ಯುವಜನರ ಉದ್ಯೋಗಕ್ಕೆ ಪೂರಕ ತರಬೇತಿ ಅಗತ್ಯ: ರಮೇಶ್‌ ಬಂಡಿಸಿದ್ದೇಗೌಡ

KannadaprabhaNewsNetwork |  
Published : Jan 18, 2026, 01:30 AM IST
17ಕೆಎಂಎನ್‌ಡಿ-8ಶ್ರೀರಂಗಪಟ್ಟಣದ ಭಗವಾನ್ ಮಹಾ ವೀರ ಭವನದಲ್ಲಿ ಧರ್ಮಸ್ಥಳ ಸಂಸ್ಥೆ ಆಯೋಜಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಶಾಸಕ ರಮೇಶ ಬಂಡಿ ಸಿದ್ದೇಗೌಡ ಮಾತನಾಡಿದರು. | Kannada Prabha

ಸಾರಾಂಶ

ಕಳೆದ 12 ವರ್ಷದಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಶ್ರೀಕ್ಷೇತ್ರ ಧರ್ಮಸ್ಥಳ ಸಂಸ್ಥೆ ಇಂದಿನ ಯುವಕ, ಯುವತಿಯರಿಗೆ ಉದ್ಯೋಗಕ್ಕೆ ಪೂರಕವಾದ ತರಬೇತಿ ನೀಡುತ್ತಾ ಬಂದಿದೆ. ಈ ಭಾಗದಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ಉತ್ತಮ ಕೆಲಸ ಮಾಡುತ್ತಾ ಬಂದಿದೆ. ಇದಕ್ಕೆ ಬೆಂಬಲವಾಗಿ ನನ್ನಿಂದ ಸಾಧ್ಯವಾದಷ್ಟು ಸಹಕಾರ ನೀಡುತ್ತೇನೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಇಂದಿನ ಯುವ ಜನಾಂಗಕ್ಕೆ ಉದ್ಯೋಗದ ಪೂರಕ ತರಬೇತಿಗಳನ್ನು ಅಗತ್ಯವಾಗಿ ನೀಡುವ ಕೆಲಸವನ್ನು ಶ್ರೀಧರ್ಮಸ್ಥಳ ಸಂಸ್ಥೆ ಮಾಡುತ್ತಿದೆ ಎಂದು ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಹೇಳಿದರು.

ಪಟ್ಟಣದ ಭಗವಾನ್ ಮಹಾವೀರ ಭವನದಲ್ಲಿ ಧರ್ಮಸ್ಥಳ ಸಂಸ್ಥೆ ಆಯೋಜಿಸಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಳೆದ 12 ವರ್ಷದಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಶ್ರೀಕ್ಷೇತ್ರ ಧರ್ಮಸ್ಥಳ ಸಂಸ್ಥೆ ಇಂದಿನ ಯುವಕ, ಯುವತಿಯರಿಗೆ ಉದ್ಯೋಗಕ್ಕೆ ಪೂರಕವಾದ ತರಬೇತಿ ನೀಡುತ್ತಾ ಬಂದಿದೆ. ಈ ಭಾಗದಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ಉತ್ತಮ ಕೆಲಸ ಮಾಡುತ್ತಾ ಬಂದಿದೆ. ಇದಕ್ಕೆ ಬೆಂಬಲವಾಗಿ ನನ್ನಿಂದ ಸಾಧ್ಯವಾದಷ್ಟು ಸಹಕಾರ ನೀಡುತ್ತೇನೆ. ಸರ್ಕಾರ ಸಹ ಮಹಿಳೆಯರಿಗಾಗಿ ಅನೇಕ ಕಾರ್ಯಕ್ರಮ ನೀಡಿದ್ದು, ಇದರ ಸದುಪಯೋಗ ಪಡೆಯಬೇಕು ಎಂದರು.

