ಕನ್ನಡಪ್ರಭ ವಾರ್ತೆ ಸಿಂದಗಿ
ಮಕ್ಕಳಲ್ಲಿ ಇರುವ ಕಲೆ, ಸಾಹಿತ್ಯ, ವಿಜ್ಞಾನ ತಂತ್ರಜ್ಞಾನದೊಂದಿಗೆ ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡಬೇಕು. ಪಾಲಕರ ಪಾತ್ರವೂ ಮಹತ್ವದ್ದಾಗಿದೆ. ಬೋಮ್ಮನಹಳ್ಳಿ ಗ್ರಾಮದಲ್ಲಿ ಆರ್.ಎಂ.ಎಸ್‌ಎ ಫ್ರೌಡ ಶಾಲೆಗೆ ಜಮೀನು ಖರೀದಿಗಾಗಿ ಗ್ರಾಮಸ್ಥರ ಸಹಕಾರದೊಂದಿಗೆ ಮಾಜಿ ಮಂತ್ರಿ ದಿ.ಎಂ.ಸಿ.ಮನಗೂಳಿ ಫೌಂಡೇಶನ್ ವತಿಯಿಂದ ₹5 ಲಕ್ಷ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ತಲಾ ₹5 ಲಕ್ಷ ನೀಡಲಾಗಿದೆ. ಹೂವಿನಹಳ್ಳಿ ಹತ್ತಿರ ಕಾರ್ಮಿಕರ ಮಕ್ಕಳಿಗಾಗಿ ₹32 ಕೋಟಿ ವೆಚ್ಚದಲ್ಲಿ ಶಾಲೆ ತೆರೆಯುವ ಕಾರ್ಯ ಮಂಜೂರಾತಿ ಹಂತದಲ್ಲಿ ಇದೆ. ಪ್ರಸಕ್ತ ಸಾಲಿನಲ್ಲಿ ಸಿಂದಗಿ ತಾಲೂಕಿಗೆ 8 ಪ್ರೌಢ ಶಾಲೆ ಮಂಜೂರಾತಿ ನೀಡಿ ಆರಂಭಿಸಲಾಗಿದೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮಹಾಂತೇಶ ಬ ಯಡ್ರಾಮಿ, ನಿವೃತ್ತ ಭಾರತೀಯ ಸೈನ್ಯ ಕಮಾಂಡರ್ ಉದಂಡಪ್ಪ ಬಗಲಿ, ಕ.ರಾ.ಸ.ನೌ.ಸಂಘದ ಅಧ್ಯಕ್ಷ ಅಶೋಕ ತೆಲ್ಲೂರ ಮಾತನಾಡಿದರು. ಯೋಗಾಯೋಗ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಗು ಪಾಟೀಲ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿದರು.ವೇದಿಕೆ ಮೇಲೆ ಮಾಜಿ ಜಿ.ಪಂ ಸದಸ್ಯ ಮಹಾಂತಗೌಡ ಪಾಟೀಲ, ಕ.ರಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಆನಂದ ಭೂಸನೂರ, ದೇವರ ಹಿಪ್ಪರಗಿ ಕ.ರಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಎ.ಎಚ್.ವಾಲೀಕಾರ, ಕ.ರಾ.ಪ್ರ್ರೌ.ಶಾ.ಶಿ.ಸಂಘದ ಅಧ್ಯಕ್ಷ ಆರ್.ಎಚ್.ಬಿರಾದಾರ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎ.ಎಸ್.ಡೊಣುರ, ಶಿಕ್ಷಣ ಸಂಯೋಜಕ ನೋಡಲ್ ಅಧಿಕಾರಿ ಎಂ.ಪಿ.ಬಿಸೆ, ಯೋಗಾಯೋಗ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿ ಮಲ್ಲನಗೌಡ ಪಾಟೀಲ, ಮುಖ್ಯ ಗುರುಮಾತೆ ಜಯಶ್ರೀ ಪಾಟೀಲ ಇದ್ದರು.