ಕನ್ನಡಪ್ರಭ ವಾರ್ತೆ, ಶಿರಾಳಕೊಪ್ಪಈ ಬಾರಿ ಶ್ರೀಮಂತರ ಮತ್ತು ಬಡಬರ ನಡುವೆ ನಡೆಯುತ್ತಿರುವ ಚುನಾವಣೆ ಇದಾಗಿದ್ದು, ಬಡವರ ಪರವಾಗಿರುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು. ಭಾರತೀಯ ಜನತಾ ಪಕ್ಷ ದೇವರ ಹೆಸರಲ್ಲಿ ಮತ ಕೇಳುತ್ತಿದ್ದಾರೆ ಈ ಬಗ್ಗೆ ಮತದಾರರು ಜಾಗೃತರಾಗಿರಬೇಕು ಎಂದು ರಾಜ್ಯ ಕಾಂಗ್ರೆಸ್ ಪಕ್ಷದ ವಕ್ತಾರ ಆಯನೂರ ಮಂಜುನಾಥ ಕರೆ ನೀಡಿದರು.ಶಿರಾಳಕೊಪ್ಪ ಹತ್ತಿರದ ಬಿಳಕಿ ಮತ್ತು ಜಾವಗಟ್ಟಿ ಗ್ರಾಮಗಳಲ್ಲಿ ಆಯಾ ಭಾಗದ ಮತದಾರರನ್ನು ಉದ್ದೇಶಿಸಿ ಮಂಗಳವಾರ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಇಂದು ರಾಜ್ಯ ಕಂಡ ಅಪರೂಪದ ರಾಜಕಾರಣಿ ಬಂಗಾರಪ್ಪನವರ ಮಗಳು ಗೀತಾ ಚುನಾವಣೆಗೆ ನಿಂತಿದ್ದಾರೆ. ಬಂಗಾರಪ್ಪನವರು ಬರಗಾಲದಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಿಸಿದರು. ಮುಖ್ಯಮಂತ್ರಿ ಇದ್ದಾಗ ಜನಪರ ಯೋಜನೆ ರೂಪಿಸಿದರು. ರೈತರಿಗೆ ಉಚಿತ ವಿದ್ಯುತ್ ನೀಡಿದ ಹಿನ್ನೆಲೆ ಯಲ್ಲಿ ರೈತರು ಬೆಳೆಯನ್ನು ಬೆಳೆಯಲು ಸಾಧ್ಯವಾಗಿದೆ. ಬಡವರಿಗೆ ಆಶ್ರಯ ಯೋಜನೆಯಲ್ಲಿ ನಿವೇಶನ ಕೊಟ್ಟಂತಹ ಧೀಮಂತ ನಾಯಕ ಬಂಗಾರಪ್ಪ ಎಂದು ನೆನೆದರು.
ಕಾಂಗ್ರೆಸ್ ಉಚಿತ ಬಸ್ ಪ್ರಯಾಣ ಮಾಡುತ್ತಿರುವ ಮಹಿಳೆಯರಿಗೆ ಉಚಿತ ಪ್ರಯಾಣ ಮಾಡಲು ಅವಕಾಶ ಕಲ್ಪಿಸಿದೆ. ಮನೆಯಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳು ೨ ಸಾವಿರ ರು. ಕೊಡಲಾಗುತ್ತಿದೆ. ಇಂತಹ ೫ ಯೋಜನೆಗಳನ್ನು ಯಾವುದೇ ಜಾತಿ ಮತ ನೋಡದೆ ಗ್ಯಾರಂಟಿ ಯೋಜನೆ ಕೊಡಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಪರವಾಗಿ ಮತ ಕೇಳುತ್ತಿದ್ದೇವೆ ಎಂದರು.
ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿ ಗೀತಾ ಮಾತನಾಡಿ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ಚುನಾವಣೆಯಲ್ಲಿ ಘೋಷಿಸಿದಂತೆ ಮತದಾರರಿಗೆ ೫ ಗ್ಯಾರಂಟಿಗಳನ್ನು ಯಾವದೇ ಮಧ್ಯವರ್ತಿಗಳ ಸಹಕಾರವಿಲ್ಲದೇ ಬಡವರಿಗೆ ಮುಟ್ಟಿಸಲಾಗಿದೆ. ಈ ಸರ್ಕಾರ ಯಾವುದೇ ಹಗರಣವಿಲ್ಲದೇ ಪಾರದಶರ್ಕವಾಗಿ ಕೆಲಸ ಮಾಡುತ್ತಿದೆ.ಈ ಹಿಂದೆ ಬಂಗಾರಪ್ಪನವರು ಮುಖ್ಯಮಂತ್ರಿ ಇದ್ದಾಗ ಗ್ರಾಮೀಣ ವಿದ್ಯಾರ್ಥಿಗಳಿಗೆ ಗ್ರಾಮೀಣ ಕೃಪಾಂಕ ನೀಡಲಾಯಿತು. ಎಂದರಲ್ಲೆ, ನನ್ನ ಬಗ್ಗೆ ಮನೆ ಇಲ್ಲಿಲ್ಲ ಬೆಂಗಳೂರಲ್ಲಿ ಇರುತ್ತಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಕೆಲಸ ಮಾಡುವ ಉತ್ಸಾಹವಿದ್ದಾಗ ಕೆಲಸ ಮಾಡುವದು ಸುಲ‘.ಮೈಸೂರಿನಲ್ಲಿ ಶಕ್ತಿಧಾಮದ ಕೆಲಸ ಸೇರಿದಂತೆ ಉತ್ತರ ಕನಾರ್ಟಕದಲ್ಲಿ ಕೆಲಸ ಮಾಡುತ್ತಿದ್ದೇನೆ. ನನ್ನನ್ನು ಚುನಾಯಿಸಿ ಕಳಿಸಿದರೆ ಕೆಲಸ ಮಾಡಲು ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ಹೇಳಿದರು.ಸಭೆಯನ್ನುದ್ದೇಶಿಸಿ ಧುರೀಣರಾದ ಮಂಜುನಾಥ ಗೌಡ, ನಗರದ ಮಹದೇವಪ್ಪ ಮಾತನಾಡಿದರು. ಅಧ್ಯಕ್ಷತೆಯನ್ನು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವೀರನಗೌಡ ವಹಿಸಿದ್ದರು. ವೇದಿಕೆಯ ಮೇಲೆ ಗೋಣಿ ಮಾಲತೇಶ್, ಶಿವ್ಯಾ ನಾಯಕ್, ದಶರ್ನ್ ಉಳ್ಳಿ, ಮಾರವಳ್ಳಿ ಉಮೇಶ, ರಾಘವೇಂದ್ರ ನಾಯಕ್, ಮಹೇಶ್ ತಾಳಗುಂದ ಸೇರಿದಂತೆ ಹಲವರು ಪ್ರಮುಖರಿದ್ದರು.