ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಸಮೀಪದ ತೊರೆಬೊಮ್ಮನಹಳ್ಳಿಯಲ್ಲಿ ಮಂಡ್ಯ ಜಿಲ್ಲಾ ಸಹಕಾರಿ ಕೇಂದ್ರ (ಎಂಡಿಸಿಸಿ) ಬ್ಯಾಂಕ್ ಆಡಳಿತ ಮಂಡಳಿ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಜೊತೆಗೂಡಿ ಸಹಕಾರಿಗಳ ಜೊತೆ ಸಮಾಲೋಚನ ಸಭೆ ನಡೆಸಿ ಮಾತನಾಡಿದರು.
ಸಹಕಾರಿ ಬಂಧುಗಳು ವಿಪಕ್ಷಗಳ ಯಾವುದೇ ಆಮಿಷಗಳಿಗೆ ಒಳಗಾಗದೆ ಮದ್ದೂರು ತಾಲೂಕಿನ ಮೂರು ಕ್ಷೇತ್ರಗಳ ಮಂಡ್ಯ ಜಿಲ್ಲಾ ಕೈಗಾರಿಕಾ ಸಹಕಾರ ಇತರೆ ಸಂಘಗಳ ಪರಿಷತ್ತಿನ ಹಾಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಸಿ ಜೋಗಿಗೌಡ, ಮಂಡ್ಯ ವಿಭಾಗದ (ಮಂಡ್ಯ, ಮದ್ದೂರು, ಮಳವಳ್ಳಿ) ಹಾಲು ಉತ್ಪಾದಕರ ಸಹಕಾರ ಸಂಘಗಳ ವತಿಯಿಂದ ಸ್ಪರ್ಧಿಸಿರುವ ಸಿ.ಚೆಲುವರಾಜು ಹಾಗೂ ಮದ್ದೂರು ತಾಲೂಕಿನ ವ್ಯವಸಾಯೋತ್ಪಾನ ಕೃಷಿ ಪತ್ತಿನ ಸಹಕಾರ ಸಂಘಗಳ ಹಾಲಿ ನಿರ್ದೇಶಕ ಸಂದರ್ಶ ಅವರನ್ನು ಹೆಚ್ಚಿನ ಮತ ನೀಡಿ ಗೆಲ್ಲಿಸಬೇಕು ಎಂದು ಕೋರಿದರು.ತಾಲೂಕಿನಿಂದ ಮೂವರು ನಿರ್ದೇಶಕರು ಆಯ್ಕೆಯಾದರೆ ಕೈಗಾರಿಕಾ ಹಾಗೂ ಇತರೆ ಸಹಕಾರಿ ಸಂಘಗಳು, ಡೇರಿಗಳು, ಹಾಗೂ ವ್ಯವಸಾಯೋತ್ಪನ್ನ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಬ್ಯಾಂಕ್ ಗಳ ಮೂಲಕ ಸಾಲ ಸೌಲಭ್ಯ ಬಳಸಿಕೊಂಡು ಗ್ರಾಮೀಣ ಭಾಗದ ರೈತರು, ಸಹಕಾರಿಗಳ ಆರ್ಥಿಕ ಪ್ರಗತಿಗೆ ನೆರವಾಗಬಹುದು ಎಂದರು.
ಕೆ.ಎಂ.ಉದಯ್ ಶಾಸಕರಾದ ನಂತರ ವಿಎಸ್‌ಎಸ್‌ಎನ್ ಸಹಕಾರ ಸಂಘಗಳು ಹಾಗೂ ಡೇರಿ ಕಟ್ಟಡ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ನೀಡಿದ್ದಾರೆ. ತಾಲೂಕಿನ ಮೂರು ಕ್ಷೇತ್ರದಿಂದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿರುವ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಹೆಚ್ಚಿನ ಮತ ನೀಡಿ ಗೆಲ್ಲಿಸುವ ಮೂಲಕ ಶಾಸಕರ ಕೈ ಬಲಪಡಿಸಬೇಕು ಎಂದರು.