ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಿರುವ ಶಿಕ್ಷಕಿ ಸುಸನ್ನಾ

KannadaprabhaNewsNetwork |  
Published : Sep 14, 2025, 01:04 AM IST
ಪೋಟೊ ಕ್ಯಾಪ್ಸನ್:ಡಂಬಳ ಗ್ರಾಮದ ಉರ್ದುಸರ್ಕಾರಿ ಪ್ರಾಥಮಿಕ ಹಿರಿಯ ಶಾಲೆಯಲ್ಲಿ  ಇಂಗ್ಲಿಷ್ ಲ್ಯಾಬ್  ತಯಾರಿಸಿದ ಇಂಗ್ಲಿಷ್ ಭಾಷಾ ಶಿಕ್ಷಕಿ  ಸುಸನ್ನಾ ಕನವಳ್ಳಿ ಜೋತೆ ವಿದ್ಯಾರ್ಥಿನಿಯರು.ಪೋಟೊ ಕ್ಯಾಪ್ಸನ್:ಸುಸನ್ನಾ ಕನವಳ್ಳಿ  ಇಂಗ್ಲಿಷ್ ಭಾಷಾ ಶಿಕ್ಷಕಿ ಉರ್ದುಸರ್ಕಾರಿ ಪ್ರಾಥಮಿಕ ಹಿರಿಯ ಶಾಲೆ ಡಂಬಳ. | Kannada Prabha

ಸಾರಾಂಶ

ತಮ್ಮ ಮನಮುಟ್ಟುವ ಕಲಿಕೆಯ ಮೂಲಕ ನೂರಾರು ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಿರುವ ಡಂಬಳ ಉರ್ದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಇಂಗ್ಲಿಷ್ ಭಾಷಾ ಶಿಕ್ಷಕಿ ಸುಸನ್ನಾ ಕನವಳ್ಳಿ ಅವರಿಗೆ ಈ ಬಾರಿ "ಕಲಾಸಿರಿ ಆದರ್ಶ ಶಿಕ್ಷಕಿ ಪ್ರಶಸ್ತಿ " ಒಲಿದು ಬಂದಿದೆ.

ರಿಯಾಜಅಹ್ಮದ ಎಂ. ದೊಡ್ಡಮನಿ

ಕನ್ನಡಪ್ರಭ ವಾರ್ತೆ ಡಂಬಳ

ತಮ್ಮ ಮನಮುಟ್ಟುವ ಕಲಿಕೆಯ ಮೂಲಕ ನೂರಾರು ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಿರುವ ಡಂಬಳ ಉರ್ದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಇಂಗ್ಲಿಷ್ ಭಾಷಾ ಶಿಕ್ಷಕಿ ಸುಸನ್ನಾ ಕನವಳ್ಳಿ ಅವರಿಗೆ ಈ ಬಾರಿ "ಕಲಾಸಿರಿ ಆದರ್ಶ ಶಿಕ್ಷಕಿ ಪ್ರಶಸ್ತಿ " ಒಲಿದು ಬಂದಿದೆ.

ಬೇತುವೆಲ್ ಕನವಳ್ಳಿ, ಫಬಿಯೊಲಾ ದಲಬಂಜನ ಅವರು ಸುಸನ್ನಾ ಅವರ ತಂದೆ-ತಾಯಿಗಳು. ಗದಗ ಲೈಲಾ ಕಾನ್ವೆಂಟ್ ಪ್ರಾಥಮಿಕ ಮತ್ತು ಪ್ರೌಢ, ಪಿಯುಸಿ ಲೈಲಾ ಕಾನ್ವೆಂಟ್‌ ಕಾಲೇಜಿನಲ್ಲಿ, ಬಿಎ ಕೆಎಸ್‌ಇ ಮಹಿಳಾ ಕಾಲೇಜು, ಬಿಇಡಿ ಜಗದ್ಗುರು ಪಂಚಾಚಾರ್ಯ ಕಾಲೇಜು, ಎಂಎ ಕೆವಿಎಸ್‌ಆರ್ ಕಾಲೇಜು, ಎಂಇಡಿ ಕವಿವಿ ಚಿನ್ನದ ಪದಕ, ಕೆ.ಸೆಟ್‌, ನೆಟ್‌ ಪಾಸಾಗಿದ್ದಾರೆ.

2018ರಲ್ಲಿ ಇಲ್ಲಿನ ಉರ್ದು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲಿಷ್ ಭಾಷಾ ಶಿಕ್ಷಕಿಯಾಗಿ ವೃತ್ತಿ ಜೀವನ ಆರಂಭಿಸಿ 6 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.

