ದೇಶದ ಉತ್ತಮ ಭವಿಷ್ಯಕ್ಕಾಗಿ ಬಿಜೆಪಿ ಬೆಂಬಲಿಸಿ: ವಿ.ಸೋಮಣ್ಣ

KannadaprabhaNewsNetwork |  
Published : Apr 07, 2024, 01:45 AM IST
೬ ಟಿವಿಕೆ ೧ - ತುರುವೇಕೆರೆ ತಾಲೂಕಿನಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ ಮುಖಂಡರು. | Kannada Prabha

ಸಾರಾಂಶ

ದೇಶದ ಉತ್ತಮ ಭವಿಷ್ಯ ಹಾಗೂ ದೇಶದ ಜನರು ಸ್ವಾಭಿಮಾನಿಗಳಾಗಿ ಬದುಕುವ ಸಲುವಾಗಿ ಬಿಜೆಪಿಯನ್ನು ಬೆಂಬಲಿಸಿ ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಮನವಿ ಮಾಡಿಕೊಂಡಿದ್ದಾರೆ.

|ಕನ್ನಡಪ್ರಭ ವಾರ್ತೆ ತುರುವೇಕೆರೆ

ದೇಶದ ಉತ್ತಮ ಭವಿಷ್ಯ ಹಾಗೂ ದೇಶದ ಜನರು ಸ್ವಾಭಿಮಾನಿಗಳಾಗಿ ಬದುಕುವ ಸಲುವಾಗಿ ಬಿಜೆಪಿಯನ್ನು ಬೆಂಬಲಿಸಿ ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಮನವಿ ಮಾಡಿಕೊಂಡರು.

ತಾಲೂಕಿನಲ್ಲಿ ಪ್ರಚಾರ ನಡೆಸಿಮಾತನಾಡಿದರು. ದೇಶವಿದ್ದರೆ ನಾವು ಎಂಬ ಭಾವನೆ ದೇಶದಾದ್ಯಂತ ಬಂದಿದೆ. ಮುಂಬರು ವ ದಿನಗಳಲ್ಲಿ ಬಿಜೆಪಿಗೆ ೪೦೦ಕ್ಕೂ ಹೆಚ್ಚು ಸ್ಥಾನ ಲಭಿಸಲಿದೆ. ಬಿಜೆಪಿಯೇ ಸರ್ಕಾರ ರಚನೆ ಮಾಡಲಿದೆ. ಹಾಗಾಗಿ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆದ್ದರೆ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡಲು ಸಹಕಾರವಾಗಲಿದೆ ಎಂದು ವಿ.ಸೋಮಣ್ಣ ಹೇಳಿದರು. ಜಿಲ್ಲೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಗ್ಗಟ್ಟಾಗಿರುವುದು ಕಾಂಗ್ರೆಸ್ ಗೆ ನುಂಗಲಾರದ ತುತ್ತಾಗಿದೆ. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಪಣತೊಟ್ಟಿರುವ ತಮ್ಮೊಂದಿಗೆ ಎರಡೂ ಪಕ್ಷಗಳ ಕಾರ್ಯಕರ್ತರು ದುಡಿಯುತ್ತಿದ್ದಾರೆ. ಚುನಾವಣೆಯಲ್ಲಿ ಗೆದ್ದ ಬಳಿಕ ಜಿಲ್ಲೆಯ ಪ್ರತಿಯೊಂದು ಹೋಬಳಿಗೂ ಭೇಟಿ ನೀಡಿ ಜನಸಾಮಾನ್ಯರ ಕಷ್ಟ ಸುಖಗಳನ್ನು ವಿಚಾರಿಸುವುದಾಗಿ ಹೇಳಿದರು.

