್ರಜ್ಞರ ಕೊರತೆ ಇದೆ ಎಂದರು.

ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಶಿವಕುಮಾರ ಮಲ್ಲಾಡ್ ಮಾತನಾಡಿ, ಜಿಎಂ ವಿವಿ ಎಲೆಕ್ಟ್ರಿಕಲ್‌ ವೆಹಿಕಲ್‌ಗೆ ಸಂಬಂಧಿಸಿದಂತೆ ಪದವಿ ಕೋರ್ಸ್ ಆರಂಭಿಸಿದೆ. ರಾಜ್ಯದಲ್ಲಿ ಈ ಪದವಿ ಆರಂಭಿಸಿದ ಮೊದಲ ವಿ.ವಿ.ಯಾಗಿದೆ. ಈ ರೀತಿಯಾದಂತೆ ಕೌಶಲ್ಯ ಅಭಿವೃದ್ಧಿ ಪದವಿ ಆರಂಭಿಸಿದ್ದಕ್ಕೆ ರಾಜ್ಯ ಸರ್ಕಾರ ಮತ್ತು ಕೌಶಲ್ಯ ಅಭಿವೃದ್ಧಿ ಇಲಾಖೆ ಪರವಾಗಿ ಅಭಿನಂದಿಸುತ್ತೇವೆ. ಇಲಾಖೆಯಿಂದ ಹೊಸ ಆವಿಷ್ಕಾರದ ಈ ವಿ.ವಿ.ಯನ್ನು ತರಬೇತಿ ಪಾಲುದಾರನಾಗಿ ತೆಗೆದುಕೊಳ್ಳಲಾಗುವುದು. ಆಗ ವಿ.ವಿ. ತರಬೇತಿ ಕೇಂದ್ರ ನಡೆಸಲು ಅವಕಾಶ ನೀಡಬಹುದು. ವಿ.ವಿ.ಯಿಂದಲೇ ತರಬೇತಿ ಕೇಂದ್ರ ನಡೆಸಬಹುದು. ಸಣ್ಣ ಕಾಲೇಜುಗಳಿಗೆ ತರಬೇತಿ ಪಾಲುದಾರನೂ ಆಗಬಹುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಕುಲಾಧಿಪತಿ ಜಿ.ಎಂ. ಲಿಂಗರಾಜು ಮಾತನಾಡಿ, ವೃತ್ತಿಪರ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮವು ಬಿಕಾಂ, ಬಿಇ ವಿದ್ಯಾಭ್ಯಾಸದಷ್ಟೇ ಸಮನವಾಗಿ ಮುಂದೆ ಸಾಗಬೇಕು. ತರಬೇತಿಯಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಸೇರಿದಂತೆ ಯಾವುದೇ ವಿದ್ಯಾರ್ಹತೆ ಬೇಕಿಲ್ಲ. ಆಸಕ್ತಿಯುಳ್ಳವರಿಗೆ ತರಬೇತಿ ನೀಡಿ, ಅನಭವಿಗಳನ್ನಾಗಿಸುವ ಕೇಂದ್ರವಾಗಬೇಕು ಎಂದರು.

ಟಾಟಾ ಮೋಟಾರ್ಸ್‌ನ ಜನರಲ್ ಮ್ಯಾನೇಜರ್ ಸಿ.ಎ. ಕಿರಣಕುಮಾರ, ಸಹ ಕುಲಪತಿ ಡಾ. ಎಚ್.ಡಿ.ಮಹೇಶಪ್ಪ, ಕುಲ ಸಚಿವ ಡಾ. ಬಿ.ಎಸ್. ಸುನೀಲಕುಮಾರ, ಸಂಸ್ಥೆ ನಿರ್ದೇಶಕ ಡಾ. ಬಿ.ಆರ್‌. ಶ್ರೀಧರ್, ವಿವಿಧ ವಿಭಾಗಗಳ ಮುಖ್ಯಸ್ಥರು, ಡೀನ್‌ಗಳು, ನಿರ್ದೇಶಕರು, ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು. ಜಿಎಂವಿವಿ ಕುಲಪತಿ ಡಾ. ಎಸ್.ಆರ್. ಶಂಕಪಾಲ್ ಅವರ 4 ಪುಸ್ತಕ, ಜಿಎಂ ಇನ್‌ಸ್ಟಿಟ್ಯೂಟ್ ಆಫ್ ಫಾರ್ಮಸುಟಿಕಲ್ ಸೈನ್ಸ್ ಅಂಡ್ ರೀಸರ್ಚ್ ವಿಭಾಗದ 4 ಪುಸ್ತಕ, ಡಾ.ಉಮಾ ಮುರಳೀಧರ್‌ ಅವರ ಒಂದು ಪುಸ್ತಕವನ್ನು ಕುಲಾಧಿಪತಿ ಜಿ.ಎಂ. ಲಿಂಗರಾಜು, ಅತಿಥಿಗಳು ಬಿಡುಗಡೆ ಮಾಡಿದರು.

- - - -3ಕೆಡಿವಿಜಿ2, 3.ಜೆಪಿಜಿ: ಸಮಾರಂಭದಲ್ಲಿ ಕುಲಾಧಿಪತಿ ಜಿ.ಎಂ. ಲಿಂಗರಾಜು ಅವರು ಜಿಎಂವಿವಿ ಕುಲಪತಿ ಡಾ. ಎಸ್.ಆರ್. ಶಂಕಪಾಲ್ ಅವರ 4 ಪುಸ್ತಕ, ಜಿಎಂ ಇನ್‌ಸ್ಟಿಟ್ಯೂಟ್ ಆಫ್ ಫಾರ್ಮಸುಟಿಕಲ್ ಸೈನ್ಸ್ ಅಂಡ್ ರೀಸರ್ಚ್ ವಿಭಾಗದ 4 ಪುಸ್ತಕ, ಡಾ.ಉಮಾ ಮುರಳೀಧರ್‌ ಅವರ ಒಂದು ಪುಸ್ತಕವನ್ನು ಬಿಡುಗಡೆ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು