ಬಲಿಜ ಜನಾಂಗದ 2ಎ ಮೀಸಲಾತಿಗೆ ಬೆಂಬಲ

KannadaprabhaNewsNetwork |  
Published : Jun 18, 2025, 11:49 PM IST
ಚಿತ್ರ :  16ಎಂಡಿಕೆ2 : ಬಲಿಜ ವಿದ್ಯಾರ್ಥಿ ವೇತನ ಕಾರ್ಯಕ್ರಮವನ್ನು  ಶಾಸಕ ಪೊನ್ನಣ್ಣ ಉದ್ಘಾಟಿಸಿದರು.  | Kannada Prabha

ಸಾರಾಂಶ

ಬಲಿಜ ಜನಾಂಗವು ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುವ ನಿಟ್ಟಿನಲ್ಲಿ ಹಾಗೂ ಬಲಿಜರ ಹಕ್ಕೊತ್ತಾಯಕ್ಕೆ ಪೂರಕವಾಗಿ ಸ್ಪಂದಿಸುವ ಮೂಲಕ 2ಎ ಮೀಸಲಾತಿಯನ್ನು ಮತ್ತೆ ದೊರಕಿಸಿಕೊಡಲು ಶ್ರಮಿಸುವುದಾಗಿ ಶಾಸಕರು ಹೇಳಿದರು.

ಕನ್ನಡಪ್ರಭ ವಾರ್ತೆ ಗೋಣಿಕೊಪ್ಪ

ಬಲಿಜ ಜನಾಂಗವು ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುವ ನಿಟ್ಟಿನಲ್ಲಿ ಹಾಗೂ ಬಲಿಜರ ಹಕ್ಕೊತ್ತಾಯಕ್ಕೆ ಪೂರಕವಾಗಿ ಸ್ಪಂದಿಸುವ ಮೂಲಕ 2 ಎ ಮೀಸಲಾತಿಯನ್ನು ಮತ್ತೆ ದೊರಕಿಸಿಕೊಡಲು ಶ್ರಮಿಸುವುದಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಭರವಸೆ ನೀಡಿದ್ದಾರೆ.

ಕೊಡಗು ಬಲಿಜ ಸಮಾಜ ವತಿಯಿಂದ ತಾ.15 ರಂದು ಪೊನ್ನಂಪೇಟೆಯ ''''''''''''''''ಕೇವ್ ಇನ್ '''''''''''''''' ಸಭಾಂಗಣದಲ್ಲಿ ಜರುಗಿದ ಪ್ರಥಮ ವರ್ಷದ ಬಲಿಜ ವಿದ್ಯಾರ್ಥಿ ವೇತನ ಕಾರ್ಯಕ್ರಮವನ್ನು ಕಾಲಜ್ಞಾನಿ ಕೈವಾರ ತಾತಯ್ಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಂತರ ಜ್ಯೋತಿ ಬೆಳಗಿಸಿ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಕೊಡಗು ಬಲಿಜ ಸಮಾಜದ ಮೂಲಕ ಇಂದು ತನಗೆ ಬಲಿಜರಿಗೆ 2 ಎ ತಾರತಮ್ಯದ ಕುರಿತು ನೀಡಲಾದ ಮನವಿ ನೈಜತೆಗೆ ಹತ್ತಿರವಾಗಿದೆ. ಈ ಹಿಂದೆ 2014 ರಲ್ಲಿ ಅತೀ ಹಿಂದುಳಿದ ವರ್ಗಗಳ ಆಯೋಗಗಳ ಸಮೀಕ್ಷೆಗಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸಚಿವ ಸಂಪುಟ ಕಾಂತರಾಜ್ ಆಯೋಗವನ್ನು ರಚಿಸಿದ್ದು ಹಿಂದುಳಿದ ವರ್ಗಗಳ ಸಮೀಕ್ಷಾ ವರದಿಯನ್ನು ನಂತರದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿಯೂ ಬಿಡುಗಡೆ ಮಾಡಿರುವುದಿಲ್ಲ. ಕಾಂತರಾಜ್ ಆಯೋಗದ ವರದಿ ಪುನರ್ ಪರಿಶೀಲಿಸುವ ಅಗತ್ಯವಿದೆ ಹಾಗೂ ಇದೀಗ ಮಧುಸೂದನ್ ನಾಯಕ್ ಆಯೋಗ ರಚಿಸಲಾಗಿದ್ದು ಪ್ರತೀ ಹತ್ತು ವರ್ಷಗಳಿಗೆ ಒಮ್ಮೆ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಸಮೀಕ್ಷೆ ನಡೆಸುವಂತೆ ಜೂ .12 ರಂದು‌‌ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನವಾಗಿದೆ ಹೇಳಿದರು.

