ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಕೇಂದ್ರದ ಬಿಜೆಪಿ ಸರ್ಕಾರದ ಜನ, ರೈತ ವಿರೋಧಿ ನೀತಿ ಹಾಗೂ ಬೆಲೆ ಏರಿಕೆಗೆ ಜನರು ನೆಮ್ಮದಿ ಜೀವನ ಸಾಧ್ಯವಿಲ್ಲ, ನೆಮ್ಮದಿ ಜೀವನ ಬೇಕಾದರೆ ಲೋಕಸಭೆಗೆ ಕಾಂಗ್ರೆಸ್ ಬೆಂಬಲಿಸಿ, ಬಿಜೆಪಿ ತಿರಸ್ಕರಿಸಿ ಎಂದು ಲೋಕಸಭೆ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಮನವಿ ಮಾಡಿದರು.ಬಿಜೆಪಿ ರೈತರ ಸಾಲ ಮನ್ನಾ ಮಾಡಿಲ್ಲ :
ತಾಲೂಕಿನ ಬರಗಿ ಗ್ರಾಮದಲ್ಲಿ ಜಿಪಂ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಜನರು ಬಳಸುವ ಪ್ರತಿಯೊಂದು ವಸ್ತುಗೆ ಜಿಎಸ್‌ಟಿ ಹಾಕಿ ಜನ ಸಾಮಾನ್ಯರು ನೆಮ್ಮದಿ ಜೀವನ ನಡೆಸಲು ಆಗುತ್ತಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಕೇಂದ್ರದ ರಾಜಧಾನಿ ದೆಹಲಿ ಸುತ್ತಲೂ ರೈತರು ಪ್ರತಿಭಟನೆ ನಡೆಸುತ್ತಿದ್ದಾಗ ಕೇಂದ್ರ ಬಿಜೆಪಿ ಸರ್ಕಾರ ಸೌಜನ್ಯಕ್ಕೂ ಭೇಟಿ ನೀಡಿ ಸಮಸ್ಯೆ ಆಲಿಸಲಿಲ್ಲ. ರೈತರ ಸಾಲ ಮನ್ನಾ ಮಾಡಲಿಲ್ಲ. ಶ್ರೀಮಂತರ ಸಾಲ ಮನ್ನಾ ಮಾಡಿದ ಬಿಜೆಪಿಗೆ ಓಟು ಹಾಕಬೇಕಾ ಎಂದು ಪ್ರಶ್ನಿಸಿದರು.ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರ ನಡೆಸಿದರೂ ಬಿಜೆಪಿ ನೀಡಿದ್ದ ಭರವಸೆ ಈಡೇರಿಸಲಿಲ್ಲ. ಸುಳ್ಳು ಭರವಸೆಯ ಜೊತೆಗೆ ಪ್ರತಿಮೆ,ಹಿಂದುತ್ವದ ಹೆಸರಲ್ಲಿ ಮತ ಕೇಳುತ್ತಿದ್ದಾರೆ.ಬಡವರು,ಮದ್ಯಮ ವರ್ಗದ ಜನರಿಗೆ ಏನು ಮಾಡಿಲ್ಲ ಬಿಜೆಪಿ ಎಂದು ಟೀಕಿಸಿದರು.
ಶಾಸಕ ಎಚ್.ಎಂ.ಗಣೇಶ್ ಪ್ರಸಾದ್‌ರನ್ನು ಹೆಚ್ಚಿನ ಅಂತರದಲ್ಲಿ ಕ್ಷೇತ್ರದ ಮತದಾರರು ಗೆಲ್ಲಿಸಿದ್ದಾರೆ. ಮತದಾರರ ನಿರೀಕ್ಷೆಗೆ ತಕ್ಕಂತೆ ಗಣೇಶ್ ಪ್ರಸಾದ್ ಕೂಡ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಹಿಡಿತ ಸಾಧಿಸಿದ್ದಾರೆ ಎಂದು ಗಣೇಶ್ ಪ್ರಸಾದ್‌ರನ್ನು ಕೊಂಡಾಡಿದರು.೧.೨೪ ಲಕ್ಷ ಸಿಗಲಿದೆ: ರಾಜ್ಯದ ಮಹಿಳೆಯರಿಗೆ ಪ್ರತಿ ತಿಂಗಳು ರಾಜ್ಯ ಸರ್ಕಾರ ೨ ಸಾವಿರ ಕೊಡುತ್ತಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬಂದರೆ ವಾರ್ಷಿಕ ಒಂದು ಲಕ್ಷ ನೀಡಲಿದೆ ಪ್ರತಿ ಮಹಿಳೆಯರಿಗೆ ೧.೨೪ ಲಕ್ಷ ರು ಸಿಗಲಿದೆ ಎಂದರು.
