ದೇಶಾಭಿಮಾನ, ಪರಿಸರ ಜಾಗೃತಿ ಮೂಡಿಸುವ ಮಿಠಾಯಿ ಅಂಗಡಿಗಳು

KannadaprabhaNewsNetwork |  
Published : Jan 07, 2026, 02:45 AM IST
ಪೋಟೊ6ಕೆಎಸಟಿ1: ಕೊಪ್ಪಳದ ಗವಿಶಿದ್ಧೇಶ್ವರ ಜಾತ್ರಾ ಅಂಗವಾಗಿ ಹಾಕಲಾಗಿರುವ ಮಿಠಾಯಿ ಅಂಗಡಿಗಳಲ್ಲಿ ಜಾಗೃತಿಯ ಸಂದೇಶಗಳು. | Kannada Prabha

ಸಾರಾಂಶ

ಕೊಪ್ಪಳ ನಗರದ ಹೊರ ವಲಯದಲ್ಲಿ ಸ್ಥಾಪಿತವಾಗುತ್ತಿರುವ ಬಲ್ಡೋಟಾ ಕಾರ್ಖಾನೆ ವಿರುದ್ಧ ಈಗಾಗಲೆ ಹೋರಾಟಗಳು ನಡೆಯುತ್ತಿದ್ದು

ಪರಶಿವಮೂರ್ತಿ ದೋಟಿಹಾಳ ಕೊಪ್ಪಳ

ದಕ್ಷಿಣ ಭಾರತದ ಕುಂಭಮೇಳ ಎಂದೆ ಪ್ರಸಿದ್ಧಿ ಪಡೆದ ಗವಿಸಿದ್ದೇಶ್ವರ ಜಾತ್ರೆ ಕೇವಲ ಜಾತ್ರೆಯಾಗದೆ ಸಾಮಾಜಿಕ, ವೈಚಾರಿಕ ಹಾಗೂ ಪರಿಸರ ಜಾಗೃತಿಗೆ ಮುನ್ನುಡಿ ಬರೆಯುತ್ತಿದೆ.

ಇದಕ್ಕೆ ಪೂರಕವೆಂಬಂತೆ ಜಾತ್ರೆಯಲ್ಲಿನ ಮಿಠಾಯಿ ವ್ಯಾಪಾರಿಗಳು ತಮ್ಮ ಮಿಠಾಯಿ ಅಂಗಡಿಗಳಲ್ಲಿ ರಾಷ್ಟ್ರಾಭಿಮಾನ, ಧರ್ಮದ ಬಗ್ಗೆ ಕಾಳಜಿ ಮೂಡುವಂತಹ ಘೋಷ ವಾಕ್ಯ ಹಾಕುವ ಮೂಲಕ ಸಾಮಾಜಿಕ ಜವಾಬ್ದಾರಿ ಮೆರೆಯುವ ಮೂಲಕ ಜನ ಜಾಗೃತಿ ಮೂಡಿಸುತ್ತಿವೆ.

ನಗರದ ಗವಿಮಠದ ಆವರಣದಲ್ಲಿ ಗವಿಸಿದ್ದೇಶ್ವರ ಜಾತ್ರೆ ಅಂಗವಾಗಿ ಹಾಕಲಾಗಿರುವ ಮಿಠಾಯಿ ಅಂಗಡಿಗಳಲ್ಲಿ ಮಾಲಿಕರು ಸಿಹಿ ಪದಾರ್ಥ ಮಾರಾಟ ಮಾಡುವ ಜತೆಗೆ ಘೋಷ ವಾಕ್ಯಗಳ ಮೂಲಕ ಸಾಮಾಜಿಕ ತಿಳಿವಳಿಕೆ ಮೂಡಿಸುವ ಪ್ರಯತ್ನ ಮಾಡಿರುವದು ಶ್ಲಾಘನೀಯ ಕಾರ್ಯವಾಗಿದ್ದು, ವ್ಯಾಪಾರಿಗಳು ಪ್ರತಿ ವರ್ಷದಂತೆ ಈ ವರ್ಷವೂ ಸಹಿತ ಕರದಂಟು, ಜಿಲೇಬಿ, ಮೈಸೂರುಪಾಕ, ಚುರುಮುರಿ, ಬೆಂಡು, ಬೆತ್ತಾಸ್ ಸೇರಿದಂತೆ ಇತರೆ ಪದಾರ್ಥ ಮಾರಾಟ ಮಾತ್ರವಲ್ಲದೇ, ಜನರಲ್ಲಿ ಜಾಗೃತಿ ಮೂಡಿಸುವ ಮಹತ್ವದ ಸಂದೇಶ ಸಾರುವ ಮೂಲಕ ತಮಗಿರುವ ಜವಾಬ್ದಾರಿ ಮೆರೆದಿರುವುದು ಜಾತ್ರೆಯಲ್ಲಿ ಆಕರ್ಷಕವೆನಿಸಿದೆ.