ಬರಗಾಲ -

ಸಿದ್ದರಾಮಯ್ಯ ಯಾವಾಗ ಮುಖ್ಯಮಂತ್ರಿ ಆದಾಗಲೂ ಬರಗಾಲ ಕಟ್ಟಿಟ್ಟ ಬುತ್ತಿ. ಕಳೆದ ಬಾರಿ ಮುಖ್ಯಮಂತ್ರಿ ಆಗಿದ್ದಾಗಲೂ ಬರಗಾಲ ಇತ್ತು. ಈಗಂತೂ ಕೇಳುವಂತೆಯೇ ಇಲ್ಲ. ಭೀಕರತೆ ತಾಂಡವಾಡುತ್ತಿದೆ. ಕುಡಿಯುವ ನೀರಿಗೂ ಹಾಹಾಕಾರವಿದೆ. ಇಂತಹ ಬರಗಾಲದಲ್ಲಿ ಬದುಕುವುದೇ ದುಸ್ಥರವಾಗಿದೆ. ಮಟಾಶ್ ಲೆಗ್ -

ವಿ.ಸೋಮಣ್ಣ ನವರು ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗಲೆಲ್ಲಾ ಬರಗಾಲ ಇರುತ್ತೆ ಅಂದಾಗ ಮುಂದೆ ನೆರೆದಿದ್ದ ಕಾರ್ಯಕರ್ತರು ಸಿದ್ದರಾಮಯ್ಯನವರದ್ದು ಮಟಾಶ್ ಲೆಗ್ ಎಂದು ಗೇಲಿ ಮಾಡಿದರು. ಸ್ಥಗಿತಕ್ಕೆ ಆಗ್ರಹ -

ತಾಲೂಕಿನ ಬಾಣಸಂದ್ರದ ಸುತ್ತಮುತ್ತ ಗಣಿಗಾರಿಕೆ ನಡೆಸುವ ಸಂಬಂಧ ಬಂದಿರುವ ವದಂತಿಯಿಂದ ಸುತ್ತಮುತ್ತಲ ಗ್ರಾಮ ಸ್ಥರು ಆತಂಕರಾಗಿದ್ದಾರೆ. ಇದು ನಮ್ಮ ಗಮನಕ್ಕೆ ಬಂದಿದೆ. ತಾವು ಜನರೊಂದಿಗೆ ಇರುವ ಭರವಸೆ ನೀಡಿದ ಅವರು, ಗಣಿಗಾರಿಕೆ ನಡೆಸದಂತೆ ತಾವು ಆಗ್ರಹಿಸುವುದಾಗಿ ವಿ.ಸೋಮಣ್ಣ ಹೇಳಿದರು.

ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸಾಧನೆ ಶೂನ್ಯ ಎಂದು ಮಾಜಿ ಶಾಸಕ ಮಸಾಲಾ ಜಯರಾಮ್ ಹೇಳಿದರು. ಕಾಂಗ್ರೆಸ್ ತುರುವೇಕೆರೆ ವಿಧಾನಸಭಾ ಚುನಾವಣೆಯಲ್ಲಿ ಎಂದೆಂದು ಮೂರನೇ ಸ್ಥಾನವೇ. ಮುಂಬರುವ ದಿನಗಳಲ್ಲೂ ಕಾಂಗ್ರೆಸ್‌ಗೆ ಮೂರನೇ ಸ್ಥಾನವೇ ಗ್ಯಾರಂಟಿ. ತುರುವೇಕೆರೆ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯಲ್ಲಿ ಜೆಡಿಎಸ್ ನ ಶಾಸಕರಾಗಿರುವ ಎಂ.ಟಿ.ಕೃಷ್ಣಪ್ಪ ಮತ್ತು ತಾವು ಶಾಸಕರಾಗಿದ್ದ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳು ಇಂದಿಗೂ ಸಾಕ್ಷೀಕರಿಸುತ್ತಿವೆ ಎಂದರು.

