ನಾಗಮಂಗಲ:
ಪುರಸಭೆ ವ್ಯಾಪ್ತಿ ಒಟ್ಟು 27 ಅಂಗಡಿ ಮಳಿಗೆಗಳು ಖಾಲಿ ಇರುವ ಕುರಿತು ಮಾಹಿತಿ ಪಡೆದು ಮಳಿಗೆಗಳನ್ನು ಶೀಘ್ರ ಹರಾಜು ಅಥವಾ ನಿಯಮಾನುಸಾರ ಭರ್ತಿ ಮಾಡಿ ಆದಾಯ ಬರುವಂತೆ ಕ್ರಮ ಕೈಗೊಳ್ಳಬೇಕು. ಲೇಔಟ್‌ಗಳಲ್ಲಿ ಆಗಿರುವ ಅಕ್ರಮ ಒತ್ತುವರಿ ಪ್ರಕರಣಗಳನ್ನು ಪರಿಶೀಲಿಸಿ ನಿಯಮಾನುಸಾರ ಕ್ರಮಕೈಗೊಳ್ಳಬೇಕು ಎಂದು ಮುಖ್ಯಾಧಿಕಾರಿಗೆ ಸೂಚಿಸಿದರು.
ವಿವಿಧ ಮೂಲಗಳಿಂದ ಪುರಸಭೆಗೆ ಸುಮಾರು1.65 ಕೋಟಿ ರು. ಆದಾಯ ಸಂಗ್ರಹವಾಗುತ್ತಿದೆ. ಕುಡಿಯುವ ನೀರಿಗೆ ಯಾವುದೇ ತೊಂದರೆ ಇಲ್ಲ ಎಂಬುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು. ಇದೇ ವೇಳೆ ಫುಟ್‌ಪಾತ್‌ಗಳ ಒತ್ತುವರಿ ಕುರಿತು ಮಾಹಿತಿ ಪಡೆದ ಉಪಲೋಕಾಯುಕ್ತರು, ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗದಂತೆ ಒತ್ತುವರಿ ತೆರವುಗೊಳಿಸಲು ಕ್ರಮ ವಹಿಸುವಂತೆ ಸೂಚಿಸಿದರು.ಸ್ವಚ್ಛತಾ ಕಾರ್ಯಕ್ಕೆ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಸರ್ಕಾರಿ ಶಾಲೆಗಳ ಖಾತೆಗಳನ್ನು ನಿಯಮಾನುಸಾರ ಮಾಡಿಸಲು ಕ್ರಮ ಕೈಗೊಳ್ಳಬೇಕು. ಟಿ.ಮರಿಯಪ್ಪ ವೃತ್ತದ ಬಸ್ ನಿಲ್ದಾಣದ ಸುತ್ತಮುತ್ತ ಸ್ವಚ್ಛತೆ ಹಾಗೂ ನೈರ್ಮಲ್ಯ ಕಾಪಾಡಲು ವಿಶೇಷ ಗಮನ ಹರಿಸಬೇಕು. ಬಸ್ ನಿಲ್ದಾಣದ ಕಟ್ಟಡ ಹಾಗೂ ಸುತ್ತಮುತ್ತ ಅನಧಿಕೃತವಾಗಿ ಪೋಸ್ಟರ್‌ಗಳನ್ನು ಅಳವಡಿಸದಂತೆ ಕ್ರಮ ವಹಿಸಬೇಕು. ನಿಯಮಬಾಹಿರವಾಗಿ ವಾಹನಗಳನ್ನು ಪಾಕಿಂಗ್ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಾಧಿಕಾರಿ ವೀಣಾ ಅವರಿಗೆ ನಿರ್ದೇಶನ ನೀಡಿದರು.
ಬಳಿಕ ತಾಲೂಕಿನ ಬೆಳ್ಳೂರು ನಾಡಕಚೇರಿ, ಪಟ್ಟಣ ಪಂಚಾಯ್ತಿ, ಆಸ್ಪತ್ರೆ ಹಾಗೂ ನೆಲ್ಲಿಗೆರೆ ಗ್ರಾಪಂ ಕಚೇರಿಗೆ ಭೇಟಿ ಕೊಟ್ಟ ಉಪಲೋಕಾಯುಕ್ತರು ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದುಕೊಂಡರು.