ಪ್ರತಿ ಮನೆ-ಮನೆಗೂ ಶುದ್ಧ ಕುಡಿಯುವ ನೀರು ಪೂರೈಕೆ: ರತ್ನಮ್ಮ

KannadaprabhaNewsNetwork | Published : May 4, 2025 1:35 AM

ಸಾರಾಂಶ

ಬೀರೂರುಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವ ಯೋಜನೆಗಳಲ್ಲಿ ಒಂದಾದ ಜಲಜೀವನ್ ಮಿಷನ್ ಯೋಜನೆಯಡಿ ಗ್ರಾಮದ ಪ್ರತಿ ಹಳ್ಳಿಗಳ ಮನೆ-ಮನೆಗಳಿಗೂ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತದೆ. ಗುತ್ತಿಗೆದಾರರು ಗುಣಮಟ್ಟ ದೊಂದಿಗೆ ನಿಗದಿತ ವೇಳೆಯಲ್ಲಿ ಕಾಮಗಾರಿ ಮುಗಿಸಬೇಕು. ಗ್ರಾಮ ಪಂಚಾಯ್ತಿಯಿಂದ ಎಲ್ಲಾ ರೀತಿ ಸಹಕಾರ ನೀಡುತ್ತೇನೆ ಎಂದು ಬಳ್ಳಿಗನೂರು ಗ್ರಾ.ಪಂ.ಅಧ್ಯಕ್ಷೆ ರತ್ಮಮ್ಮ ಹೇಳಿದರು

₹ 85ಲಕ್ಷ ಕಾಮಗಾರಿಗೆ ಚಾಲನೆ । ಹೋಗರೇಹಳ್ಳಿ ಗ್ರಾಮದಲ್ಲಿ ಜಲಜೀವನ್ ಮಿಷನ್ ಕಾಮಗಾರಿಗೆ ಭೂಮಿ ಪೂಜೆ

ಕನ್ನಡಪ್ರಭ ವಾರ್ತೆ, ಬೀರೂರುಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವ ಯೋಜನೆಗಳಲ್ಲಿ ಒಂದಾದ ಜಲಜೀವನ್ ಮಿಷನ್ ಯೋಜನೆಯಡಿ ಗ್ರಾಮದ ಪ್ರತಿ ಹಳ್ಳಿಗಳ ಮನೆ-ಮನೆಗಳಿಗೂ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತದೆ. ಗುತ್ತಿಗೆದಾರರು ಗುಣಮಟ್ಟ ದೊಂದಿಗೆ ನಿಗದಿತ ವೇಳೆಯಲ್ಲಿ ಕಾಮಗಾರಿ ಮುಗಿಸಬೇಕು. ಗ್ರಾಮ ಪಂಚಾಯ್ತಿಯಿಂದ ಎಲ್ಲಾ ರೀತಿ ಸಹಕಾರ ನೀಡುತ್ತೇನೆ ಎಂದು ಬಳ್ಳಿಗನೂರು ಗ್ರಾ.ಪಂ.ಅಧ್ಯಕ್ಷೆ ರತ್ಮಮ್ಮ ಹೇಳಿದರು.ಶುಕ್ರವಾರ ಬಳ್ಳಿಗನೂರು ಗ್ರಾಪಂ ವ್ಯಾಪ್ತಿಯ ಹೊಗರೇಹಳ್ಳಿ ಗ್ರಾಮದಲ್ಲಿ ₹85ಲಕ್ಷ ವೆಚ್ಚದ ಜಲಜೀವನ್ ಮಿಷನ್ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಗುತ್ತಿಗೆದಾರರು ಪೈಪ್ ಲೈನ್ ಅಳವಡಿಸುವಾಗ ಅಕ್ಕ-ಪಕ್ಕದ ಮನೆಗಳಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸಬೇಕು.ಇದಕ್ಕೆ ಗ್ರಾಮಸ್ಥರು ಸಹಕರಿಸಬೇಕು ಎಂದರು.

