ಕನ್ನಡಪ್ರಭ ವಾರ್ತೆ ಮೈಸೂರು
ಸಾಲ ಮರುಪಾವತಿ ಅವಧಿ ಹೆಚ್ಚಿಸಿ ರೈತನಿಗೆ ಕಿರುಕುಳ ಕೊಡುತ್ತಿರುವುದನ್ನು ಖಂಡಿಸಿ ನಗರದ ವಿ.ವಿ. ಮೊಹಲ್ಲಾದ ಆಧಾರ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಕಚೇರಿಗೆ ಮುಂಭಾಗದಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದವರು ಮಂಗಳವಾರ ಪ್ರತಿಭಟಿಸಿದರು.ಟಿ. ನರಸೀಪುರ ತಾಲೂಕು ದೊಡ್ಡನಹುಂಡಿಯ ರೈತ ಮಂಟೇಸ್ವಾಮಿ ಮನೆ ನಿರ್ಮಾಣಕ್ಕಾಗಿ ಆಧಾರ್ ಹೌಸಿಂಗ್ ಫೈನಾನ್ಸ್ ನಲ್ಲಿ ಸಾಲ ಪಡೆದಿದ್ದರು. 20 ವರ್ಷಕ್ಕೆ ಸಾಲ ಪಾವತಿ ನಿಗದಿ ಮಾಡಲಾಗಿತ್ತು. ಆದರೆ, ಕೋವಿಡ್ ಸಮಯದಲ್ಲಿ ಇಎಂಐ ಕಟ್ಟಿಲ್ಲದಿದ್ದರಿಂದ 8 ವರ್ಷ ಸಾಲ ಹೆಚ್ಚುವರಿಯಾಗಿ ಕಟ್ಟಬೇಕು ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದರು. ಇದರಿಂದ ಆಘಾತಗೊಂಡ ರೈತ ಆತ್ಮಹತ್ಯೆ ಯತ್ನಿಸಿದ್ದರು. ಇದನ್ನು ಖಂಡಿಸಿ ರೈತರು ಬ್ಯಾಂಕ್ ಕಚೇರಿಗೆ ಮುತ್ತಿಗೆ ಹಾಕಿ, ತಲೆ ಮೇಲೆ ಕಲ್ಲು ಹೊತ್ತುಕೊಂಡು ಅರಬೆತ್ತಲೆ ಚಳವಳಿ ನಡೆಸಿದರು.ಇದೇ ಏ.29 ರಂದು ಸಭೆ ಕರೆದು ದೊಡ್ಡನಹುಂಡಿ ಗ್ರಾಮದ ರೈತನ ಸಮಸ್ಯೆಯನ್ನು ಬಗೆಹರಿಸುವುದಾಗಿ ಫೈನಾನ್ಸ್ ಅಧಿಕಾರಿಗಳು ಒಪ್ಪಿಕೊಂಡು ನಂತರ 7 ದಿನಗಳ ಗಡುವು ನೀಡಿ ತಾತ್ಕಾಲಿಕವಾಗಿ ಚಳವಳಿಯನ್ನು ರೈತರು ಕೈಬಿಟ್ಟರು.ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾಧ್ಯಕ್ಷ ಸೋಮಶೇಖರ್, ಮುಖಂಡರಾದ ಕಿರಗಸೂರು ಶಂಕರ್, ಬರಡನಪುರ ನಾಗರಾಜ್, ಕುರುಬೂರು ಸಿದ್ದೇಶ್, ಮಾರ್ಬಳ್ಳಿ ನೀಲಕಂಠಪ್ಪ, ದೇವನೂರು ವಿಜಯೇಂದ್ರ, ಉಡಿಗಾಲ ರೇವಣ್ಣ, ಸುಂದರಪ್ಪ, ಗೌರಿಶಂಕರ, ಕಿರಗಸೂರು ಪ್ರಸಾದನಾಯಕ, ಕೋಟೆ ಸುನಿಲ್, ಗೌರಿಶಂಕರ, ಕುರುಬೂರು ಪ್ರದೀಪ್, ಗುರುಸ್ವಾಮಿ, ಪರಶಿವಮೂರ್ತಿ, ಬನ್ನೂರು ಸೂರಿ, ಅಂಬಳೆ ಮಂಜುನಾಥ್, ರಾಜೇಶ್, ನಂಜುಂಡ, ರಂಗರಾಜು, ಸತೀಶ್, ಗಿರೀಶ್, ಉಮೇಶ್, ನಾಗೇಂದ್ರ, ನಾಗೇಂದ್ರ, ಬಸವಣ್ಣ, ಶಿವಪ್ರಸಾದ್, ಶಂಭು, ಮಹೇಶ್, ರಾಮಮೂರ್ತಿ, ರವಿ, ಕುಮಾರ್, ಸಂದೀಪ್, ರಾಜಪ್ಪ, ಮಲ್ಲೇಶ್, ಶೇಖರಪ್ಪ, ನಾಗರಾಜಮೂರ್ತಿ, ರಾಜು, ಶಾಂತರಾಜು, ಪಾರ್ವತಮ್ಮ, ಜಯಲಕ್ಷ್ಮಿ, ಮುನಿಯಮ್ಮ, ಚಿಕ್ಕತಾಯಮ್ಮ, ನಾಗಮ್ಮ, ಮಲ್ಲಾಜಮ್ಮ, ಪುಟ್ಟಮ್ಮ ಇದ್ದರು.