ಸನ್ಮಾನ ಗೌರವ:

ಇದೇ ಸಂದರ್ಭ ಬೆಟ್ಟದ ಪುರದ ಎರಡು ಸಂಪೂರ್ಣ ದೃಷ್ಠಿ ಕಳೆದುಕೊಂಡಿದ್ದ ಟಿ.ಆರ್.ರಾಣಿ ಅವರಿಗೆ ಸರ್ಕಾರಿ ಉದ್ಯೋಗವನ್ನು ಪೊನ್ನಣ್ಣ ಅವರು ಕಲ್ಪಿಸಿಕೊಟ್ಟ ಹಿನ್ನೆಲೆ ಕೊಡಗು ಬಲಿಜ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಡಾ.ಬಿ.ಎಂ.ರವಿನಾಯ್ಡು ಅವರು, ರಾಜ್ಯದಲ್ಲಿ ಬಲಿಜ ಜನಾಂಗದಲ್ಲಿ ಒಗ್ಗಟ್ಟು ಹಾಗೂ ಸಂಘಟಿತ ಹೋರಾಟದ ಕೊರತೆ ಇದೆ. ಕ್ರೀಡೋತ್ಸವ, ಉಚಿತ ಆರೋಗ್ಯ ತಪಾಸಣೆ, ವಿದ್ಯಾರ್ಥಿ ವೇತನ, ಶೋಷಿತ ವರ್ಗಕ್ಕೆ ಸಹಕಾರ ನೀಡುತ್ತಾ ಬಂದಿದ್ದು, ತಾವು ಮತ್ತು‌ ಕುಟುಂಬ ಕೊಡಗು ಬಲಿಜ ಸಮಾಜದ ನೆರವಿಗೆ ಸದಾ ಸಿದ್ಧರಿದ್ದೇವೆ ಎಂದು ಹೇಳಿದರು.

ಉತ್ತಮ ಸಾಧನೆ ಹೆಮ್ಮೆಯ ವಿಚಾರ:

ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಅವರು ಮಾತನಾಡಿ, ಕೊಡಗು ಬಲಿಜ ಸಮುದಾಯ ಸಣ್ಣ ಸಮುದಾಯವಾಗಿದ್ದರೂ ‌ಬಲಿಜ ವಿದ್ಯಾರ್ಥಿ ಗಳು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡುತ್ತಿರುವುದು ಹೆಮ್ಮೆಯ ವಿಚಾರ. ಕೊಡಗು ಬಲಿಜ ಸಮಾಜ, ಪೋಷಕರಿಗೆ, ಸಮುದಾಯದ ಜನತೆಗೆ ನಮ್ಮ ಸಂಘದ ರೈತ ಕುಟುಂಬ ಸದಾ ಜತೆಗಿದ್ದು ಸಹಕಾರ ನೀಡಲಿದ್ದೇವೆ ಎಂದು ಹೇಳಿದರು.

ಕೊಡಗು ಗೌಡ ಸಮಾಜ ಒಕ್ಕೂಟದ ನಿರ್ದೇಶಕ ಕೆ.ಜಿ.ಅಶ್ವಿನಿಕುಮಾರ್ ಮಾತನಾಡಿ, ಕೊಡಗಿನಲ್ಲಿ ರಾಜರ ಕಾಲದಲ್ಲಿ ಮಂಗಳದ್ರವ್ಯ ಇತ್ಯಾದಿ ವ್ಯಾಪಾರಕ್ಕಾಗಿ ಬಂದ ಬಲಿಜ ಜನಾಂಗದ ಹೆಸರಿನಲ್ಲಿ ತೆಲುಗರ ಬೀದಿ ಇತ್ಯಾದಿ ರಸ್ತೆಗಳಿವೆ. ರಾಜರ ಕಾಲದಿಂದಲೂ‌ ನೆಲೆನಿಂತ ಸಣ್ಣ ಸಮುದಾಯಕ್ಕೆ ಎಲ್ಲರ ಬೆಂಬಲ ಅಗತ್ಯವಿದೆ ಎಂದು ಹೇಳಿದರು.