ಹಲವು ಪ್ರಶಸ್ತಿ: ಶಿಕ್ಷಕಿಯಾದ ಸುಸನ್ನಾ ಬಿ. ಕನವಳ್ಳಿ ಗದಗ ಜಿಲ್ಲಾ ನೌಕರರ ಸಂಘದಿಂದ ಉತ್ತಮ ಶಿಕ್ಷಕಿ, ಗದಗ ಎಂ.ಜಿ.ಸೇವಾ ಸಮಿತಿಯಿಂದ ಉತ್ತಮ ಶಿಕ್ಷಕ ರತ್ನ ಪ್ರಶಸ್ತಿ, ಶಾಲಾ ಶಿಕ್ಷಣ ಕಲ್ಯಾಣ ಪ್ರತಿಷ್ಠಾಣನದಿಂದ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸೆ. 14ರಂದು ಕಲಾ ನಿಂಗು ಸೊಲಗಿ (ಕುಷ್ಟಗಿ) ಅವರ ನೆನಪಿಗಾಗಿ ಕೊಡಮಾಡುವ ಕಲಾಸಿರಿ ಆದರ್ಶ ಶಿಕ್ಷಕಿ ಪ್ರಶಸ್ತಿ ಸುಸನ್ನಾ ಅವರಿಗೆ ನೀಡಿ ಗೌರವಿಸಲಾಗುವುದು.

ಇಂಗ್ಲಿಷ್ ಲ್ಯಾಬ್ ಸಂಚಲನ: ತಮ್ಮ ಶಾಲೆಯಲ್ಲಿ ಇಂಗ್ಲಿಷ್ ಲ್ಯಾಬ್ ಸ್ಥಾಪಿಸಿ ಹಲವು ಕಲಿಕಾ ಆಯಾಮಗಳ‌ ಮೂಲಕ ಮಕ್ಕಳಲ್ಲಿ ಕೌಶಲ್ಯತೆ ಹೆಚ್ಚಿಸಿದ ಶ್ರೇಯಸ್ಸು ಇವರದಾಗಿದೆ.

ಸರ್ಕಾರಿ ಕೊರ್ಲಹಳ್ಳಿ ಶಾಲೆ, ಗದಗ ನಗರದ ರಾಜೀವ ಗಾಂಧಿ, ಡಂಬಳ ಗ್ರಾಮದ ಡಿಪಿಇಪಿ, ಗದಗ ನಗರದ ಕೆಜಿಎಸ್ ಖಾನತೋಟ 2ನೇ ಸಂಖ್ಯೆಯ ಶಾಲೆಯಲ್ಲಿ ಆಕರ್ಷಕ ಚಿತ್ರಗಳ ಬಿಡಿಸಿ ಹಿರಿಮೆ ಮೆರೆದಿದ್ದಾರೆ. ಆ ಮೂಲಕ ಯಾವುದೇ ಪ್ರತಿಷ್ಟಿತ ಖಾಸಗೀ ಶಾಲೆಗೆ ತಮ್ಮ ಶಾಲೆ ಕಮ್ಮಿ ಇಲ್ಲ ಎನ್ನುವುದನ್ನು ಸಾರಿ ಹೇಳಿದ್ದಾರೆ.

ಹಿರಿಯ ಶಿಕ್ಷಣಾಧಿಕಾರಿಗಳ, ಸಿಆರ್‌ಪಿ ಮತ್ತು ಶಿಕ್ಷಕರ ಸಹಕಾರದಿಂದ ಇಂಗ್ಲಿಷ್ ಲ್ಯಾಬ್ ಮೂಲಕ ಇಂಗ್ಲಿಷ್ ಕಾರ್ಯಾಗಾರ ಮಾಡಲು ಸಾಧ್ಯವಾಗಿದೆ. ಈಗ ಕಲಾಸಿರಿ ಆದರ್ಶ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆಯಾಗಿರುವುದು ಸಂತೋಷ ತಂದಿದೆ ಎಂದು ಡಂಬಳ ಸರ್ಕಾರಿ ಉರ್ದು ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕಿ ಸುಸನ್ನಾ ಕನವಳ್ಳಿ ಹೇಳಿದರು.

ಮಕ್ಕಳ ಕಲಿಕೆಗಾಗಿ ಸೃಜನಾತ್ಮಕವಾಗಿ ಕಾರ್ಯ ಮಾಡುತ್ತಿರುವ ಶಿಕ್ಷಕಿ ಸುಸನ್ನಾ ಕನವಳ್ಳಿ ಅವರನ್ನು ಗುರುತಿಸಿ ತಾಲೂಕು ಮಟ್ಟದ ಕಲಾಸಿರಿ ಆದರ್ಶ ಶಿಕ್ಷಕಿ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಪ್ರಶಂಸನೀಯ ಎಂದು ಡಿಡಿಪಿಐ ಆರ್‌.ಎಸ್‌. ಬುರಡಿ ಹೇಳಿದರು.

PREV

Recommended Stories

ಶ್ರೀ ಶ್ರೀ ರವಿಶಂಕರ್‌ಗೆ ವರ್ಲ್ಡ್ ಲೀಡರ್ ಫಾರ್ ಪೀಸ್ ಆ್ಯಂಡ್‌ ಸೆಕ್ಯೂರಿಟಿ ಪ್ರಶಸ್ತಿ
ಹಾಡಹಗಲೇ ಮನೆಗೆ ನುಗ್ಗಿ ಚಹಾ ವ್ಯಾಪಾರಿಯ ಕತ್ತು ಕೊಯ್ದು ಹತ್ಯೆ