ದೇವರಹಿಪ್ಪರಗಿ, ತಾಳಿಕೋಟೆ, ಮುದ್ದೇಬಿಹಾಳ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಬೇಕು ಸೇರಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ೧೭, ೧೮, ೧೯ ಮೂರು ದಿನಗಳ ಕಾಲ ಬೃಹತ್ ಹೋರಾಟ ನಡೆಸಲು ನಿರ್ಧರಿಸಿದ್ದು, ೨೧ರಂದು ತಾಳಿಕೋಟೆ ಬಂದ್‌ಗೆ ಕರೆ ನೀಡಲು ತೀರ್ಮಾನಿಸಲಾಗಿದೆ ಎಂದು ಶಾಸಕ ರಾಜುಗೌಡ ಪಾಟೀಲ ಹೇಳಿದರು.
ಕನ್ನಡಪ್ರಭ ವಾರ್ತೆ ತಾಳಿಕೋಟೆ
ದೇವರಹಿಪ್ಪರಗಿ, ತಾಳಿಕೋಟೆ, ಮುದ್ದೇಬಿಹಾಳ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಬೇಕು ಸೇರಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ೧೭, ೧೮, ೧೯ ಮೂರು ದಿನಗಳ ಕಾಲ ಬೃಹತ್ ಹೋರಾಟ ನಡೆಸಲು ನಿರ್ಧರಿಸಿದ್ದು, ೨೧ರಂದು ತಾಳಿಕೋಟೆ ಬಂದ್‌ಗೆ ಕರೆ ನೀಡಲು ತೀರ್ಮಾನಿಸಲಾಗಿದೆ ಎಂದು ಶಾಸಕ ರಾಜುಗೌಡ ಪಾಟೀಲ ಹೇಳಿದರು. ತಾಳಿಕೋಟೆ, ಮುದ್ದೇಬಿಹಾಳ, ದೇ.ಹಿಪ್ಪರಗಿ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದ ಘೋಷಿಸಲು ಆಗ್ರಹಿಸಿ ಪಟ್ಟಣದ ಎಪಿಎಂಸಿ ಸಭಾಭವನದಲ್ಲಿ ಬಿಜೆಪಿ ರಾಜ್ಯ ರೈತ ಮೋರ್ಚಾ ನೇತೃತ್ವದಲ್ಲಿ ನಡೆದ ನಡೆದ ರೈತ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ೧೭, ೧೮, ೧೯ ಮೂರು ದಿನಗಳ ಕಾಲ ಬೃಹತ್ ಹೋರಾಟ ನಡೆಯಲಿದೆ. ೨೧ರಂದು ತಾಳಿಕೋಟೆ ಬಂದ್‌ಗೆ ಕರೆ ನೀಡಲು ತಿರ್ಮಾನಿಸಲಾಗಿದೆ ಎಂದರು.ಸದನದಲ್ಲೂ ರೈತರ ಪರ ಧ್ವನಿ: ಎನ್‌ಡಿಆರ್‌ಎಫ್‌ನ ಮಾನದಂಡ ಮುಂದಿಟ್ಟುಕೊಂಡು ರೈತರ ಸಂಕಷ್ಟ ನಿರ್ಲಕ್ಷಿಸಬಾರದು. ಮುಂಬರುವ ದಿನಗಳಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಶಾಸಕರು ಒಗ್ಗೂಡಿ ರೈತರ ಪರವಾಗಿ ಸದನದಲ್ಲೂ ಹೋರಾಟ ನಡೆಸಲಿದ್ದೇವೆ. ರೈತರ ಬೇಡಿಕೆಗಳ ಪರವಾಗಿ ಭಾವಿಗಿಳಿದು ಹೋರಾಟ ಮಾಡಿಯಾದರೂ ರೈತರಿಗೆ ನ್ಯಾಯ ಕೊಡಿಸುವ ಪ್ರಯತ್ನ ಮಾಡುದಾಗಿ ತಿಳಿಸಿದ ಅವರು ವಿಧಾನಸೌಧ ಒಳಗೆ ನಮ್ಮ ಹೋರಾಟ ಹೊರಗೆ ನಿಮ್ಮ ಹೋರಾಟ ರಾಜ್ಯ ಸರ್ಕಾರವನ್ನು ರೈತರ ಮುಂದೆ ಮಂಡಿಯೂರಿ ಕುಳಿತು ಕೆಲಸ ಮಾಡುವಂತೆ ಮಾಡಲಿದೆ. ಎಲ್ಲರೂ ಈ ಪಕ್ಷಾತೀತ ಹೋರಾಟದಲ್ಲಿ ಕೈಜೋಡಿಸಬೇಕೆಂದರು.
ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಮಾಜಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಮಾತನಾಡಿ, ಮಳೆ ಕೊರತೆಯಿಂದ ರೈತರು ಬಿತ್ತನೆ ಮಾಡಿದ ಬೆಳೆಗಳು ಒಣಗಿ ಹೋಗಿವೆ ಹೊಲಗಳಿಗೆ ತೆರಳಿ ಪರಿಸ್ಥಿತಿ ಪರಿಶೀಲಿಸಿದರೆ ವಾಸ್ತವ ಸ್ಥಿತಿ ಗೊತ್ತಾಗುತ್ತದೆ. ೩ ದಿನಗಳ ಕಾಲ ನಡೆಯುವ ಹೋರಾಟದಲ್ಲಿ ನಿತ್ಯ ೩ ರಿಂದ ೪ ಸಾವಿರ ರೈತರು ಪಾಲ್ಗೊಳ್ಳಲಿದ್ದಾರೆ. ದಿ. ೨೧ ರಂದು ತಾಳಿಕೋಟೆ ಸಂಪೂರ್ಣ ಬಂದ್ ಆಚರಣೆ ವೇಳೆ ಸುಮಾರು ೧೦ ಸಾವಿರ ಜನರು ಪಾಲ್ಗೊಳ್ಳಲಿದ್ದಾರೆಂದು ಹೇಳಿದರು.
ನ್ನೋರ್ವ ಮಾಜಿ ಶಾಸಕ ಸೋಮನಗೌಡ ಪಾಟೀಲ(ಸಾಸನೂರ), ಮುಖಂಡರಾದ ಮುನ್ನಾಧನಿ ನಾಡಗೌಡ, ಬಸನಗೌಡ ಮಾಡಗಿ, ಮಡುಸಾಹುಕಾರ ಬಿರಾದಾರ, ಪ್ರಭುಗೌಡ ಬಿರಾದಾರ(ಅಸ್ಕಿ) ಮಾತನಾಡಿದರು. ಸಿದ್ದು ಬುಳ್ಳಾ, ಡಿ.ಕೆ.ಪಾಟೀಲ, ಈಶ್ವರಪ್ಪ ಬಿಳೇಭಾವಿ, ವಿಶ್ವನಾಥ ಬಿದರಕುಂದಿ,. ಕಾಶಿನಾಥ ಸಜ್ಜನ, ಎಂ.ಎಸ್.ಸರಶೆಟ್ಟಿ, ಕಾಶಿನಾಥ ಮುರಾಳ, ರಾಜುಗೌಂಡ ಗುಂಡಕನಾಳ, ರಾಜುಗೌಡ ಕೊಳೂರ, ಎಂ.ಎಂ.ಪಾಟೀಲ, ಒಳಗೊಂಡು ನೂರಾರು ಜನರು ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.