ಉತ್ತಮ ಸಮಾಜ ಮುಖಿ ಕೆಲಸ:

ವಿರಾಜಪೇಟೆ ಉಪ ಪೊಲೀಸ್ ಅಧೀಕ್ಷಕ ಎಸ್.ಮಹೇಶ್ ಕುಮಾರ್ ಅವರು‌ ಮಾತನಾಡಿ, ವಿದ್ಯಾರ್ಥಿ ವೇತನ ನೀಡುವ ಮೂಲಕ ಶೈಕ್ಷಣಿಕ ಪ್ರಗತಿಗೆ ಉತ್ತೇಜನ ನೀಡುತ್ತಿರುವುದು ಉತ್ತಮ ಸಮಾಜ ಮುಖಿ ಕೆಲಸ. ವಿದ್ಯಾರ್ಥಿ ವೇತನ ಒಂದು ಸಾಂಕೇತಿಕ ವಿಚಾರ. ಮುಂದೆ ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ವಿದ್ಯಾರ್ಥಿ ಗಳು ಹೆಚ್ಚು ಹೊತ್ತು ನೀಡಬೇಕು. ಈ ನಿಟ್ಟಿನಲ್ಲಿ ಕೊಡಗು ಬಲಿಜ ಸಮಾಜ ಉತ್ತಮ ಕೆಲಸ ಮಾಡುತ್ತಿರುವುದು ಕೇಳಿದ್ದೇನೆ ಎಂದು ಹೇಳಿ ಶುಭ ಹಾರೈಸಿದರು.

ಹಾಕಿ ಕೂರ್ಗ್ ಉಪಾಧ್ಯಕ್ಷೆ ಯಮುನಾ ಚಂಗಪ್ಪ ಮಾತನಾಡಿದರು.

ಚಿಕ್ಕ ಬಳ್ಳಾಪುರ ಕಸಾಪ ಮಾಜಿ ಅಧ್ಯಕ್ಷ ಕೈವಾರ ಶ್ರೀನಿವಾಸ್ ಅವರು ಕಾಲಜ್ಞಾನಿ ಯೋಗಿನಾರೇಯಣ ಯತೀಂದ್ರರ ಮಹಿಮೆ‌ ಬಗ್ಗೆ ವಿವರಿಸಿದರು.

‌‌ಪಡಿಕಲ್ ಕುಸುಮಾವತಿ, ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಬಲಿಜ ಸಮಾಜ ಉಪಾಧ್ಯಕ್ಷೆ ಹಾಗೂ ಶನಿವಾರಸಂತೆ ಗ್ರಾ.ಪಂ.ಅಧ್ಯಕ್ಷೆ ಗೀತಾ ಹರೀಶ್ ಅವರು ಮಾತನಾಡಿದರು.

ವಿಶೇಷ ಆಹ್ವಾನಿತರಾಗಿ ಸಾಯಿ ಶಂಕರ ವಿದ್ಯಾಸಂಸ್ಥೆ ಮುಖ್ಯಸ್ಥ ಝರು ಗಣಪತಿ, ಎನ್.ಎಸ್.ಕಂದಾ ದೇವಯ್ಯ, ಬಿ.ಎನ್.ಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭ ಪರಿಸರ ಸಂರಕ್ಷಣೆಗಾಗಿ ರಾಜ್ಯದ ವಿವಿಧೆಡೆ ಸುಮಾರು 1.50 ಲಕ್ಷ ಮರ ಬೆಳೆಸಲು ಸಸಿ ನೆಟ್ಟು ಪೋಷಿಸುತ್ತಿರುವ ಹಾಗೂ ಸಮಾಜ ಸೇವಕ ಬೆಂಗಳೂರಿ ಆರ್.ಲೀಲಾಕೃಷ್ಣ- ನಿವೇದಿತಾ ದಂಪತಿಯನ್ನು ಸನ್ಮಾನಿಸಲಾಯಿತು.

ಸಮಾಜದ ಪದಾಧಿಕಾರಿಗಳಾದ ಟಿ.ಸಿ.ಶ್ಯಾಮಲಾ, ಟಿ.ಆರ್.ವಿಜಯ, ಯತಿರಾಜ್, ಶೋಭ ಶಾಂತ್ ರಾಜ್, ದಿವ್ಯ ರಮೇಶ್, ದಿನೇಶ್, ಯೋಗೇಶ್, ಇಂಜಿಲಗೆರೆ ಭಗವತಿ ಬಲಿಜ ಕ್ರಿಕೇಟರ್ಸ್ ನ ಹರೀಶ್ ಉಪಸ್ಥಿತರಿದ್ದರು.

ಕೊಡಗು ಬಲಿಜ ಸಮಾಜ ಅಧ್ಯಕ್ಷ ಟಿ.ಎಲ್.ಶ್ರೀನಿವಾಸ್, ವಕೀಲೆ ಶೀತಲ್ ನಾಯ್ಡು ಕಾರ್ಯಕ್ರಮ ನಿರೂಪಣೆ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲು ಸಾಲು ರಜೆ, ಪ್ರವಾಸಿ ತಾಣ ರಷ್‌
ಭೂಮಿ ಮಾರಿದ ಇನ್ಫಿ ಬಗ್ಗೆ ಕಾರ್ತಿ ತೀವ್ರ ಆಕ್ರೋಶ