ಟೈಲರ್‌ ವೃತ್ತಿ ಬಾಂಧವರು ಸಮಾಜದ ಶಕ್ತಿ: ಉಮಾನಾಥ ಕೋಟ್ಯಾನ್‌

KannadaprabhaNewsNetwork |  
Published : May 27, 2025, 01:06 AM IST
ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ (ರಿ ) ಮೂಲ್ಕಿ- ಹಳೆಯಂಗಡಿ ವಲಯ ಸಮಿತಿಯ ರಜತ ಸಂಭ್ರಮ | Kannada Prabha

ಸಾರಾಂಶ

ಮೂಲ್ಕಿ ಶ್ರೀ ನಾರಾಯಣ ಗುರು ವಿದ್ಯಾ ಸಂಸ್ಥೆಯ ಲೀಲಾ ಜಯ ಸುವರ್ಣ ಸಭಾಂಗಣದಲ್ಲಿ ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಮೂಲ್ಕಿ- ಹಳೆಯಂಗಡಿ ವಲಯ ಸಮಿತಿಯ ರಜತ ಸಂಭ್ರಮ ಕಾರ್ಯಕ್ರಮ ನೆರವೇರಿತು.

ಕನ್ನಡಪ್ರಭ ವಾರ್ತೆ ಮೂಲ್ಕಿಕಠಿಣ ಪರಿಶ್ರಮದಿಂದ ದುಡಿಯುವ ಟೈಲರ್‌ ವೃತ್ತಿ ಬಾಂಧವರು ಸಮಾಜದ ಶಕ್ತಿಯಾಗಿದ್ದು ಅವರ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಶಾಸಕ ಉಮಾನಾಥ ಕೋಟ್ಯಾನ್‌ ಹೇಳಿದ್ದಾರೆ.

ಮೂಲ್ಕಿ ಶ್ರೀ ನಾರಾಯಣ ಗುರು ವಿದ್ಯಾ ಸಂಸ್ಥೆಯ ಲೀಲಾ ಜಯ ಸುವರ್ಣ ಸಭಾಂಗಣದಲ್ಲಿ ಜರಗಿದ ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಮೂಲ್ಕಿ- ಹಳೆಯಂಗಡಿ ವಲಯ ಸಮಿತಿಯ ರಜತ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹಿರಿಯ ಟೈಲರ್ ವೃತ್ತಿ ಬಾಂಧವ ಮಹಾಬಲ ಅಂಚನ್ ಹಳೆಯಂಗಡಿ ಉದ್ಘಾಟಿಸಿದರು. ಕಾರ್ಡಿಯೋಲೈಟ್ ಸ್ಪೆಷಲಿಟಿ ಕೆಮಿಕಲ್ಸ್ ಇಂಡಿಯಾ ಲಿಮಿಟೆಡ್ ಮಂಗಳೂರು ರವರು ನೀಡಲ್ಪಟ್ಟ ಒಂದು ಲಕ್ಷ ಮೊತ್ತದಲ್ಲಿ 10 ಸದಸ್ಯರಿಗೆ ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು.

2024-2025ನೇ ಶೈಕ್ಷಣಿಕ ಸಾಲಿನಲ್ಲಿ ಎಸ್‌ ಎಸ್‌ ಎಲ್‌ ಸಿ ಯಲ್ಲಿ ಅತ್ಯಧಿಕ ಅಂಕ ಪಡೆದ ಟೈಲರ್ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಉಚಿತ ಪುಸ್ತಕ ವಿತರಣೆ ನಡೆಯಿತು. ಕೆ ಎಸ್ ಟಿ ಎ ಮೂಲ್ಕಿ ಹಳೆಯಂಗಡಿ ವಲಯ ಸಮಿತಿಯಲ್ಲಿ ಕಳೆದ 25 ವರ್ಷಗಳಲ್ಲಿ ನಿರಂತರ ಸೇವೆ ಮಾಡಿದ ಕೆ ರಮಾನಾಥ್ ಸುವರ್ಣ, ರವಿ ಜೆ ಅಮೀನ್ ಹಾಗೂ ಉದಯ ಅಮೀನ್ ಮಟ್ಟು ಅವರನ್ನು ಗೌರವಿಸಲಾಯಿತು. ಶ್ರೀ ನಾರಾಯಣ ಗುರು ವಿದ್ಯಾಸಂಸ್ಥೆಯ ಸಂಚಾಲಕ ಹರೀಂದ್ರ ಸುವರ್ಣ, ಮೂಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ವಾಮನ ಕೋಟ್ಯಾನ್ ನಡಿಕುದ್ರು, ಕೆ ಎಸ್ ಟಿ ಎ ಯ ರಾಜ್ಯಾಧ್ಯಕ್ಷ ನಾರಾಯಣ ಬಿ, ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ಕುಮಾರ್, ಜಿಲ್ಲಾಧ್ಯಕ್ಷೆ ವಿದ್ಯಾ ಕೆ ಶೆಟ್ಟಿ, ಕ್ಷೇತ್ರ ಸಮಿತಿ ಅಧ್ಯಕ್ಷ ಅಣ್ಣಪ್ಪ ಕೆ ಎಸ್, ವಲಯ ಸಮಿತಿ ಪದಾಧಿಕಾರಿಗಳಾದ ರವಿ ಜೆ ಅಮೀನ್, ಲ್ಯಾನ್ಸಿ ಡಿ ಅಲ್ಮೆಡ, ದೇವಿಕಾ ಪ್ರೀತಿಕಾ ಡಿ ಉಪಸ್ಥಿತರಿದ್ದರು. ಲ್ಯಾನ್ಸಿ ಡಿ ಅಲ್ಮೇಡಾ ಪ್ರಾಸ್ತಾವಿಸಿ ಸ್ವಾಗತಿಸಿದರು. ಪ್ರೀತಿಕಾ ಡಿ ವಂದಿಸಿದರು. ಉದಯ ಅಮೀನ್ ಮಟ್ಟು ಕಾರ್ಯಕ್ರಮ ನಿರೂಪಿಸಿದರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