ಹೊಗರೇಹಳ್ಳಿ ಗ್ರಾಮದಲ್ಲಿ ಒಟ್ಟು 600ಕ್ಕೂ ಹೆಚ್ಚು ಮನೆಗಳಿದ್ದು ಎಲ್ಲಾ ಮನೆಗಳಿಗೂ ಶುದ್ಧ ಕುಡಿಯುವ ನೀರಿನ ನಲ್ಲಿ ಅಳವಡಿಸಿ ನೀರನ್ನು ನೀಡಲಾಗುವುದು. ಮಹಾತ್ಮ ಗಾಂಧೀಜಿ ಆಶಯದಂತೆ ಗ್ರಾಮಗಳು ಉದ್ಧಾರವಾದರೆ ಮಾತ್ರ ದೇಶ ಸುಭದ್ರ ವಾಗಿರುತ್ತದೆ ಎನ್ನುವ ನಿಟ್ಟಿನಲ್ಲಿ ಶಾಸಕರು ಅತ್ಯುತ್ತಮ ಕೆಲಸ ಮತ್ತು ಕಾಮಗಾರಿಗಳನ್ನು ಮಾಡಿಸುವ ಮೂಲಕ ಹಳ್ಳಿಗಳ ಏಳಿಗೆಗೆ ಶ್ರಮಿಸುತ್ತಿರುವುದು ಸಂತಸ ತಂದಿದೆ ಎಂದರು.

ಹೊಗರೇಹಳ್ಳಿ ತಾ.ಪಂ.ಮಾಜಿ ಸದಸ್ಯ ಶಶಿಕುಮಾರ್ ಮಾತನಾಡಿ, ಶಾಸಕರು ಚುನಾವಣಾ ಸಂದರ್ಭದಲ್ಲಿ ನೀಡಿದ್ದ ಭರವಸೆ ಪೂರೈಕೆ ಮಾಡುತ್ತಾ ನುಡಿದಂತೆ ನಡೆಯುತ್ತಿದ್ದಾರೆ. ರೈತಾಪಿ ವರ್ಗದವರೇ ಹೆಚ್ಚು ಇರುವ ಈ ಗ್ರಾಮಕ್ಕೆ ಅನೇಕ ರಸ್ತೆ, ಮತ್ತಿತರ ಅಭಿವೃದ್ಧಿ ಕಾಮಗಾರಿ ಸಮಸ್ಯೆಗಳಿದ್ದವು. ಅವುಗಳ ಪರಿಹಾರಕ್ಕೆ ಅವರ ಅನುದಾನದಲ್ಲಿ ಲಕ್ಷ್ಮೀ ರಂಗನಾಥಸ್ವಾಮಿ ದೇಗುಲ ಜೀರ್ಣೋದ್ದಾರಕ್ಕಾಗಿ ₹5ಲಕ್ಷ, ಗಿರಿಸಿದ್ದೇಶ್ವರ ಸ್ವಾಮಿ ದೇವಾಲಯಕ್ಕೆ ₹ 5ಲಕ್ಷ ಹಾಗೂ ಹಲವು ವರ್ಷಗಳ ರಸ್ತೆ ಬೇಡಿಕೆಯಾದ ಹೊಗರೇಖಾನ್ ಗಿರಿ ದೇಗುಲಕ್ಕೆ ಸಾಗುವ ರಸ್ತೆಗೆ ಅನುದಾನ ನೀಡಿ ಸದ್ಯ ಕಾಮಗಾರಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ತಾಲೂಕಿಗೆ ಮಾದರಿ ಗ್ರಾಮವನ್ನಾಗಿಸುವ ಕನಸು ನನಸಾಗಲಿದೆ ಅವರ ಅರ್ಥಪೂರ್ಣ ಕಾಮಗಾರಿಗಳಿಗೆ ಗ್ರಾಮದಿಂದ ಧನ್ಯವಾದಗಳು ಎಂದರು.ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯರಾದ ಸುರೇಶ್, ರಾಘವೇಂದ್ರ, ಮುಖಂಡರಾದ ಮಿಥುನ್, ದೇವರಾಜ್, ಸುರೇಶ್ ಗೌಡ್ರು, ಪ್ರಹ್ಲಾದ್, ಸೇರಿದಂತೆ ಊರಿನ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.2 ಬೀರೂರು 9ಬೀರೂರು ಹೋಬಳಿ ಹೊಗರೇಹಳ್ಳಿ ಗ್ರಾಮದಲ್ಲಿನ ₹85ಲಕ್ಷದ ಜಲಜೀವನ್ ಮಿಷನ್ ಕಾಮಗಾರಿಗೆ ಬಳ್ಳಿಗನೂರು ಗ್ರಾ.ಪಂ. ಅಧ್ಯಕ್ಷೆ ರತ್ನಮ್ಮ ಭೂಮಿಪೂಜೆ ನೆರವೇರಿಸಿದರು. ಮುಖಂಡರಾದ ಶಶಿಕುಮಾರ್, ಗ್ರಾ.ಪಂ.ಸದಸ್ಯರಾದ ಸುರೇಶ್, ರಾಘವೇಂದ್ರ ಇದ್ದರು.

Share this article