ದೇಶದ ಬಲಿಷ್ಠ ಭವಿಷ್ಯಕ್ಕಾಗಿ ಬಿಜೆಪಿ ಬೆಂಬಲಿಸಿ: ಸಂಸದ ಖೂಬಾ

KannadaprabhaNewsNetwork | Published : Apr 8, 2024 1:02 AM

ಸಾರಾಂಶ

ವೀರಶೈವ ಮಹಾಸಬದ ಅಧ್ಯಕ್ಷರು ಇದ್ದಿದಿರಾ ಲಿಂಗಾಯತರಿಗೆ ನಿಮ್ಮ ಕೊಡುಗೆ ಏನು.? ಬೆಂಗಳೂರಿನಲ್ಲಿ ಅಥವಾ, ಹೋಗಲಿ ಕಲಬುರಗಿಯಲ್ಲಿ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳಿಲ್ಲ ಯಾವುದೇ ಸವಲತ್ತುಗಳನ್ನು ಮಾಡಿಲ್ಲವೇಂದು ಮಾದ್ಯಮ ಮೂಲಕ ಖಂಡ್ರೆಜಿ ರವರಿಗೆ ಸವಾಲೇಸದರು.

ಕನ್ನಡಪ್ರಭ ವಾರ್ತೆ ಕಾಳಗಿ

ಭವ್ಯ ಭಾರತವನ್ನು ಮಾಸರಿ ದೇಶವನ್ನಾಗಿಸಲು ಹೊರಟ ನರೇಂದ್ರ ಮೋದಿಜಿ ರವರ ಕೈ ಬಲ ಪಡಿಸಲು ಮೂರನೆ ಬಾರಿ ಬಿಜೆಪಿಗೆ ಮತನೀಡಿ ಬೆಂಬಲಿಸಬೇಕು ಎಂದು ಬೀದರ ಲೋಕಸಭಾ ಅಭ್ಯರ್ಥಿ ಭಗವಂತ ಖೂಬಾ ಹೇಳಿದರು.

ಕಾಳಗಿ‌ ತಾಲ್ಲೂಕಿನ ಕೊಡದೂರ ಕಂಠಿಬಸವೇಶ್ವರ ಮಂಗಲ ಮಂಟಪದಲ್ಲಿ ಟೆಂಗಳಿ ಭೂತ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಕಾಂಗ್ರೆಸ್ ಅನೇಕ ರೈತರ ಹೊಟ್ಟೆಮೆಲೆ ಹೊಡಿದಿದ್ದಾರೆ. ಬರ ಪರಿಹಾರ ನೀಡದೆ ಮೂಗಿನ ಮೆಲೆ ತುಪ್ಪ ತವರುತ್ತಿದೆ. ಬಿಜೆಪಿ ಸರಕಾರ ರೈತರಿಗಾಗಿ ಪ್ರಧಾನ ಮಂತ್ರಿ ಸಮ್ಮಾನ ನೀಧಿಯಿಂದ 2, ಲಕ್ಷ 57 ಸಾವಿರ ರೈತರ ಖಾತೆಗೆ 5, ಲಕ್ಷ 60 ಸಾವಿರ ಕೋಟಿ ರು ನೀಡುತ್ತಿದ್ದಾರೆ ಎಂದರು.

ಲಿಂಗಾಯತ ಸಮಾಜಕ್ಕೆ ಖಂಡ್ರೆ ಕೊಡುಗೆ ಏನು:

ವೀರಶೈವ ಮಹಾಸಬದ ಅಧ್ಯಕ್ಷರು ಇದ್ದಿದಿರಾ ಲಿಂಗಾಯತರಿಗೆ ನಿಮ್ಮ ಕೊಡುಗೆ ಏನು.? ಬೆಂಗಳೂರಿನಲ್ಲಿ ಅಥವಾ, ಹೋಗಲಿ ಕಲಬುರಗಿಯಲ್ಲಿ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳಿಲ್ಲ ಯಾವುದೇ ಸವಲತ್ತುಗಳನ್ನು ಮಾಡಿಲ್ಲವೇಂದು ಮಾದ್ಯಮ ಮೂಲಕ ಖಂಡ್ರೆಜಿ ರವರಿಗೆ ಸವಾಲೇಸದರು.

