ಕನ್ನಡಪ್ರಭ ವಾರ್ತೆ ಮುಳಬಾಗಿಲುತಾಲೂಕಿನಾದ್ಯಂತ ಕೆರೆ ಕುಂಟೆಗಳ ಅಕ್ರಮ ಒತ್ತುವರಿ ಮಾಡಿರುವುದನ್ನು ಜಿಲ್ಲಾಧಿಕಾರಿ ಸೂಚನೆಯ ಮೇರೆಗೆ ತೆರವುಗೊಳಿಸಲಾಗುತ್ತಿದೆ ಎಂದು ತಹಸೀಲ್ದಾರ್ ವಿ.ಗೀತಾ ತಿಳಿಸಿದರು.ತಾಲೂಕು ಕಚೇರಿಯಲ್ಲಿ ಉಪತಹಸೀಲ್ದಾರ್, ಆರ್‌ಐಗಳು, ಕೃಷಿ ಮತ್ತು ಸರ್ವೆ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
34 ಕೆರೆಗಳ ಸರ್ವೇ ಪೂರ್ಣತಾಲೂಕಿನಾದ್ಯಂತ ಜಿಪಂಗೆ ಸೇರಿದ ೫೮೪ ಕೆರೆಗಳು, ಸಣ್ಣ ನೀರಾವರಿ ಇಲಾಖೆಗೆ ಸೇರಿದ ೩೫ ಕೆರೆಗಳು ಮತ್ತು ೨೧೯ ಕುಂಟೆಗಳು, ನಗರ ಪ್ರದೇಶದಲ್ಲಿ ೬ ಕೆರೆಗಳು ಇದ್ದು ಈ ಪೈಕಿ ಸಣ್ಣ ನೀರಾವರಿ ಇಲಾಖೆಗೆ ಸೇರಿದ ೩೪ ಕೆರೆಗಳ ಸರ್ವೇ ಕಾರ್ಯ ಮುಗಿದಿದೆ. ನಗವಾರ ಕೆರೆ ೧ ಮಾತ್ರ ಬಾಕಿ ಉಳಿದಿದೆ ಎಂದು ಹೇಳಿದರು.ಜಿ.ಪಂ ೩೬೧, ೭೧ ಕುಂಟೆಗಳು ಸರ್ವೇ ಕಾರ್ಯ ನಡೆಸಲಾಗಿದ್ದು ಮೇ ೧೫ರೊಳಗೆ ಎಲ್ಲಾ ಕೆರೆ ಕುಂಟೆಗಳ ಸರ್ವೆ ಕಾರ್ಯ ಮಾಡಿ ಅಕ್ರಮ ಒತ್ತುವರಿ ತೆರವುಗೊಳಿಸಿ ಬಯೋ ಫೆನ್ಸಿಂಗ್ ಹಾಕಿ ಹೆಬ್ಬೇವು, ಕತ್ತಾಳೆ ಗಿಡಗಳನ್ನು ಬೆಳಸಿ ಸಂರಕ್ಷಿಸಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.ಬೆಳೆ ಕಟಾವು ಬಳಿಕ ತೆರವು
ಸುಮಾರು ಕೆರೆಗಳಲ್ಲಿ ರೈತರು ವಿವಿಧ ಬೆಳೆಗಳನ್ನು ಬೆಳೆದಿದ್ದು ಸ್ವಯಂ ಪ್ರೇರಣೆಯಿಂದ ಬೆಳೆ ತೆಗೆದುಕೊಂಡು ಒತ್ತುವರಿ ತೆರವುಗೊಳಿಸಬೇಕೆಂದು ಮನವಿ ಮಾಡಿದರಲ್ಲದೆ ೨ನೇ ಹಂತದಲ್ಲಿ ರಾಜಕಾಲುವೆ, ಗುಂಡುತೋಪು, ಗೋಮಾಳ, ಸರಕಾರಿ ಜಮೀನುಗಳನ್ನು ಒತ್ತುವರಿ ಮಾಡಿರುವುದನ್ನು ತೆರವುಗೊಳಿಸಲು ತೀರ್ಮಾನಿಸಿರುವುದಾಗಿ ಹೇಳಿದರು. ಬಗರ್‌ಹುಕುಂ ಸಾಗುವಳಿ ಚೀಟಿಗಳು ಸೇರಿದಂತೆ ಇತರೆ ದಾಖಲೆಗಳನ್ನು ರೆಕಾರ್ಡ್ ರೂಂನಲ್ಲಿ ಕಂಪ್ಯೂಟರ್‌ನಲ್ಲಿ ಸ್ಯಾನಿಂಗ್ ಮಾಡಿ ಆಪ್‌ಲೋಡ್ ಮಾಡಲು ಎಲ್ಲ ಗ್ರಾಮ ಲೆಕ್ಕಿಗರು ತಾಲೂಕು ಕಚೇರಿಯಲ್ಲಿ ಕೆಲ ದಿನಗಳ ಕಾಲ ಕೆಲಸ ಮಾಡಲು ಬಳಸಿಕೊಳ್ಳಲಾಗುತ್ತಿದ್ದು ಕೆಲ ದಿನಗಳ ಕಾಲ ಪೀಲ್ಡ್‌ಗೆ ಹೋಗದೇ ತಾಲೂಕು ಕಚೇರಿಯಲ್ಲೇ ಇರಲು ಸೂಚಿಸಲಾಗಿದೆ ಎಂದು ವಿವರಿಸಿದರು. ಕೃಷಿ ಹೊಂಡಗಳ ಸುರಕ್ಷತೆಕೃಷಿ ಹೋಂಡಗಳಲ್ಲಿ ಯಾವುದೇ ಅನಾಹುತಗಳು ಆಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಮತ್ತು ರಸ್ತೆಗಳಲ್ಲಿ ಕಣ ಹಾಕದಂತೆ ಕರಪತ್ರಗಳನ್ನು ಮುದ್ರಿಸಿ ಗ್ರಾಮಗಳಲ್ಲಿ ರೈತರಿಗೆ ಅರಿವು ಮೂಡಿಸುವ ಕಾರ್ಯ ನಡೆಸಲು ಈಗಾಗಲೇ ಕೃಷಿ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದರು. ತಾಪಂ ಇಒ ಡಾ.ಕೆ. ಸರ್ವೇಶ್ ಮಾತನಾಡಿ, ನರೇಗ ಯೋಜನೆಯಡಿ ಕೆರೆಗಳ ಸಮಗ್ರ ಅಭಿವೃದ್ಧಿಗೆ ಮುಂದಾಗಿದ್ದು ರಾಜಕಾಲುವೆ, ತೂಬು ರಿಪೇರಿ, ಕೆರೆಕಟ್ಟೆ ಮತ್ತು ಕೆರೆಗಳ ಅಭಿವೃದ್ದಿಗೆ ಕ್ರಮ ಕೈಗೊಳ್ಳಲಾಗಿದೆ. ಯಾರೇ ಬಲಾಢ್ಯರು ಕೆರೆಗಳ ಒತ್ತುವರಿ ಮಾಡಿದರೂ ಸಹ ಪೊಲೀಸ್ ಬಂದೋಬಸ್ತ್‌ನೊಂದಿಗೆ ತೆರವು ಕಾರ್ಯಾಚರಣೆ ಮಾಡಲಾಗುವುದು ಎಂದು ಅವರು ಎಚ್ಚರಿಸಿದರು. ರೈತರು, ಸಂಘಸಂಸ್ಥೆಗಳ ಮುಖಂಡರು ಕೆರೆಗಳ ತೆರವು ಕಾರ್ಯಾಚರಣೆಗೆ ಸಹಕರಿಸಬೇಕೆಂದು ತಹಸೀಲ್ದಾರ್ ಮನವಿ ಮಾಡಿದರು. ಈ ಸಂದರ್ಭದಲ್ಲಿ ತಾಲೂಕು ಶಿರಸ್ತೇದ್ದಾರ್ ಸುಬ್ರಮಣಿ, ಉಪ ತಹಸೀಲ್ದಾಗಳಾದ ಕೊಂಡಪ್ಪ, ವೆಂಕಟೇಶ್, ಎಡಿಎಲ್‌ಆರ್ ನಿವೇದಿತ, ಕೃಷಿ ಇಲಾಖೆ ಎಡಿ ರವಿಕುಮಾರ್, ಆರ್‌ಐಗಳಾದ ಸತೀಶ್, ಸದಾಹತ್ತುಲ್ಲಾಖಾನ್ ಇದ್ದರು.