ಕನ್ನಡಪ್ರಭ ವಾರ್ತೆ ಹನೂರು
ಅಲ್ಲದೆ ವೈಶಂ ಪಾಳ್ಯ ಭಾಗದ ಜನರು ಕರೆ ತುಂಬಿಸುವಂತೆ ಕೇಳುತ್ತಿದ್ದು ಆ ಭಾಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನೀರಾವರಿ ಯೋಜನೆಗಳನ್ನು ರೂಪಿಸಬೇಕಾಗಿದೆ. ಹರಕನ ಹಳ್ಳಕ್ಕೆ ಕಾಲುವೆ ಮುಖಾಂತರ ನೀರು ಸರಬರಾಜು ಮಾಡಿದರೆ ಅಂತರ್ಜಲ ವೃದ್ಧಿ ಜೊತೆಗೆ ರೈತರ ಜಮೀನುಗಳಲ್ಲಿ ಇರುವ ಕೊಳವೆಬಾವಿ ತೊಡು ಬಾಯಿಗಳಲ್ಲಿ ಅಂತರ್ಜಲ ಹೆಚ್ಚಾಗಿ ನೀರಾವರಿಗೆ ಅನುಕೂಲವಾಗುತ್ತದೆ ರೈತರ ಜಮೀನಿನ ಕೊಳವೆ ಬಾವಿಗಳಲ್ಲಿ ಅಂತರ್ಜಲ ಹೆಚ್ಚಾಗುವ ನಿರೀಕ್ಷೆ ಇಟ್ಟುಕೊಂಡಿದ್ದೇನೆ.
ಹಾಗಾಗಿ ಈಗಾಗಲೇ ಒಂದಷ್ಟು ನೀರಾವರಿ ಯೋಜನೆ ಅಭಿವೃದ್ಧಿಗೆ ಅನುದಾನ ಬಂದಿದ್ದು, ಡಿಪಿಆರ್ ಸರ್ವೇ ಕಾರ್ಯ ನಡೆಯುತ್ತಿದ್ದು ಮುಗಿದ ಬಳಿಕ ಇನ್ನೆಷ್ಟು ಅನುದಾನ ಬೇಕಾಗುತ್ತದೆ ಎಂಬುದನ್ನು ಅಂದಾಜು ಮಾಡಿಕೊಂಡು ಸರ್ಕಾರದಿಂದ ಅನುಮೋದನೆ ಪಡೆಯಬೇಕಾಗಿದೆ ಎಂದರು.ಈ ವೇಳೆ ನೀರಾವರಿ ಇಲಾಖೆ ಎಇಇ ಕರುಣಾಮಯಿ, ಕೆಆರ್ ಐಡಿಎಲ್ ಅಭಿಯಂತರ ಕಾರ್ತಿಕ್, ಚಾಮುಲ್ ನಿರ್ದೇಶಕ ಉದ್ದನೂರು ಪ್ರಸಾದ್, ಹನೂರು ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಮಂಜೇಶ್ ಗೌಡ, ನಟರಾಜು, ಮುಖಂಡರಾದ ಹನೂರು ಗೋವಿಂದ ಚಿನ್ನತಂಬಿ, ಬಾಲು, ಚಿನ್ನವೆಂಕಟ, ಚಿನ್ನಸ್ವಾಮಿ, ಎಸ್.ಆರ್ ಮಹದೇವ್, ಚನ್ನಲಿಂಗನಹಳ್ಳಿ ವೆಂಕಟೇಶ್ ,ಆರ್ ಮಹಾದೇವ ಗೌಡ, ಎಸ್ ಮಲ್ಲೇಗೌಡ ಹಾಗೂ ರೈತ ಮುಖಂಡರುಗಳು ಇನ್ನಿತರರು ಉಪಸ್ಥಿತರಿದ್ದರು.