ಕನ್ನಡಪ್ರಭ ವಾರ್ತೆ ವಿಜಯಪುರ
ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಬಿಎಲ್‌ಒಗಳ ನಿರ್ಲಕ್ಷ್ಯ ಆರೋಪ ವಿಚಾರ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್.ಐ.ಆರ್ ನಿರ್ಲಕ್ಷ್ಯ ಮಾಡಿದರೆ ಸಿಎಂ ಡಿ.ಕೆ.ಶಿವಕುಮಾರ್ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಅಧಿಕಾರಿಗಳನ್ನು ಮನೆ ಮನೆಗೆ ಕಳುಹಿಸುವ ಆಡಳಿತ ರಾಜ್ಯ ಸರ್ಕಾರದಲ್ಲಿ ಇಲ್ವಾ? ರಾಜ್ಯ ಸರ್ಕಾರ ನಿದ್ದೆ ಮಾಡುತ್ತಿದೆಯಾ ಎಂದು ಕಿಡಿಕಾರಿದರು. ಸಾರ್ವಜನಿಕರು ಮೊಬೈಲ್‌ನಲ್ಲಿ ಅಪ್ಲೋಡ್ ಮಾಡಿ ಕಳುಹಿಸಬಹುದು ಎಂದರು.
ಮಸೀದಿಯಲ್ಲಿ ಪರಿಷ್ಕರಣೆ ಪ್ರಕ್ರಿಯೆ ವಿಚಾರದ ಕುರಿತು ಮಾತನಾಡಿ, ಕಾಂಗ್ರೆಸ್‌ನವರಿಗೆ ಅಲ್ಪಸಂಖ್ಯಾತರ, ಬಡವರ, ದಲಿತರ ಕಾಳಜಿ ಇಲ್ಲ. ರಾಹುಲ್ ಗಾಂಧಿ ಕುರಿತು ಮಾತ್ರ ಕಾಳಜಿ ಇದೆ. ಕಾರಣ ಎಸ್ಐಆರ್‌ನಿಂದ ರಾಹುಲ್ ಗಾಂಧಿ ಪೌರತ್ವ ಹೋಗುತ್ತದೆ. 1994ರಲ್ಲಿ ರಾಹುಲ್ ಗಾಂಧಿ ಬ್ರಿಟಿಷ್ ಪೌರತ್ವ ಪಡೆದಿದ್ದಾರೆ. ಈಗ ಎಸ್ಐಆರ್‌ನಿಂದ ಎರಡು ಪೌರತ್ವ ಪಡೆದಿರುವ ವಿಚಾರ ಬಹಿರಂಗವಾಗುತ್ತದೆ. ಈ ವಿಚಾರ ರಾಹುಲ್ ಬಹಿರಂಗಪಡಿಸಿಲ್ಲ. ಸಂಸದನ ಸ್ಥಾನಕ್ಕೂ ಕುತ್ತು ಬರುತ್ತದೆ ಎಂದು ಭಯ ಕಾಡುತ್ತಿದೆ. ಅದಕ್ಕಾಗಿ ದೇಶದ ಉದ್ದಕ್ಕೂ ಗಲಾಟೆ ಮಾಡುತ್ತಿದ್ದಾರೆ. ಮತದಾರತ ಪಟ್ಟಿ ಪರಿಷ್ಕರಣೆಯಿಂದ ಜನಸಾಮಾನ್ಯರಿಗೆ ತೊಂದರೆ ಆಗಲ್ಲ ಎಂದು ಹೇಳಿದರು.ಆರ್‌ಎಸ್ಎಸ್ ಪಥ ಸಂಚನಲಕ್ಕೆ ಪರ್ಮಿಷನ್ ಕಡ್ಡಾಯ ಎಂಬ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿ, ಪರವಾನಗಿ ಪಡೆದೇ ಪಥ ಸಂಚಲನ ಮಾಡಲಾಗುತ್ತದೆ. ಆರ್‌ಎಸ್ಎಸ್‌ನವರು ಯಾವುದೇ ಕಾರ್ಯಕ್ರಮ ಮಾಡಿದರೂ ಪರವಾನಗಿ ಪಡೆದು ನಿಯಮಾನುಸಾರ ಕಾರ್ಯಕ್ರಮ ಮಾಡುತ್ತಾರೆ. ಆರ್‌ಎಸ್ಎಸ್ ಸಂಘಟನೆ ರಾಜಕೀಯ ಸಂಘಟನೆಯಲ್ಲ ಎಂದು ಹೇಳಿದರು.