ಕನ್ನಡಪ್ರಭ ವಾರ್ತೆ ಟಿ.ನರಸೀಪುರ
ರಸ್ತೆಬದಿ ವ್ಯಾಪಾರಿಗಳನ್ನು ಸ್ಥಳಾಂತರಗೊಳಿಸುವ ಸಂಬಂಧ ಇಂದಿರಾ ಕ್ಯಾಂಟೀನ್ ಬಳಿ ಕರೆಯಲಾಗಿದ್ದ ವ್ಯಾಪಾರಿಗಳ ಕುಂದು ಕೊರತೆ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಸ್ತೆ ಬದಿ ವ್ಯಾಪಾರಿಗಳು ತಮಗೆ ನಿಗದಿ ಪಡಿಸಿದ ಸ್ಥಳದಲ್ಲಿ ವ್ಯಾಪಾರ ಮಾಡದೇ ರಸ್ತೆ ಮಧ್ಯಭಾಗದಲ್ಲಿಯೇ ವ್ಯಾಪಾರ ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗಿ ದೂರುಗಳು ಹಾಗೂ ಪತ್ರಿಕೆ, ಮಾಧ್ಯಮಗಳಲ್ಲಿ ಸಮಸ್ಯೆಗಳ ಬಗ್ಗೆ ವರದಿ ಪ್ರಕಟವಾಗುತ್ತಿರುವ ಹಿನ್ನೆಲೆ, ಪುಟ್ ಪಾತ್ ವ್ಯಾಪಾರಿಗಳನ್ನು ಶೀಘ್ರವಾಗಿ ಸ್ಥಳಾಂತರಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದರು.ಪುರಸಭೆ ವ್ಯಾಪ್ತಿಯಲ್ಲಿ ಎಲ್ಲೂ ಕೂಡ ಪುಟ್ ಪಾತ್ ನಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡಲಾಗುವುದಿಲ್ಲ. ಆದರೆ ವ್ಯಾಪಾರಸ್ಥರಿಗೆ ಅಗತ್ಯವಾಗಿ ಪರ್ಯಾಯ ಸ್ಥಳ ಗುರುತಿಸಿ, ಎಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ನಂತರವಷ್ಟೇ ವ್ಯಾಪಾರಿಗಳನ್ನು ಸ್ಥಳಾಂತರಿಸಲಾಗುತ್ತದೆ, ಒಂದು ತಿಂಗಳು ಅಥವಾ15 ದಿನಗಳ ಒಳಗೆ ಈ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ ಎಂದರು.
ಪಟ್ಟಣದ ಲಿಂಕ್ ರಸ್ತೆ, ಮಾರುಕಟ್ಟೆ ರಸ್ತೆ ಹಾಗೂ ಕೆಎಸ್.ಆರ್.ಟಿಸಿ ಬಸ್ ನಿಲ್ದಾಣದ ರಸ್ತೆಯಲ್ಲಿ ವ್ಯಾಪಾರ ಮಾಡುತ್ತಿರುವ ವ್ಯಾಪಾರಿಗಳು ತಮಗೆ ನಿಗದಿ ಪಡಿಸಿದ ಸ್ಥಳದ ಲಿಮಿಟ್ ಮೀರಿ ರಸ್ತೆಯಲ್ಲಿ ವ್ಯಾಪಾರ ಮಾಡುತ್ತಿರುವುದರಿಂದ ತೀವ್ರ ತೊಂದರೆ ಎದುರಾಗಿದೆ, ಹಾಗಾಗಿ ತುರ್ತಾಗಿ ವ್ಯಾಪಾರಿಗಳನ್ನು ಸ್ಥಳಾಂತರಿಸುವ ನಿರ್ಧಾರಕ್ಕೆ ಬರಲಾಗಿದೆ. ಪುರಸಭೆ ಹಾಗೂ ಪೊಲೀಸ್ ಇಲಾಖೆಯ ಈ ನಿರ್ಧಾರಕ್ಕೆ ಎಲ್ಲ ವ್ಯಾಪಾರಿಗಳು ಸಹಮತ ವ್ಯಕ್ತ ಪಡಿಸಬೇಕಿದೆ ಎಂದರು.ಮೈಸೂರು ಮಾದರಿ ಆಟೋ ನಿಲ್ದಾಣ:
ಕೆಎಸ್.ಆರ್.ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಸಾಕಷ್ಟು ವಿಶಾಲವಾದ ಜಾಗವಿದೆ. ಆಟೋದವರು ಎಲ್ಲೆಂದರಲ್ಲಿ ಪ್ರಯಾಣಕರನ್ನು ಪಿಕಪ್ ಮಾಡದೇ ನಿಗದಿತ ಸ್ಥಳದಲ್ಲೇ ಪಿಕಪ್ ಮಾಡುವ ಉದ್ದೇಶದಿಂದ ಮೈಸೂರು ಬಸ್ ನಿಲ್ದಾಣದ ಮುಂಭಾಗ ಇರುವಂತೆ ಆಟೋ ಸ್ಟ್ಯಾಂಡ್ ಮಾಡಲಾಗುತ್ತದೆ, ತಮಗಿಷ್ಟ ಬಂದಂತೆ ಆಟೋ ನಿಲ್ಲಿಸಲು ಪೊಲೀಸ್ ಇಲಾಖೆ ಕೂಡ ಬಿಡುವುದಿಲ್ಲ. ಹಾಗಾಗಿ ಆಟೋದವರು ಶಿಸ್ತುಬದ್ದವಾಗಿ ಪ್ರಯಾಣಿಕರನ್ನು ಸಾಗಿಸುವ ಕೆಲಸ ಮಾಡಬೇಕಿದೆ ಎಂದು ಮುಖ್ಯಾಧಿಕಾರಿ ಶ್ರೀನಿವಾಸ್ ಆಟೋ ಚಾಲಕರಿಗೆ ಸಲಹೆ ನೀಡಿದರು.ಪುರಸಭೆ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಕಾಶ್, ಸಮುದಾಯ ಸಂಘಟನಾಧಿಕಾರಿ ನಳಿನಿ, ಕಂದಾಯ ಅಧಿಕಾರಿ ತ್ರಿವೇಣಿ, ಕಿರಿಯ ಎಂಜಿನಿಯರ್ ಸಿದ್ದಪ್ಪ, ಕಚೇರಿ ವ್ಯವಸ್ಥಾಪಕ ಮಹೇಂದ್ರ, ಹಿರಿಯ ಆರೋಗ್ಯ ನಿರೀಕ್ಷಕಿ ಚಂಪಾಶ್ರೀ, ಪ್ರಥಮ ದರ್ಜೆ ಸಹಾಯಕರಾದ ಜಯಲಕ್ಷ್ಮಮ್ಮ, ಪ್ರಿಯಾಂಕ, ದ್ವಿತೀಯ ದರ್ಜೆ ಸಹಾಯಕರಾದ ಆಶಾ, ಗೋಪಾಲ್, ಹಿರೆಯ ವಾಲ್ಮೆನ್ ರಾಮು, ಅಟೆಂಡರ್ ನಿಂಗರಾಜು, ಪೌರ ಕಾರ್ಮಿಕರು, ವ್ಯಾಪಾರಿಗಳು ಇದ್ದರು.