ಮಂಡ್ಯ:
ನಗರದ ಮಿಮ್ಸ್ ಆವರಣದಲ್ಲಿ ಸೌಹಾರ್ಧ ಸಾಂಸ್ಕೃತಿಕ ಕಲಾ ತಂಡದಿಂದ ರಾಷ್ಟ್ರೀಯ ಆರೋಗ್ಯ ಅಭಯಾನದಡಿ ನಡೆದ ಆರೋಗ್ಯ ಅರಿವು ಬೀದಿ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದರು.
ಪ್ರಾಥಮಿಕ ಆರೋಗ್ಯ ಶಿಕ್ಷಣಾಕಾರಿ ಎಂ.ಶೋಭಾ ಮಾತನಾಡಿ, ತಾಲೂಕಿನ ಆಯ್ದ ಹಳ್ಳಿಗಳಲ್ಲಿ ಆರೋಗ್ಯದ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸಲು ಬೀದಿನಾಟಕ ಕಾರ್ಯಕ್ರಮ ಆಯೋಜಿಸಲಾಗಿದೆ. ಭಾಷಣ ಮಾಡುವುದಕ್ಕಿಂತ ನಾಟಕ ರೂಪದಲ್ಲಿ ತಿಳಿವಳಿಕೆ ಹೇಳಿದರೆ ಪರಿಣಾಮಕಾರಿಯಾಗಿ ಅರ್ಥವಾಗುತ್ತದೆ ಎಂದರು.ಕಲಾ ತಂಡದ ಕಲಾವಿದರು ಕ್ಷಯ, ಕುಷ್ಠರೋಗ, ತಾಯಿ ಮಗುವಿನ ಆರೋಗ್ಯ, ಆಯುಸ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ಮಹತ್ವ ಕುರಿತು ಬೀದಿ ನಾಟಕ ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಇಂಟರ್ ನ್ಯಾಷನಲ್ ಅಲಯನ್ಸ್ ಒಂದನೇ ರಾಜ್ಯಪಾಲ ಕೆ.ಎಸ್.ಚಂದ್ರಶೇಖರ್, ಪರಿಸರ ಅಲಯನ್ಸ್ ಅಧ್ಯಕ್ಷ ಸಂತೆಕಸಲಗೆರೆ ಬಸವರಾಜು, ಆರೋಗ್ಯ ಇಲಾಖೆ ಶಿವಲಿಂಗು, ರಾಮಚಂದ್ರು, ಕಲಾತಂಡದ ಮುಖ್ಯಸ್ಥ ಹನಿಯಂಬಾಡಿ ಶೇಖರ್, ಕಲಾವಿದರಾದ ವೈರಮುಡಿ, ದೇವರಾಜ್ ಕೊಪ್ಪ, ಯರಹಳ್ಳಿ ಹೊನ್ನೇಶ್, ರಾಮಕೃಷ್ಣ, ಅನುಸೂಯ ಭಾಗವಹಿಸಿದ್ದರು.
ಮಂಡ್ಯ: ನಗರದ ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನ ಪ್ಲೇಸ್‌ಮೆಂಟ್ ಸಭಾಂಗಣದಲ್ಲಿ ಫೆ.6ರಂದು ವಕೀಲರ ಸಂಘ, ಪಿಇಎಸ್ ಕಾನೂನು ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದಿಂದ ವಕೀಲ ವೃತ್ತಿಯಲ್ಲಿ 50 ವಸಂತಗಳನ್ನು ಪೂರೈಸಿರುವ ಹಿರಿಯ ವಕೀಲ ಬಸವಯ್ಯ ಅವರಿಗೆ ಗುರುವಂದನೆ ಹಾಗೂ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹೈಕೋರ್ಟ್ ನ್ಯಾಯಮೂರ್ತಿ ಎಸ್.ಪಿ.ಸಂದೇಶ್ ಸಮಾರಂಭ ಉದ್ಘಾಟಿಸಲಿದ್ದು, ನಿವೃತ್ತ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ಅವರು ವಕೀಲ ಬಸವಯ್ಯ ಅವರನ್ನು ಸನ್ಮಾನಿಸುವರು.