ಎಚ್.ಡಿ.ದೇವೇಗೌಡರು ಸೋಲಲು ಕಾರಣಕರ್ತರಾಗಿರುವ ಹಾಲಿ ಕಾಂಗ್ರೆಸ್ ನ ಅಭ್ಯರ್ಥಿಯಾಗಿರುವ ಎಸ್.ಪಿ.ಮುದ್ದಹನು ಮೇಗೌಡರನ್ನು ಯಾವುದೇ ಮುಲಾಜಿಗೆ ಒಳಗಾಗದೇ ಸೋಲಿಸಿ ಎಂದು ಹಾಲಿ ಶಾಸಕ ಎಂ.ಟಿ.ಕೃಷ್ಣಪ್ಪ ಮತದಾರರಿಗೆ ಕರೆ ನೀಡಿದರು. ಪ್ರಧಾನಿಗಳಾಗಿದ್ದ ಹಿರಿಯ ಜೀವಕ್ಕೆ ಅವಮಾನ ಮಾಡಿದ ಮುದ್ದಹನುಮೇಗೌಡರಿಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಕ್ಕಪಾಠ ಕಲಿಸಿ. ದೇವೇಗೌಡರಿಗೆ ಮಾಡಿದ ಅವಮಾನ ಇಡೀ ರಾಜ್ಯಕ್ಕೆ ಮಾಡಿದ ಅವಮಾನ. ಒಕ್ಕಲಿಗರು ಮುದ್ದಹನುಮೇಗೌಡರ ಮಾತಿಗೆ ಮರುಳಾಗಬೇಡಿ. ದೇವೇಗೌಡರು ತಮ್ಮ ಸಮುದಾಯದವರು ಎಂಬ ಅರಿವು ಅಂದು ಮುದ್ದಹನುಮೇಗೌಡರಿಗೆ ಇರಲಿಲ್ಲವೇ? ಎಂದು ಎಂ.ಟಿ.ಕೃಷ್ಣಪ್ಪ ಪ್ರಶ್ನಿಸಿದರು. ಚುನಾವಣಾ ಪ್ರಚಾರದಲ್ಲಿ ಮಾಜಿ ಶಾಸಕರಾದ ಎಂ.ಡಿ.ಲಕ್ಷ್ಮೀನಾರಾಯಣ್, ಹೆಚ್.ಬಿ.ನಂಜೇಗೌಡ, ಎಚ್.ನಿಂಗಪ್ಪ, ಬಿಜೆಪಿ ತಾಲೂಕು ಅಧ್ಯಕ್ಷರಾದ ಮೃತ್ಯುಂಜಯ, ಬಿಜೆಪಿಯ ಚುನಾವಣಾ ಉಸ್ತುವಾರಿಗಳಾದ ದುಂಡ ರೇಣುಕಯ್ಯ, ಜೆಡಿಎಸ್ ಅಧ್ಯಕ್ಷರಾದ ದೊಡ್ಡೇಗೌಡ, ಮುಖಂಡರಾದ ಕೊಂಡಜ್ಜಿ ವಿಶ್ವನಾಥ್, ತಿಗಳ ಸಮಾಜದ ಮುಖಂಡರಾದ ಸೂರ್ಯ ಪ್ರಕಾಶ್, ದೊಂಬರನಹಳ್ಳಿ ಬಸವರಾಜು, ಮಾಚೇನಹಳ್ಳಿ ರಾಮಣ್ಣ, ವೆಂಕಟಾಪುರ ಯೋಗೀಶ್, ಆನೇಕೆರೆ ಪುನಿತ್. ಬಿ.ಎಸ್. ದೇವರಾಜ್, ವೆಂಕಟೇಶ್ ಕೃಷ್ಣಪ್ಪ, ರಾಜೀವ್ ಕೃಷ್ಣಪ್ಪ, ವಿಜಯೇಂದ್ರ, ಕುಮಾರಣ್ಣ, ಸಿದ್ದಪ್ಪಾಜಿ, ಪ್ರಸಾದ್, ರೇಣುಕಯ್ಯ, ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