ಕನ್ನಡಪ್ರಭ ವಾರ್ತೆ ಸೊರಬ ಜಗತ್ತಿನಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಹಬಾಳ್ವೆ ನೆಲೆಗೊಳಿಸಲು ಸಂತರು ಪ್ರವಾದಿಗಳು, ಬಸವಾದಿ ಶರಣರು ಆಧ್ಯಾತ್ಮಿಕ ಚಿಂತನೆ ಸಂದೇಶಗಳನ್ನು ನೀಡಿದ್ದಾರೆ. ಅವರ ದಾರಿಯಲ್ಲಿ ನಡೆದರೆ ಸಮಾಜ ಸನ್ಮಾರ್ಗದಲ್ಲಿ ನಡೆಯಲು ಸಾಧ್ಯ ಎಂದು ಜಡೆ ಸಂಸ್ಥಾನ ಮಠದ ಡಾ. ಮಹಾಂತ ಸ್ವಾಮಿಗಳು ನುಡಿದರು. ಪಟ್ಟಣದ ದಾರುಸ್ಸಲಾಂ ಶಾದಿ ಮಹಲ್‌ನಲ್ಲಿ ಜಮಾ-ಅತೆ ಇಸ್ಲಾಮಿ ಹಿಂದ್ ವತಿಯಿಂದ ಹಮ್ಮಿಕೊಂಡಿದ್ದ ಪ್ರವಾದಿ ಮುಹಮ್ಮದ್ ಅವರ ಜೀವನ ಸಂದೇಶ ಅಭಿಯಾನದ ಸೀರತ್ ಪ್ರವಚನ ಕಾರ್ಯಕ್ರಮ ಹಾಗೂ ಯೋಗೇಶ್ ಮಾಸ್ತರ್ ರಚಿಸಿರುವ ನನ್ನ ಅರಿವಿನ ಪ್ರವಾದಿ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಪ್ರವಾದಿಗಳು, ಏಸುಕ್ರಿಸ್ತ, ಬಸವಾದಿ ಶರಣರು ಹಾಕಿಕೊಟ್ಟ ಆಧ್ಯಾತ್ಮಿಕ ಅನುಭಾವದ ನೆಲೆಯಲ್ಲಿ ನಡೆಯುವುದರೊಂದಿಗೆ ಸೌಹಾರ್ದತೆ ಸಮಾಜ ನಿರ್ಮಾಣ ಮಾಡುವಲ್ಲಿ ಎಲ್ಲರೂ ಪ್ರಯತ್ನಿಸಬೇಕು ಎಂದರು. ಜಮಾ-ಅತೆ ಇಸ್ಲಾಮ್ ಹಿಂದ್‌ನ ರಾಜ್ಯ ಕಾರ್ಯದರ್ಶಿ ಅಕ್ಬರ್ ಆಲಿ ಉಡುಪಿ ಮಾತನಾಡಿ, ಜೀವನವೆಂಬ ಪರೀಕ್ಷೆಯಲ್ಲಿ ಸುಖ, ಶಾಂತಿ, ನೆಮ್ಮದಿ, ದುಃಖ ಎಲ್ಲವೂ ಇರುತ್ತವೆ. ಭಗವಂತನ ದಯೆಯಿಂದ ಉದಯಿಸಿದ ಜಗತ್ತಿನಲ್ಲಿ ಹುಟ್ಟು ಸಾವು ಸಹಜ. ಎಲ್ಲಾ ರೋಗ ರುಜಿಣಗಳಿಗೆ ಚಿಕಿತ್ಸೆ ಇದೆ. ಆದರೆ ಮರಣ ಎನ್ನುವ ದೇಹಕ್ಕೆ ಚಿಕಿತ್ಸೆ ಇಲ್ಲ ಎಂದ ಅವರು, ಪ್ರವಾದಿ ಮೊಹಮ್ಮದ್ ಅವರ ಜೀವನ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಡೆಯುವ ಅಗತ್ಯವಿದೆ ಎಂದರು. ಮೊಹಮ್ಮದ್ ಯಾಸೀನ್, ಮೊಹಮ್ಮದ್ ಶಾಬುಲಾಲ್, ಸೈಯದ್ ರೆಹಮಾನ್, ಹಾಪೀಜ್ ಅಲಿ ಹಸನ್, ಶಹಬಾಜ್, ಖುತ್ಬುದ್ದಿನ್ ಹಜ್ರತ್, ಮುಸ್ತಾಕ್ ಅಹಮದ್, ಅಬ್ದುಲ್ ರಶೀದ್, ಇನಾಯತ್, ಫಯಾಜ್, ಅತೀಕುರ್ ರೆಹಮಾನ್, ಮಹಮ್ಮದ್ ಸಾಜಿದ್, ಜಿ.ಪಂ. ಮಾಜಿ ಉಪಾಧ್ಯಕ್ಷ ಪಾಣಿ ರಾಜಪ್ಪ, ತಾಪಂ ಮಾಜಿ ಸದಸ್ಯ ಕೆ. ಮಂಜುನಾಥ್, ಪಾಲಾಕ್ಷಪ್ಪ, ಬಂಗಾರಸ್ವಾಮಿ, ಡಿಎಸ್‌ಎಸ್ ರಾಜ್ಯ ವಿಭಾಗೀಯ ಸಂಚಾಲಕ ಗುರುರಾಜ್, ಪರಶುರಾಮ ಸಣ್ಣಬೈಲು, ಜಾಹಿರುದ್ದೀನ್, ಅಹಮದ್ ಶರೀಫ್, ಎಂ. ಬಷೀರ್‌ಅಹಮದ್, ಶಬ್ಬೀರ್ ಖಾನ್ ಸೇರಿದಂತೆ ಮೊದಲಾದವರಿದ್ದರು. - - - -05ಕೆಪಿಸೊರಬ02: ನನ್ನ ಅರಿವಿನ ಪ್ರವಾದಿ ಪುಸ್ತಕವನ್ನು ಜಡೆ ಸಂಸ್ಥಾನ ಮಠದ ಡಾ. ಮಹಾಂತ ಸ್ವಾಮೀಜಿ ಬಿಡುಗಡೆ ಮಾಡಿದರು.