- ಹರಿಹರ ತಾಲೂಕು ಕಚೇರಿಯಲ್ಲಿ ರಾಜ್ಯೋತ್ಸವ ಪೂರ್ವಭಾವಿ ಸಭೆ
- - -ಹರಿಹರ: ಕನ್ನಡ ರಾಜೋತ್ಸವವನ್ನು ಅತ್ಯಂತ ಅರ್ಥಪೂರ್ಣ ಹಾಗೂ ಅದ್ಧೂರಿಯಾಗಿ ಆಚರಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಬಿ.ಪಿ.ಹರೀಶ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ರಾಜ್ಯೋತ್ಸವ ಆಚರಣೆ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕನ್ನಡ ರಾಜೋತ್ಸವ ಕೇವಲ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳಿಗೆ ಸೀಮಿತವಾಗಿದೆ. ಸಾರ್ವಜನಿಕರು ಸಹ ಪಾಲ್ಗೊಳ್ಳುವಂತೆ ಜಾಗೃತಿ ಮೂಡಿಸಬೇಕು. ನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣ ಮಾಡಬೇಕು. ಕನ್ನಡಪರ ಸಂಘಟನೆ ಪದಾಧಿಕಾರಿಗಳು, ಹಿರಿಯ ಮುಖಂಡರನ್ನು ಒಳಗೊಂಡ ಸಮಿತಿ ರಚಿಸಿ ಪ್ರಮುಖರನ್ನು ಬಳಸಿಕೊಂಡು ಹಬ್ಬ ಆಚರಣೆ ಆಗಲಿ ಎಂದು ಸೂಚನೆ ನೀಡಿದರು.ಕರುನಾಡ ಕದಂಬ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಎಚ್.ಸುಧಾಕರ್ ಮಾತನಾಡಿ, ಗಾಂಧಿ ಮೈದಾನದಲ್ಲಿ ನೆರವೇರಿಸುವ ವೇದಿಕೆಗೆ ಮಯೂರ ವರ್ಮನ ಹೆಸರನ್ನು ಇಡಬೇಕು ಎನ್ನುವುದು ಸೇರಿದಂತೆ ಇತರೆ ಸಲಹೆಗಳನ್ನು ನೀಡಿದರು.
ಕಸಾಪ ಜಿಲ್ಲಾ ಮಾಜಿ ಅಧ್ಯಕ್ಷ ಎಸ್.ಎಚ್.ಹೂಗಾರ್, ಕಾರ್ಮಿಕ ಮುಖಂಡ ಎಚ್.ಕೆ.ಕೊಟ್ರಪ್ಪ, ಬಿ.ಮುಗ್ದಂ, ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ರಿಯಾಜ್ ಆಹ್ಮದ್, ವಿವಿಧ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ವಿವಿಧ ಸಲಹೆ ನೀಡಿದರು.ಸಭೆಯಲ್ಲಿ ಪ್ರಭಾರ ತಹಸೀಲ್ದಾರ್ ಎಚ್.ಬಿ. ಪ್ರಭಾಕರ್ ಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಡಿ. ದುರುಗಪ್ಪ, ನಗರಸಭೆ ಎಇಇ ವಿನಯಕುಮಾರ್, ಪಿಎಸ್‌ಐ ಶ್ರೀಪತಿ ಗಿನ್ನಿ, ಸಮಾಜ,ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಹನುಮಂತಪ್ಪ ಲಮಾಣಿ, ಟಿಎಚ್‌ಒ ಡಾ.ಅಬ್ದುಲ್ ಖಾದರ್, ಕೃಷಿ ಸಹಾಯಕ ನಿರ್ದೇಶಕ ನಟರಾಜ್, ಕಸಾಪ ತಾಲೂಕು ಗೌರವ ಕಾರ್ಯದರ್ಶಿ ಚಿದಾನಂದ ಎಂ. ಕಂಚಿಕೇರಿ, ಮಂಜುನಾಥ್ ಪೂಜಾರ್, ರಮೇಶ್ ಮಾನೆ, ಪ್ರೀತಂ ಬಾಬು, ರಾಜೇಶ್ ಇತರರಿದ್ದರು.
- - --24ಎಚ್‌ಆರ್‌ಆರ್03.ಜೆಪಿಜಿ:
ಹರಿಹರದ ತಾಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ತಾಲೂಕು ಆಡಳಿತ ವತಿಯಿಂದ ರಾಜ್ಯೋತ್ಸವ ಆಚರಣೆ ಪೂರ್ವಭಾವಿ ಸಭೆಯಲ್ಲಿ ಶಾಸಕ ಬಿ.ಪಿ.ಹರೀಶ್, ಎಚ್.ಬಿ.ಪ್ರಭಾಕರ್ ಗೌಡ, ಡಿ.ದುರುಗಪ್ಪ ಇನ್ನಿತರರು ಪಾಲ್ಗೊಂಡರು.