ಕಾಂಗ್ರೆಸ್ ನುಡಿದಂತೆ ನಡೆವ ಪಕ್ಷ:ರಾಜ್ಯ ಸರ್ಕಾರದ 5 ಗ್ಯಾರಂಟಿಗಳು ಜನರಿಗೆ ತಲುಪುತ್ತಿದೆ ಕಾಂಗ್ರೆಸ್ ಕೇವಲ ಭರವಸೆ ಕೊಡುವ ಪಕ್ಷವಲ್ಲ.ನುಡಿದಂತೆ ನಡೆದ ಪಕ್ಷವಾಗಿದೆ.ಎಂಬುದಕ್ಕೆ ರಾಜ್ಯದ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಜಾರಿಗೆ ತಂದಿರುವುದೇ ಸಾಕ್ಷಿ ಎಂದರು.
ನಂಬಿಕೆ ಇದೆ:ಗುಂಡ್ಲುಪೇಟೆ ಕ್ಷೇತ್ರದಲ್ಲಿ ನನಗೆ ಶಾಸಕರಾದ ಎಚ್.ಎಂ.ಗಣೇಶ್ ಪ್ರಸಾದ್‌ಗಿಂತಲೂ ಹೆಚ್ಚಿನ ಮತ ಬರಲಿದೆ. ಎಂಬ ನಂಬಿಕೆ ಇದೆ.ಮತದಾರರ ಮನವೊಲಿಸುವ ಕಾರ್ಯಕರ್ತರು ನನ್ನ ಗೆಲುವಿಗೆ ಸಹಕಾರ ನೀಡಬೇಕು. ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ,ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ಮುನಿರಾಜು,ಕಾಂಗ್ರೆಸ್ ಉಸ್ತುವಾರಿ ಮುತ್ತುರಾಜ್ ಮಾತನಾಡಿದರು.
ಪ್ರಚಾರ ಸಭೆಯಲ್ಲಿ ಮಾಜಿ ಸಂಸದ ಎಂ.ಶಿವಣ್ಣ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ.ಬಿ.ರಾಜಶೇಖರ್, ಟಿಎಪಿಸಿಎಂಎಸ್ ಅಧ್ಯಕ್ಷ ಆಲತ್ತೂರು ಜಯರಾಂ, ಜಿಪಂ ಮಾಜಿ ಸದಸ್ಯ ಕೆರಹಳ್ಳಿ ನವೀನ್, ಪಿ. ಚನ್ನಪ್ಪ, ಬಿ.ಕೆ.ಬೊಮ್ಮಯ್ಯ, ಗ್ರಾಪಂ ಅಧ್ಯಕ್ಷ ಸೂರ್ಯ ಪ್ರಕಾಶ್, ಮಹದೇವಮ್ಮ, ಮಹದೇವಮ್ಮ, ಗುಂಡ್ಲುಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ವಕ್ತಾರ ಬಿ.ಜಿ.ಶಿವಕುಮಾರ್, ಮುಖಂಡರಾದ ಮಂಚಹಳ್ಳಿ ಲೋಕೇಶ್, ಮಡಹಳ್ಳಿ ಶಿವಮೂರ್ತಿ, ಬಿ.ಕುಮಾರಸ್ವಾಮಿ, ಪುಟ್ಟಸ್ವಾಮಿ ಆಚಾರ್,ಸಿದ್ದಯ್ಯನಪುರ ಸೋಮಶೇಖರ್, ಬರಗಿ ಮಹೇಶ್, ಧೀರಜ್ ಪ್ರಸಾದ್, ಹೊರೆಯಾಲ ಗೋಪಾಲ್, ಮುದ್ದಯ್ಯ, ಲತಾ ಜತ್ತಿ, ಮೋಹನ್, ಗುರು ವೀರನಪುರ, ಜಿ.ಕೆ.ಲೋಕೇಶ್, ಬಿ.ಸಿ.ಮಹದೇವಸ್ವಾಮಿ ಹಾಗೂ 500ಕ್ಕೂ ಹೆಚ್ಚು ಕಾರ್ಯಕರ್ತರಿದ್ದರು.೧೭ಜಿಪಿಟಿ೧
ಗುಂಡ್ಲುಪೇಟೆ ತಾಲೂಕಿನ ಬರಗಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಉದ್ಘಾಟಿಸಿದರು. ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಮತ್ತಿತರರು ಹಾಜರಿದ್ದರು.ಫೇಕ್ ನ್ಯೂಸ್ ನಂಬದೆ ಬೋಸ್ ಗೆಲ್ಲಿಸಿ: ಗಣೇಶ್
