ಕನ್ನಡಪ್ರಭ ವಾರ್ತೆ ಮೂಲ್ಕಿ
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸುರತ್ಕಲ್ ಘಟಕದ ಪಂಚಮ ವಾರ್ಷಿಕೋತ್ಸವ ಹಾಗೂ ಕೇಂದ್ರೀಯ ಮಹಿಳಾ ಘಟಕದ ಅಷ್ಟಮ ವಾರ್ಷಿಕೋತ್ಸವ ಶನಿವಾರ ಸಂಜೆ 6.30ಕ್ಕೆ ಸುರತ್ಕಲ್ ಬಂಟರ ಭವನದ ವಠಾರದಲ್ಲಿ ನಡೆಯಲಿದೆ.ಸಂಜೆ 7.30 ಕ್ಕೆ ನಡೆಯುವ ಸಭಾ ಕಾರ್ಯಕ್ರಮವನ್ನು ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ಶಂಕರ ನಾರಾಯಣ ಭಟ್ ಉದ್ಘಾಟಿಸಲಿದ್ದು ಸುರತ್ಕಲ್ ಘಟಕದ ಅಧ್ಯಕ್ಷ ಸುಧಾಕರ ಪೂಂಜ ಅಧ್ಯಕ್ಷತೆ ವಹಿಸಲಿದ್ದಾರೆ. ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯುವುದು.
ಮುಖ್ಯ ಅತಿಥಿಗಳಾಗಿ ಉದ್ಯಮಿ ಕರುಣಾಕರ ಎಂ ಶೆಟ್ಟಿ ಮಧ್ಯಗುತ್ತು, ಮುಂಬೈ ಉದ್ಯಮಿ ಅನಿಲ್ ಶೆಟ್ಟಿ ತೇವು ಸೂರಿಂಜೆ, ಅಗರಿ ರಾಘವೇಂದ್ರ ರಾವ್, ಡಿ ಕೆ ಶೆಟ್ಟಿ ಸುರತ್ಕಲ್, ಮನೋಹರ ಶೆಟ್ಟಿ ಸೂರಿಂಜೆ, ಜಗದೀಶ ಶೆಟ್ಟಿ ಪೆರ್ಮುದೆ, ಶ್ರೀಕಾಂತ್ ಕಾಮತ್ ಭಾಗವಹಿಸಲಿದ್ದಾರೆ.ಹಿರಿಯ ಭಾಗವತ ಪುತ್ತಿಗೆ ರಘುರಾಮ ಹೊಳ್ಳರಿಗೆ ಗೌರವಾರ್ಪಣೆ ನಡೆಯಲಿದೆ. ಸಮಾರಂಭದಲ್ಲಿ ಶಂಕರ ನಾರಾಯಣ ಮೈರ್ಪಾಡಿ, ಶ್ರೀಧರ ಶೆಟ್ಟಿ ಕೊಕ್ಕಾರುಗುತ್ತು ಪೆರ್ಮುದೆ, ಜಗದೀಶ್ ಆಚಾರ್ಯ ಜೋಕಟ್ಟೆ, ಕೃಷ್ಣಪ್ಪ ಪೂಜಾರಿ ಬೊಟ್ಟಿಕೆರೆ, ಜನಾರ್ದನ ಡಿ. ಶೆಟ್ಟಿಗಾರ್ ಅವರನ್ನು ಸನ್ಮಾನಿಸಲಾಗುವುದು.
ಸಂಜೆ 6.30 ರಿಂದ ಪಾವಂಜೆ ಮೇಳದವರಿಂದ ‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ನಡೆಯಲಿದೆ.ಶನಿವಾರ ಸಂಜೆ 4ಕ್ಕೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕೇಂದ್ರೀಯ ಮಹಿಳಾ ಘಟಕದ 8 ನೇ ವಾರ್ಷಿಕೋತ್ಸವ ನಡೆಯಲಿದೆ.
ಶಕುಂತಳಾ ರಮಾನಂದ ಭಟ್, ಚಂದ್ರಕಲಾ ಬಾಲಕೃಷ್ಣ ಶೆಟ್ಟಿ, ಭಾರತಿ ಗಂಗಾಧರ್, ಮಮತಾ ಹೆಗ್ಡೆ, ಸತ್ಯವತಿ ಡಿ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸುವರು.ಸಂಜೆ 4.15 ರಿಂದ ಮಹಿಳಾ ಕಲಾವಿದೆಯರಿಂದ ದಶಾವತಾರ ಯಕ್ಷರೂಪಕ ನಡೆಯಲಿದೆ. ಸಂಜೆ 5 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರತಿಭಾ ಎಲ್. ಸಾಮಗ ವಹಿಸಲಿದ್ದಾರೆ. ಪಟ್ಲ ಸತೀಶ್ ಶೆಟ್ಟಿ, ಪೂರ್ಣಿಮಾ ಯತೀಶ್ ರೈ, ಆರತಿ ಆಳ್ವ ಉಪಸ್ಥಿತಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅಶೋಕ್ ಶೆಟ್ಟಿ ತಡಂಬೈಲ್, ಪದ್ಮಪ್ರಸಾದ್ ಜೈನ್ , ದೀಪಕ್ ಶೆಟ್ಟಿ ಲಿಂಗಮಾರು ಗುತ್ತು, ವಿದ್ಯಾ ರಾಕೇಶ್, ಪೂರ್ಣಿಮಾ ಪ್ರಭಾಕರ್ ರಾವ್ ಪೇಜಾವರ, ಸುಜಾತ ಧನಂಜಯ ಶೆಟ್ಟಿ ಹೊಸಬೆಟ್ಟು, ಚೈತ್ರಾ ಶೆಟ್ಟಿ ಭಾಹವಹಿಸಲಿದ್ದಾರೆ.
ಸಮಾರಂಭದಲ್ಲಿ ಜಯಲಕ್ಷ್ಮೀ ಕಾರಂತ್ ಮಂಗಲ್ಪಾಡಿ, ಜ್ಯೋತಿ ಸುನೀಲ್ ಶೆಟ್ಟಿ ಕಾರ್ಕಳ ಇವರನ್ನು ಸನ್ಮಾನಿಸಲಾಗುವುದು. ಚೈತ್ರಾ ಎಚ್ ರಾವ್, ವೈಷ್ಣವಿ ಸಾತ್ವಿಕ್ ರಾವ್, ಮೈತ್ರಿ ಭಟ್ ಮವ್ವಾರು ಇವರಿಗೆ ಯಕ್ಷಧ್ರುವ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆಯೆಂದು ಪ್ರಕಟಣೆ ತಿಳಿಸಿದೆ.