ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ
ಮಠಮಾನ್ಯಗಳ ಪರಂಪರೆಯಿಂದ ಮಾತ್ರ ಸಂಸ್ಕೃತಿ, ಧರ್ಮದ ಉಳಿವು ಸಾಧ್ಯವಾಗಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಅಭಿಪ್ರಾಯಪಟ್ಟರು.ಹೋಬಳಿ ಕೇಂದ್ರದ ಪುರವರ್ಗ ಹಿರೇಮಠದ ವತಿಯಿಂದ ಪೇಟೆ ಬೀದಿಯಲ್ಲಿರುವ ಶ್ರೀ ಬಸವೇಶ್ವರ ದೇವಾಲಯದಲ್ಲಿ 15ನೇ ವರ್ಷದ ಶರ ನ್ನವರಾತ್ರಿ ಪೂಜಾ ಕಾರ್ಯಕ್ರಮ ನಡೆಯಿತು. ಇದರ ಅಂಗವಾಗಿ ಲೋಕಕಲ್ಯಾಣಾರ್ಥಕವಾಗಿ ನಡೆದ ದುರ್ಗಾ ಜಪಾಯಜ್ಞ ಮಹಾಪೂರ್ಣಾಹುತಿಯಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿ ಮಾತನಾಡಿದರು. ಪ್ರತಿವರ್ಷದಂತೆ ಈ ವರ್ಷವೂ ಶರನ್ನವರಾತ್ರಿ ದುರ್ಗಾಷ್ಟಮಿ ಪ್ರಯುಕ್ತ ಶ್ರೀ ಮಠದ ವತಿಯಿಂದ ಕಳೆದ 9 ದಿನಗಳಿಂದಲೂ ವಿಶೇಷ ಪೂಜೆ ಹವನಗಳು ನಡೆಯುತ್ತಿವೆ. ಲೋಕಕಲ್ಯಾಣಾರ್ಥಕವಾಗಿ ದುರ್ಗಾ ಜಪ ಯಜ್ಞವು ನಡೆಯುತ್ತಿದೆ. ಮೈಸೂರು ದಸರವು ಕನ್ನಡ ನಾಡಿನ ಪರಂಪರೆಯನ್ನು ಇಡೀ ವಿಶ್ವಕ್ಕೆ ತೋರಿಸಿದೆ ಶ್ರೀ ಮಠದ ವತಿಯಿಂದ ಹಲವು ಸಮಾಜಮುಖಿ ಕೆಲಸಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಮುಂಬರುವ ದಿನಗಳಲ್ಲಿ ಶ್ರೀಮಠದ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ನೀಡುವುದಾಗಿ ತಿಳಿಸಿದರು.ಪುರವರ್ಗ ಹಿರೇಮಠದ ಡಾ.ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ. ಕಳೆದ 15 ವರ್ಷಗಳಿಂದ ಶ್ರೀಮಠದ ವತಿಯಿಂದ ಗ್ರಾಮದಲ್ಲಿ ದುರ್ಗಾಷ್ಟಮಿ ಪ್ರಯುಕ್ತ ಪೂಜೆ ನಡೆಸಿಕೊಂಡು ಬರಲಾಗುತ್ತಿದೆ. 9 ದಿನವೂ ವಿವಿಧ ಪೂಜೆಗಳೊಂದಿಗೆ ದುರ್ಗಾದೇವಿಗೆ ಪೂಜೆ ನೈವೇದ್ಯ ನಡೆಸಲಾಗಿತ್ತು. ಪ್ರತಿದಿನವೂ ಭಕ್ತರಿಗೆ ಅನ್ನದಾಸೋಹ ಕಾರ್ಯಕ್ರಮ ಭಕ್ತರ ಸಹಕಾರದಿಂದ ನೆರವೇರಿತು. ಪೂಜಾ ಕಾರ್ಯಕ್ರಮದ ಅಂಗವಾಗಿ ಗ್ರಾಮದ ಸುಮಂಗಲಿಯರಿಗೆ ಬಾಗಿನ ಅರ್ಪಣೆ ಕಾರ್ಯಕ್ರಮ ಪ್ರತಿ ವರ್ಷದಂತೆ ಈ ವರ್ಷವೂ ಶ್ರೀಮಠದ ವತಿಯಿಂದ ಆಯೋಜಿಸಲಾಗಿತ್ತು ಎಂದರು.