ಗುಂಡ್ಲುಪೇಟೆ: ವಿಪಕ್ಷಗಳ ಸುಳ್ಳು ಭರವಸೆ, ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಬಗೆಗಿನ ಅಪಪ್ರಚಾರ ಹಾಗೂ ಫೇಕ್ ನ್ಯೂಸ್ ನಂಬದೆ ಸುನೀಲ್ ಬೋಸ್ ಗೆಲ್ಲಿಸಿ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.ಬರಗಿ ಜಿಪಂ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಚಾಮರಾಜನಗರ ಲೋಕಸಭೆ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ ಎಂದರು. ಬಿಜೆಪಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಕಾಂಗ್ರೆಸ್‌ನಿಂದಲೇ ಚಾಮರಾಜನಗರ ಲೋಕಸಭೆ ಕ್ಷೇತ್ರದಿಂದ ಹೆಚ್ಚು ಬಾರಿ ಗೆದಿದ್ದಾರೆ. ಆರ್.ಧ್ರುವನಾರಾಯಣ ಕೂಡ ೨ ಬಾರಿ ಕಾಂಗ್ರೆಸ್ ನಿಂದಲೇ ಗೆಲುವು ಸಾಧಿಸಿದ್ದರು ಎಂದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನನಗೆ ೨೬ ಸಾವಿರಕ್ಕೂ ಹೆಚ್ಚು ಲೀಡ್ ನ್ನು ಕ್ಷೇತ್ರದ ಜನರು ನೀಡಿದ್ದಾರೆ.ಈಗ ಸುನೀಲ್ ಬೋಸ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ನನಗೆ ಬಂದ ಓಟಿಗಿಂತಲೂ ಹೆಚ್ಚು ಲೀಡ್ ಕೊಡಿಸಲು ಕಾರ್ಯಕರ್ತರು ಹಾಗು ಮುಖಂಡರು ಶ್ರಮ ಹಾಕಬೇಕು ಎಂದು ಮನವಿ ಮಾಡಿದರು. ರಾಜ್ಯದ ಕಾಂಗ್ರೆಸ್ ಸರ್ಕಾರ ಸುಭದ್ರವಾಗಿದೆ.ನಾನು ಶಾಸಕನಾದ ೧೧ ತಿಂಗಳಲ್ಲಿ ೧೨೦ ಕೋಟಿ ಅನುದಾನ ತಂದು ಅಭಿವೃದ್ಧಿಗೆ ಚಾಲನೆ ನೀಡಿದ್ದಾರೆ.ಗುದ್ದಲಿ ಪೂಜೆ ಮಾಡಿದ್ದೇನೆ ಚುನಾವಣೆ ಮುಗಿದ ನಂತರ ಗುದ್ದಲಿ ಪೂಜೆ ಮಾಡಲಿದ್ದೇನೆ ಎಂದರು.
ಫೇಕ್ ನ್ಯೂಸ್: ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ವಿರುದ್ಧ ಅಪ್ರಚಾರದ ಜೊತೆಗೆ ಫೇಕ್ ನ್ಯೂಸ್ ಹಾಕುತ್ತಿದ್ದಾರೆ. ಕ್ಷೇತ್ರದ ಮತದಾರರು ನಂಬಬೇಡಿ. ಕಳೆದ ಚುನಾವಣೆಯಲ್ಲೂ ನನ್ನ ಮೇಲೆ ಅಪ್ರಚಾರ ಮಾಡಿದರೂ ಕ್ಷೇತ್ರದ ಜನ ವಿಪಕ್ಷಗಳ ಮಾತಿಗೆ ಸೊಪ್ಪು ಹಾಕಲಿಲ್ಲ ಎಂದರು.