ಸುರಪುರ: ರಾಜೂಗೌಡನುಮೇದುವಾರಿಕೆ ವೇಳೆ ಪೊಲೀಸ್‌ ಸರ್ಪಗಾವಲು

KannadaprabhaNewsNetwork |  
Published : Apr 19, 2024, 01:09 AM IST
ಸುರಪುರ  ನಗರಸಭೆ ಮುಂಭಾಗದಲ್ಲಿ ಬಿಸಿಲಿನಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿರುವುದು | Kannada Prabha

ಸಾರಾಂಶ

ಬಿಜೆಪಿ ಅಭ್ಯರ್ಥಿ ನರಸಿಂಹ ನಾಯಕ ರಾಜೂಗೌಡ ಬೃಹತ್ ಮೆರವಣಿಗೆಯಿಂದ ನಾಮಪತ್ರ ಸಲ್ಲಿಸುವ ಹಿನ್ನೆಲೆಯಲ್ಲಿ ಗುರುವಾರ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಸುರಪುರ

ಬಿಜೆಪಿ ಅಭ್ಯರ್ಥಿ ನರಸಿಂಹ ನಾಯಕ ರಾಜೂಗೌಡ ಬೃಹತ್ ಮೆರವಣಿಗೆಯಿಂದ ನಾಮಪತ್ರ ಸಲ್ಲಿಸುವ ಹಿನ್ನೆಲೆಯಲ್ಲಿ ಗುರುವಾರ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.

ನಗರದ ನಗರಸಭೆ ಎದುರಿನಿಂದ ಬಿಜೆಪಿ ಅಭ್ಯರ್ಥಿ ರಾಜೂಗೌಡರು ತಹಸೀಲ್ದಾರ್ ಕಚೇರಿವರೆಗೆ ಅದ್ಧೂರಿ ಮೆರವಣಿಗೆ ನಡೆಯಿತು. ನಗರದ ಸೂಕ್ಷ್ಮ ಪ್ರದೇಶದಲ್ಲಿ ಪೊಲೀಸ್ ಕಣ್ಗಾವಲು ಇರಿಸಲಾಗಿತ್ತು.

ಎಲ್ಲಿಯೂ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ದರ್ಬಾರ್ ರಸ್ತೆ, ಡಾ. ಅಂಬೇಡ್ಕರ್ ವೃತ್ತ, ನಗರಸಭೆ ವೃತ್ತ, ಗಾಂಧೀಜಿ ವೃತ್ತ ತಹಸೀಲ್ದಾರ್ ರಸ್ತೆ ಸೇರಿದಂತೆ ವಿವಿಧೆಡೆ ಬಿಗಿ ಪೊಲೀಸ್ ಪಹರೆಯನ್ನು ನಿಯೋಜಿಸಲಾಗಿತ್ತು.

ಬೆಂಕೆ ಚಂಡಿನಂತ ಬಿಸಿಲಿಗೆ ಬಗ್ಗದೆ 280ಕ್ಕೂ ಹೆಚ್ಚು ಪೊಲೀಸರು ಎದೆಯೊಡ್ಡಿ ಕರ್ತವ್ಯ ನಿರ್ವಹಿಸಿದರು. ಡಿವೈಎಸ್‌ಪಿ-3, ಪಿಐ-10, ಪಿಎಸ್‌ಐ-25, ಎಚ್.ಸಿ.-200, ಕೆಎಸ್‌ಆರ್‌ಪಿ- 4 ವಾಹನ, ಒಂದು ಕೆಎಸ್‌ಆರ್‌ಪಿ ವಾಹನದಲ್ಲಿ 22 ಸಿಬ್ಬಂದಿ, ಅಂದರೆ 88 ಪೊಲೀಸ್ ಸಿಬ್ಬಂದಿ ಕಾರ್ಯ ನಿರ್ವಹಿಸಿದರು.

ಬ್ಯಾರಿಕೇಡ್:

ನಗರದ ದರಬಾರ್ ರೋಡಿಗೆ ಬ್ಯಾರಿಕೇಡ್ ಹಾಕಿ ವಾಹನಗಳನ್ನು ಬೇರೆ ಮಾರ್ಗದಲ್ಲಿ ಕಳುಹಿಸಲಾಯಿತು. ಮಹಾತ್ಮ ಗಾಂಧಿ ವೃತ್ತದಲ್ಲಿ ಬ್ಯಾರಿಕೇಡ್ ಹಾಕಿ ನಗರಸಭೆಯತ್ತ ವಾಹನಗಳನ್ನು ಹೋಗದಂತೆ ತಡೆದು ಬಸ್ ನಿಲ್ದಾಣ ಮಾರ್ಗವಾಗಿ ಚಲಿಸುವಂತೆ ಮಾಡಿದರು. ಬಸ್ ನಿಲ್ದಾಣದಲ್ಲಿ ಬ್ಯಾರಿಕೇಡ್ ಹಾಕಿ ಖಾಸಗಿ ವಾಹನಗಳು ಮತ್ತು ಬೈಕ್‌ಗಳು ಒಳಗೆ ಬರದಂತೆ ತಡೆದು ಬೈಪಾಸ್ ರಸ್ತೆಯ ಮೂಲಕ ಚಲಿಸಲು ಅನುವು ಮಾಡಿಕೊಟ್ಟರು. ತಹಸೀಲ್ದಾರ್ ಕಚೇರಿ ಹೋಗುವ ಮಾರ್ಗದಲ್ಲಿ 3 ಕಡೆ ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಸಿಲಿನ ಹೊಡೆತಕ್ಕೆ ಸಾವಿರಾರು ಮೀನುಗಳ ಮಾರಣಹೋಮ
ನಿರಾಶ್ರಿತರ ಕಣ್ಣೀರು ಒರೆಸುವ ಕೆಲಸ