ಅಂಕೋಲಾ:
ಮೂರನೇ ತುಳುನಾಡು ರಾಜ್ಯಮಟ್ಟದ ಓಪನ್ ಜಿ-4 ಟೇಕ್ವಾಂಡೋ ಸ್ಪರ್ಧೆಯಲ್ಲಿ ಅಂಕೋಲಾದ ಇಟಗಿ ಟೇಕ್ವಾಂಡೋ ಕ್ಲಬ್‌ನ ವಿದ್ಯಾರ್ಥಿಗಳು ಪೈಂಟಿಂಗ್ ಮತ್ತು ಪೊಂಮ್ಸೇ ಸ್ಪರ್ಧೆಯಲ್ಲಿ ಅತ್ಯುತ್ತಮ ಸಾಧನೆ ಪ್ರದರ್ಶಿಸಿ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕ ಗಳಿಸಿದ್ದಾರೆ.ಸ್ಕಂದ ಎಂ. ನಾಯಕ 2 ಚಿನ್ನ, ವರದಾ ವಿ. ಗೌಡ 1 ಚಿನ್ನ, 1 ಬೆಳ್ಳಿ, ರಾಹುಲ್ ಎಸ್. ತಾಳೆಕರ 2 ಬೆಳ್ಳಿ, ಮನೀಶ್ ಆರ್. ಗೌಡ 1 ಚಿನ್ನ, 1 ಬೆಳ್ಳಿ, ರಾಘವ್ ಡಿ. ದೇವನಮನೆ 2 ಚಿನ್ನ, ಚಿರಂತ್ ಎಸ್. ಅಲ್ಗೆರಿಕರ್ 2 ಚಿನ್ನ, ಅವನೀಶ್ ಎಂ. ಗುರವ್ 2 ಚಿನ್ನ, ನಂದನ್ ಎಚ್. ಕುಂಟೆಮನೆ 1 ಚಿನ್ನ, 1 ಬೆಳ್ಳಿ, ಸೃಜನ್ ಆರ್. ನಾಯ್ಕ 2 ಚಿನ್ನ, ಸುಜನ್ ಡಿ. ಗೌಡ 2 ಬೆಳ್ಳಿ, ಆರ್ನಾ ಆರ್. ಬಾಡಕರ್ 2 ಬೆಳ್ಳಿ, ವೈಷ್ಣವಿ ಎನ್. ನಾಯ್ಕ 2 ಕಂಚು, ಮಾಯಾ 1 ಚಿನ್ನ, 1 ಬೆಳ್ಳಿ, ನವ್ಯಾ ಎಸ್. ಗೌಡ 2 ಕಂಚು, ಸೃಷ್ಟಿ ಎಂ. ಗೌಡ 2 ಚಿನ್ನ, ಸನ್ನಿಧಿ ಪಿ. ಆಚಾರಿ 2 ಚಿನ್ನ, ನಂದಿನಿ ಎಸ್. ತಾಳೆಕರ್ 1 ಬೆಳ್ಳಿ, 1 ಕಂಚು, ಆರಾಧ್ಯ ಆರ್. ನಾಯ್ಕ 2 ಚಿನ್ನ, ಐಶ್ವರ್ಯಾ ಎನ್ ನಾಯ್ಕ1 ಚಿನ್ನ, 1 ಬೆಳ್ಳಿ, ಐಶಾನಿ ಎಸ್. ನಾಯ್ಕ 2 ಚಿನ್ನ,ದ ಪದಕ ತನ್ನದಾಗಿಸಿಕೊಂಡಿದ್ದಾರೆ.
ಸಾಧನೆಗೈದ ಇಂಬರಾಜ್ ನಾಡರ್ ತರಬೇತಿ ನೀಡಿದ್ದರು. ಮಂಗಳೂರಿನ ಯು.ಎಸ್. ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯಾವಳಿಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು 23 ಚಿನ್ನ, 10 ಬೆಳ್ಳಿ ಮತ್ತು 5 ಕಂಚಿನ ಪದಕ ಪಡೆದಿದ್ದಾರೆ.