ಕೊಪ್ಪಳ ನಗರದ ಹೊರ ವಲಯದಲ್ಲಿ ಸ್ಥಾಪಿತವಾಗುತ್ತಿರುವ ಬಲ್ಡೋಟಾ ಕಾರ್ಖಾನೆ ವಿರುದ್ಧ ಈಗಾಗಲೆ ಹೋರಾಟಗಳು ನಡೆಯುತ್ತಿದ್ದು, ಜಾತ್ರೆಯ ಮಿಠಾಯಿ ಅಂಗಡಿಗಳಲ್ಲಿಯೂ ಕೂಡ ಬಲ್ಡೋಟಾ ಹಟಾವೂ ಕೊಪ್ಪಳ ಬಚಾವೋ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಮಾಲಿನ್ಯ ಮುಕ್ತ ಕೊಪ್ಪಳ ಬೇಕು, ಮಾಲಿನ್ಯ ಉಂಟು ಮಾಡುವ ಕಾರ್ಖಾನೆ ಬೇಡ, ಆರೋಗ್ಯ ಮೊದಲು ಕಾರ್ಖಾನೆ ನಂತರ ಕೊಪ್ಪಳ ಜಿಲ್ಲಾ ರಕ್ಷಣೆ ನಮ್ಮೆಲ್ಲರ ಹೊಣೆ, ಎಂಎಸ್ಪಿಎಲ್ ವಿಸ್ತರಣೆ ನಿಲ್ಲಿಸಿ, ಕಾರ್ಖಾನೆ ಕಳಿಸಿ ಕೊಪ್ಪಳ ಉಳಿಸಿ, ಸರ್ಕಾರಿ ಶಾಲೆ ಉಳಿಯಲಿ ಬಡವರ ಬಾಳು ಬೆಳಗಲಿ, ಸರ್ಕಾರಿ ಶಾಲೆ ಮುಚ್ಚಿದರೆ ಮುಚ್ಚುವುದು, ಪ್ರತಿಭೆಗಳು ಕನಸು, ಭಾರತದ ಬಾವುಟ ಹಾರಾಡುತ್ತಿರುವುದು ಗಾಳಿಯಿಂದಲ್ಲ ನಮ್ಮ ಯೋಧರ ಉಸಿರಿನಿಂದ, ಧರ್ಮೋ ರಕ್ಷತಿ ರಕ್ಷಿತಃ, ಶೌರ್ಯ ಬರಿ ಮಾತಲ್ಲ ಮಹಾಕಾರ್ಯ ಸಿಂಧೂರ ಕೇವಲ ಗುರುತಲ್ಲ ತ್ಯಾಗದ ಪ್ರತಿಜ್ಞೆ, ಆಪರೇಷನ್ ಸಿಂಧೂರ ಖೇಲ್ ಅಭಿ ಭಾಕಿ ಹೈ, ಭಯೋತ್ಪಾದನೆ ತೊಲಗಿಸಿದಿದ್ದರೆ ತಾಯಿಯ ಒಡಲು ಉಳಿಯದುಂಟೆ, ಪರಿಸರ ಬೆಳೆಸಿ ಕೊಪ್ಪಳ ಜಿಲ್ಲಾ ಉಳಿಸಿ, ನಿರ್ಮಲ ತುಂಗಭದ್ರಾ ಅಭಿಯಾನ ಮಲಿನ ತೊಲಗಿಸಿ ತುಂಗಭದ್ರಾ ಉಳಿಸಿ, ಮರವಿದ್ದರೆ ಮಳೆ, ಮಳೆ ಇದ್ದರೆ ರೈತ, ರೈತ ಇದ್ದರೆ ದೇಶ, ಮರದೊಳ್ ಅಮರ ಸಾಲುಮರದ ತಿಮ್ಮಕ್ಕ, ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ, ಅನ್ನ ಕೊಡುವ ರೈತನಿಗೆ ಮತ್ತು ದೇಶ ಕಾಯುವ ಯೋಧನಿಗೆ ಗೌರವ ಕೊಡಿ, ನುಡಿಯಿಂದ ಧರ್ಮವಲ್ಲ ನಡೆಯಿಂದ ಧರ್ಮ, ರೈತ ಇಲ್ಲದಿದ್ದರೆ ಮಣ್ಣು ತಿನ್ನಬೇಕು ಯೋಧ ಇಲ್ಲದಿದ್ದರೆ ಮಣ್ಣಿಗೆ ಹೋಗಬೇಕು, ರೈತರ ಬೆಳೆಗೆ ಬೆಲೆ ಇಲ್ಲ ಸೈನಿಕನ ಸಾವಿಗೆ ಕೊನೆ ಇಲ್ಲ, ನಮ್ಮ ನಾಡು ನಮ್ಮ ನುಡಿ, ರೈತರ ಬೆಳೆಗಳಿಗೆ ಬೆಂಬಲ ನೀಡಿ ರೈತರಿಗೆ ಸಾಲದಿಂದ ಮುಕ್ತಿ ನೀಡಿ ಸೇರಿದಂತೆ ಇಂತಹ ಅನೇಕ ಘೋಷವಾಕ್ಯ ಹಾಕುವ ಮೂಲಕ ಎಲ್ಲ ತರಹದ ಜಾಗೃತಿ ಮೂಡಿಸುವ ಮೂಲಕ ಮಿಠಾಯಿ ಅಂಗಡಿಗಳ ಈ ಜಾಗೃತಿ ಕಾರ್ಯವೂ ಎಲ್ಲರ ಮೆಚ್ಚುಗೆ ಪಡೆದುಕೊಂಡಿವೆ.

ಮಿಠಾಯಿ ತೆಗೆದುಕೊಳ್ಳಲು ಬರುವ ಪ್ರತಿಯೊಬ್ಬರೂ ಮಿಠಾಯಿ ನೋಡುವ ಮುನ್ನ ಈ ಘೋಷ ವಾಕ್ಯ ಮೇಲೆ ಕಣ್ಣು ಹಾಯಿಸುತ್ತಾರೆ. ಇದರಿಂದ ಸ್ವಲ್ಪವಾದರೂ ಜನರಲ್ಲಿ ಜಾಗೃತಿ ಮೂಡಿಸಲು ಸಹಕಾರಿಯಾಗಿದೆ ಎಂದು ಮಿಠಾಯಿ ಅಂಗಡಿ ಮಾಲಿಕ ಮೋದಿನಸಾಬ್‌

ಕೊಪ್ಪಳ ಗವಿಸಿದ್ಧೇಶ್ವರ ಜಾತ್ರೆಯು ಕೇವಲ ಮಜಾ ಮಾಡಿ ಹೋಗುವ ಜಾತ್ರೆಯಲ್ಲ ಇದೊಂದು ಸಾಮಾಜಿಕ ಕಳಕಳಿಯುಳ್ಳ ಜನರಲ್ಲಿ ದೇಶಾಭಿಮಾನ ಹಾಗೂ ಪರಿಸರ ಕಾಳಜಿ ಮೂಡಿಸುವ ಜಾಗೃತಿಯ ಜಾತ್ರೆಯಾಗಿದೆ ಎಂದು ಜಾತ್ರೆಗೆ ಬಂದಿರುವ ಭಕ್ತ ಶ್ರೀನಿವಾಸ ವಿ ಕೆ.ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಲ್ಲಿ ಬಸವಣ್ಣ ಜೀವ ವೈವಿಧ್ಯ ಉದ್ಯಾನವನ
ಕೆಎಂಎಫ್‌ನಲ್ಲಿ ಉದ್ಯೋಗದ ನೆಪದಲ್ಲಿ50 ಲಕ್ಷ ವಂಚನೆ:ಇಬ್ಬರ ವಿರುದ್ಧ ಕೇಸ್‌