ಚಿಂಚೋಳಿ ಶಾಸಕ ಡಾ‌.ಅವಿನಾಶ್ ಜಾಧವ ಮಾತನಾಡಿ, ಕಾಂಗ್ರೆಸ್ ನಸಯಕರಿಂದ ಸಂವಿಧಾನದ ಪಾಲನೆ ಮಾಡೋಕೆ ಇಂದು ಆಗಲಿಲ್ಲ. ಚಿಂಚೋಳಿ ತಾಲ್ಲೂಕಿನ ಅಭಿವೃದ್ಧಿಯ ಕೆಲಸಗಳು ಪಟ್ಟಭದ್ರ ಶಕ್ತಿಗಳ ಹೆಸರಿನ ಮೆಲೆ ಅಗ್ರಿಮೆಂಟ್ ಮಾಡಿಸಿ ಇವರು ಹೇಳಿಂದತೆ ಮನಬಂದತೆ ಅಭಿವೃದ್ಧಿ ಇಲ್ಲದೆ ಹಣವನ್ನು ಗುಳುಂ ಮಾಡುತ್ತಿದ್ದಾರೆ ಇದು ನ್ಯಾಯವೇ ಎಂದು ಪ್ರಶ್ನಿಸಿದರು.

ತೆಂಗಳಿ ಗ್ರಾಮಕ್ಕೆ ಭೇಟಿ ನೀಡಿದ ಕೇಂದ್ರ ಮಂತ್ರಿ ಭಗವಂತ ಖೂಬಾ ಅವರು, ಮನೆ-ಮನೆಗೆ ಹಾಗೂ ಅಂಗಡಿ ಮುಂಗಟ್ಟುಗಳಿಗೆ ತೆರಳಿ ಮತಯಾಚನೆ ಮಾಡಿದರು.

ಅರಣಕಲ್ ಹಾಗೂ ಕೋಡ್ಲಿ ಗ್ರಾಮಗಳಲ್ಲೂ ಕಾರ್ಯಕರ್ತರ ಸಭೆ ನಡೆಸಿ ತಮ್ಮ ಅಭಿವೃದ್ಧಿ ಕೆಲಸಗಳ ಬಗ್ಗೆ ತಿಳಿಹೇಳಿದರು. ಜಗನ್ನಾಥ ಪಾಟೀಲ, ವಿಜಯಕುಮಾರ ಚೇಗಂಟಾ, ಮಲ್ಲಿನಾಥ ಪಾಟೀಲ, ಶಶೀಕಲಾ ಟೆಂಗಳಿ, ಸಂತೋಷ ಪಾಟೀಲ ಮಂಗಲಗಿ, ಪ್ರಶಾಂತ ಕದಂ, ನಾಗೇಂದ್ರ ಚಿಂದಿ, ಶರಣು ಚಂದಾ, ಶಿವಕುಮಾರ ಕೊಡಸಾಲಿ, ವಿಜಯಕುಮಾರ ತುಪ್ಪದ, ಈಶುಗೌಡ ಮಳಗಾ, ಧನಂಜಯ ಕುಲಕರ್ಣಿ ಟೆಂಗಳಿ ನಿಂಗಪ್ಪ ಖಾಜಾಪೂರ, ಮಂಜುನಾಥ ಬೇರನ, ಶಿವಕುಮಾರ ಟೆಂಗಳಿ, ಪ್ರಕಾಶ ರಡ್ಡಿ, ಸುಂದರ ಡಿಸಾಗರ, ಮಹೇಂದ್ರ ಪೂಜಾರಿ, ಜಗನ್ನಾಥ ತೇಲಿ, ಗೀರಿರಾಜ ನಾಟೀಕಾರ, ರಮೇಶ ಜನಗೊಂಡ, ಮಹೇಶ್ ತುಪ್ಪದ ಇದ್ದರು.

Share this article