ಸ್ವಾಮಿ ವಿವೇಕಾನಂದರು ಯುವಕರ ಪ್ರೇರಕ ಶಕ್ತಿ: ರುದ್ರಪ್ಪ ಲಮಾಣಿ

KannadaprabhaNewsNetwork |  
Published : Jan 13, 2026, 02:45 AM IST
ಫೋಟೊ ಶೀರ್ಷಿಕೆ: 12ಆರ್‌ಎನ್‌ಆರ್7ರಾಣಿಬೆನ್ನೂರು ನಗರದ ಹಲಗೇರಿ ರಸ್ತೆಯ ಬಿಎಜೆಎಸ್‌ಎಸ್‌ಬಿ ಇಡಿ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಸ್ವಾಮಿ ವಿವೇಕಾನಂದರ ಜಯಂತ್ಯುತ್ಸವವನ್ನು ವಿಧಾನಸಭೆ ಉಪಸಭಾಪತಿ ರುದ್ರಪ್ಪ ಲಮಾಣಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಸ್ವಾಮಿ ವಿವೇಕಾನಂದರು ಯುವ ಜನತೆಯ ಅದಮ್ಯ ಚೇತನರಾಗಿ ಭಾರತೀಯ ಸಾಂಸ್ಕೃತಿಕ ಪರಂಪರೆಯನ್ನು ವಿಶ್ವದಾದ್ಯಂತ ಪಸರಿಸಿದ ಸಾಂಸ್ಕೃತಿಕ ರಾಯಭಾರಿ ಎಂದು ವಿಧಾನಸಭೆ ಉಪಸಭಾಪತಿ ರುದ್ರಪ್ಪ ಎಂ. ಲಮಾಣಿ ಹೇಳಿದರು.

ರಾಣಿಬೆನ್ನೂರು: ಸ್ವಾಮಿ ವಿವೇಕಾನಂದರು ಯುವ ಜನತೆಯ ಅದಮ್ಯ ಚೇತನರಾಗಿ ಭಾರತೀಯ ಸಾಂಸ್ಕೃತಿಕ ಪರಂಪರೆಯನ್ನು ವಿಶ್ವದಾದ್ಯಂತ ಪಸರಿಸಿದ ಸಾಂಸ್ಕೃತಿಕ ರಾಯಭಾರಿ ಎಂದು ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಎಂ. ಲಮಾಣಿ ಹೇಳಿದರು.ನಗರದ ಹಲಗೇರಿ ರಸ್ತೆಯ ಬಿಎಜೆಎಸ್‌ಎಸ್ ಬಿಇಡಿ ಕಾಲೇಜಿನಲ್ಲಿ ಸೋಮವಾರ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಬಿಎಜೆಎಸ್‌ಎಸ್ ಪದವಿಪೂರ್ವ ಮಹಾವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಸ್ವಾಮಿ ವಿವೇಕಾನಂದರ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾಮಿ ವಿವೇಕಾನಂದರು ಜ್ಞಾನ, ಆಧ್ಯಾತ್ಮ, ತತ್ವಶಾಸ್ತ್ರಗಳ ಅಪೂರ್ವ ಸಂಗಮದ ಮೇರು ಪರ್ವತ. ಅವರ ಆದರ್ಶ ಮೌಲ್ಯಗಳನ್ನು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದರು.ಸಾಹಿತಿ ಪ್ರೊ.ಎಚ್.ಎ.ಭಿಕ್ಷಾವರ್ತಿಮಠ ಮಾತನಾಡಿ, ಯುವಕರಿಗೆ ವಿವೇಕಾನಂದರ ಬದುಕೇ ಒಂದು ಸಂದೇಶ. ಎಲ್ಲ ಧರ್ಮಗಳ ವಿವೇಕವಾಣಿ ಶ್ರೀ ಸ್ವಾಮಿ ವಿವೇಕಾನಂದರು ಹಾಗೂ ವಿವೇಕದಲ್ಲಿಯೇ ಆನಂದವಿದೆ ಎಂದರು.ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕಿ ಲತಾ ಬಿ.ಎಚ್. ಮಾತನಾಡಿ, ಯುವಕರ ಉತ್ಸಾಹ ಕಲ್ಲಿದ್ದಲ ಕಾವಾಗಬೇಕು. ನಮ್ಮ ದೇಶದ ನಿಜವಾದ ಆಸ್ತಿ ಪ್ರಜ್ಞಾವಂತ ಯುವ ಜನತೆ ಎಂದರು.ಡಾ.ಮೃತ್ಯುಂಜಯ ಎಂ.ಎಂ. ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಎಚ್.ಬಿ. ಪಟ್ಟಣಶೆಟ್ಟಿ, ಎನ್ನೆಸ್ಸೆಸ್ ಅಧಿಕಾರಿ ಪ್ರೊ. ಪರಶುರಾಮ ಪವಾರ, ಹೇಮಗಿರಿ ಅಂಗಡಿ, ಪ್ರೊ.ಶಿವಕುಮಾರ ಬಿಸಲಳ್ಳಿ, ಪ್ರೊ.ಎ. ಶಂಕರನಾಯ್ಕ, ಡಾ. ಎಚ್.ಐ. ಬ್ಯಾಡಗಿ, ಪ್ರೊ.ಶ್ರೀಕಾಂತ ಗೌಡಶಿವಣ್ಣನವರ, ಪ್ರೊ. ಅಶೋಕ ಬಣಕಾರ, ಜೆ.ಎಸ್. ಯರಿಸ್ವಾಮಿ, ಮುತ್ತುರಾಜ ಸಿದ್ದಣ್ಣನವರ, ಚಂದನ ಕಿಚಡಿ, ಶ್ವೇತಾ, ಪದ್ಮ, ಸುನೀತಾ, ನಿಕೇತನ ಕಮ್ಮಾರ, ಲಕ್ಷ್ಮಿ ಹಣಚಿಕ್ಕಿ, ಪೂಜಾ ಹೆಗಡೇರ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆ ಕೋರಿಕೆ : ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