ಕನ್ನಡಪ್ರಭ ವಾರ್ತೆ ಪಾಂಡವಪುರ
ಯೋಜನಾಧಿಕಾರಿ ಯಶವಂತ್ ಮಾತನಾಡಿ, ಮಹಿಳೆಯರಿಗೆ ಸ್ವ ಉದ್ಯೋಗ ಕಲ್ಪಿಸಿಕೊಡುವ ಉದ್ದೇಶದಿಂದ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯೂ ಜ್ಞಾನವಿಕಾಸ ಕಾರ್ಯಕ್ರಮ ಹಾಗೂ ಮಾನವ ಸಂಪನ್ಮೂಲ ತರಬೇತಿ ಕೇಂದ್ರ ವತಿಯಿಂದ ಉಚಿತವಾಗಿ ಟೈಲರಿಂಗ್ ತರಬೇತಿ ನೀಡಲಾಗುತ್ತಿದೆ. ಸಂಸ್ಥೆಯೂ ನೀಡುತ್ತಿರುವ ಇಂತಹ ತರಬೇತಿಗಳನ್ನು ಸದ್ಬಳಕೆ ಮಾಡಿಕೊಂಡು ಮಹಿಳೆಯರು ಸ್ವ ಉದ್ಯೋಗ ರೂಪಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಸ್ವ ಉದ್ಯೋಗದಲ್ಲಿ ತೊಡಗಿರುವ ಮಹಿಳೆಯರಿಗೆ ವಿಶೇಷವಾಗಿ ಬ್ಯಾಂಕಿನ ಮೂಲಕ ಸಾಲ ಸೌಲಭ್ಯ ಮತ್ತು ವಿಶೇಷ ತರಬೇತಿಯನ್ನು ಸಂಸ್ಥೆ ಯ ಮೂಲಕ ಒದಗಿಸಲಾಗಿದೆ ಎಂದರು.ತರಬೇತಿ ಕೇಂದ್ರದ ಪ್ರಾಂಶುಪಾಲ ದಿನೇಶ್ ಪೂಜಾರಿ ಮಾತನಾಡಿ, ಸ್ವ ಉದ್ಯೋಗದ ಮಹತ್ವ, ಮತ್ತು ಮಾರುಕಟ್ಟೆಯ ಕುರಿತು ಉದ್ಯಮ ಶೀಲತಾ ತರಬೇತಿಯ ಬಗ್ಗೆ ಮಾಹಿತಿ ನೀಡಿದರು.
ಸಂದರ್ಭದಲ್ಲಿ ಸ್ವಾಮಿಗೌಡ, ಶಿಕ್ಷಕಿ ಪ್ರಮೀಳಾ ಉಪಸ್ಥಿತರಿದ್ದರು. ತರಬೇತಿ ಸಂಸ್ಥೆಯ ಉಪನ್ಯಾಸಕಿ ಶ್ವೇತಾ, ಜ್ಞಾನ ವಿಕಾಸ ಸಮನ್ವಯಾದಿಕಾರಿ ತೇಜಸ್ವಿ, ಸೇವಾಪ್ರತಿನಿಧಿ ಮಂಜುಳಾ ಭಾಗವಹಿಸಿದ್ದರು.