ರಂಗನಾಯಕಿ ಸ್ತ್ರೀ ಸಮಾಜದ ಮಾಜಿ ಅಧ್ಯಕ್ಷೆ ಆಶಾಲತಾ ಪುಟ್ಟೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕಿ ಮಮತರಾವ್, ಸಂಪನ್ಮೂಲ ವ್ಯಕ್ತಿ ಹಾಗೂ ಸಾರ್ಜನಿಕ ಸ್ಪತ್ರೆಯ ವೈದ್ಯಾಧಿಕಾರಿ ಡಾ.ಸವಿತಾ, ಇವರು ಮಹಿಳೆಯರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಟೌನ್ ಪೊಲೀಸ್ ಠಾಣೆಯ ಸಿಪಿಐ ಬಿ.ಜಿ.ಕುಮಾರ್, ವಕೀಲೆ ಕೃಪಶ್ರೀ, ಮೂಕಾಂಬಿಕಾ ಜ್ಞಾನ ವಿಕಾಸ ಯೋಜನಾಧಿಕಾರಿ ಗಾಯತ್ರಿ ದೇವಿ, ನಳಿನಾ, ಯೋಜನಾಧಿಕಾರಿ, ಗಣಪತಿ ಭಟ್ಟ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸಂಗೀತಾ, ಭಾಗ್ಯ, ಅಶ್ವಿನಿ, ಆಶಾರಾಣಿ ಉಪಸ್ಥಿತರಿದ್ದರು. ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ನೃತ್ಯ, ಹಾಡು, ಕಥೆ ಬರೆಯುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ನಾಳೆ ತ್ಯಾಗರಾಜರ ಆರಾಧನಾ ಮಹೋತ್ಸವ

ಮಂಡ್ಯ: ಜಿಲ್ಲಾ ಮಂಗಳವಾದ್ಯ ಕಲಾವಿದರ ಸಂಘದಿಂದ ಇಲ್ಲಿನ ಅರ್ಕೇಶ್ವರ ನಗರದ ಶ್ರೀಅರಕೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಜ.19ರಂದು ಏಳನೇ ವರ್ಷದ ತ್ಯಾಗರಾಜರ ಆರಾಧನಾ ಮಹೋತ್ಸವ ಆಯೋಜಿಸಲಾಗಿದೆ. ಇದರ ಅಂಗವಾಗಿ ಮಧ್ಯಾಹ್ನ 12 ರಿಂದ ಶ್ರೀಲಂಕಾದ ನಾದಸ್ವರ ತಂಡದಿಂದ ವಿಶೇಷ ನಾದಸ್ವರ ಕಚೇರಿಯನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಂಡ್ಯ ಯೂತ್‌ ಗ್ರೂಪ್‌ ಅಧ್ಯಕ್ಷ ಡಾ.ಅನಿಲ್‌ ಆನಂದ್‌ ಭಾಗವಹಿಸುವರು. ಶ್ರೀಲಂಕಾದಲ್ಲಿರುವ ಜಾಫ್ನಾದ ಕೋನಿಡಾವಿಲೂರುವಿನ ಎಸ್‌.ಯು.ಬೃಂದಾವನ್‌, ಕೆ.ಪಿ.ಕುಮರನ್‌, ಕೆ.ಪಿ.ಕೆ.ಸಾಸ್ವಕನ್‌, ಇಣುವಿಲೂರಿನ ಕೆ.ಪಿ.ವಿಪೂರ್ಣನ್‌, ಶ್ರೀಕಾಂತ್‌, ಕೊಂಡವಿಲ್‌ನ ಆರ್‌.ಶಿವಹರನ್‌ ನಾದಸ್ವರ ಕಚೇರಿಯನ್ನು ನಡೆಸಿಕೊಡಲಿದ್ದಾರೆ. ಅಂದು ಬೆಳಗ್ಗೆ 7 ಗಂಟೆಗೆ ಗುತ್ತಲು ರಾಜಬೀದಿಗಳಲ್ಲಿ ತ್ಯಾಗರಾಜರ ಭಾವಚಿತ್ರ, ಮತ್ತು ಹಳೇಊರು ಗುತ್ತಲು ಶ್ರೀ ಬೋರೇದೇವರ ಬಸಪ್ಪನವರ ಉತ್ಸವ ಜರುಗಲಿದೆ. ಅಂದು ಮಧ್ಯಾಹ್ನ ಅನ್ನಸಂತರ್ಪಣಾ ಕಾರ್ಯಕ್ರಮವೂ ನೆರವೇರಲಿದೆ. ಜ.18ರಂದು ಸಂಜೆ 6 ಗಂಟೆಗೆ ಗುತ್ತಲು ಗ್ರಾಮದ ರಾಜಬೀದಿಗಳಲ್ಲಿ ಶ್ರೀ ಅರಕೇಶ್ವರಸ್ವಾಮಿ ಉತ್ಸವ ನಡೆಯಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜ.೨೭ಕ್ಕೆ ಕೆ.ಆರ್.ಪೇಟೆಗೆ ನಿಖಿಲ್ ಆಗಮನ: ಶಾಸಕ ಎಚ್.ಟಿ.ಮಂಜು
ರಸ್ತೆ ಸುರಕ್ಷತಾ ನಿಯಮ ಉಲ್ಲಂಘನೆ ಶಿಕ್ಷಾರ್ಹ: ನ್ಯಾ.ಕ್ರಾಂತಿ ಕಿರಣ್