ಅಪರ ಜಿಲ್ಲಾಧಿಕಾರಿ ಮಂಜುನಾಥ್ ಮಾತನಾಡಿ, ದುರ್ಗಾದೇವಿಯ ಆರಾಧನೆಯಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ದೊರಕುವುದು, ಮೈಸೂರು ದಸರಾ ಮಹೋತ್ಸವ ಕೇವಲ ಕರ್ನಾಟಕವಲ್ಲದೆ ಇಡೀ ದೇಶದ ಹೆಸರು ವಿಶ್ವಮಟ್ಟದಲ್ಲಿ ಹೆಸರು ಮಾಡುವಂತೆ ಮಾಡಿದೆ ಎಂದರು. ಶ್ರೀಮಠದ ವತಿಯಿಂದ ಏರ್ಪಡಿಸಿದ್ದ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಮಾಜಿ ಜಿಪಂ ಸದಸ್ಯೆ ಕುಸುಮ ಸಿ.ಎನ್. ಬಾಲಕೃಷ್ಣ ಪಾಲ್ಗೊಂಡು ಸುಮಂಗಲಿಯರಿಗೆ ಬಾಗಿನ ಅರ್ಪಿಸಿದರು.ಧಾರ್ಮಿಕ ಕಾರ್ಯಕ್ರಮದಲ್ಲಿ ಹೆಸಳೂರು ಬೃಹನ್ ಮಠದ ಶ್ರೀ ಚನ್ನ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಕರ್ಪೂರ ಜಂಗಮ ಮಠದ ಶ್ರೀ ಅಭಿನವ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಅಂಬಲ ದೇವರಹಳ್ಳಿ ಮಠದ ಶ್ರೀ ಉಜ್ಜೈನೇಶ್ವರ ಸ್ವಾಮೀಜಿ, ಕೆಂಬಾಳು ಆಶ್ರಮದ ಹಿರಿಯಣ್ಣಯ್ಯ ಶ್ರೀ, ಚರಣ್ ಗುರೂಜಿ, ಅರ್ಚಕರ ಸಂಘದ ಅಧ್ಯಕ್ಷ ಶ್ರೀಧರ್ ಮೂರ್ತಿ, ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ರಾಜಣ್ಣ, ಜಿಲ್ಲಾ ವೀರಶೈವ ಸಮಾಜದ ಜಿಲ್ಲಾ ಕಾರ್ಯದರ್ಶಿಗಳಾದ ಎಂ ಎಸ್ ಸುರೇಶ್, ಕೃಪಾ ಶಂಕರ್, ನಾಗರಿಕ ವೇದಿಕೆ ಅಧ್ಯಕ್ಷ ತೋಟಿ ನಾಗರಾಜ್, ಕಾಂಗ್ರೆಸ್ ಮುಖಂಡ ಅಣತಿ ಆನಂದ್, ಉದ್ಯಮಿ ಅಣತಿ ಯೋಗೇಶ್, ಗ್ರಾಪಂ ಅಧ್ಯಕ್ಷ ಎನ್ ಎಸ್ ಮಂಜುನಾಥ್, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್ ನಂಬಿಹಳ್ಳಿ, ತಾಲೂಕು ಅಧ್ಯಕ್ಷರಾದ ಪರಮ ಗಂಗಾಧರ್, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ್, ಮಹಿಳಾ ಮೋರ್ಚಾದ ವೀಣಾ ಲೋಕೇಶ್, ಛಾಯ ಕೃಷ್ಣಮೂರ್ತಿ, ತಾಲೂಕು ವೀರಶೈವ ಸಮಾಜದ ನಿರ್ದೇಶಕ ಆರ್ ರುದ್ರಸ್ವಾಮಿ ಸೇರಿದಂತೆ ಭಕ್ತರು ಪಾಲ್ಗೊಂಡಿದ್ದರು.