ಕುಷ್ಟಗಿ: ತಾಲೂಕಿನ ಹನುಮಸಾಗರದಲ್ಲಿ ನವೆಂಬರ್ 8ರ ನಂತರ ಕುಷ್ಟಗಿ ತಾಲೂಕು ಮಟ್ಟದ ಕನಕದಾಸರ ಜಯಂತಿ ಆಚರಿಸಲಾಗುವದು ಎಂದು ಹಾಲುಮತ ಸಮಾಜದ ತಾಲೂಕಾಧ್ಯಕ್ಷ ಮಲ್ಲಣ್ಣ ಪಲ್ಲೇದ ಹೇಳಿದರು.ಪಟ್ಟಣದ ಸರ್ಕ್ಯೂಟ್ ಹೌಸ್‌ನಲ್ಲಿ ಕನಕದಾಸರ ಜಯಂತಿ ಕುರಿತು ನಡೆದ ಹಾಲುಮತ ಸಮಾಜದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಸರ್ಕಾರದ ಆದೇಶದ ಪ್ರಕಾರ ತಹಸೀಲ್ದಾರ್ ಕಾರ್ಯಾಲಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಬೇಕು. ಹಾಲುಮತ ಸಮಾಜದ ವತಿಯಿಂದ ಹನುಮಸಾಗರದಲ್ಲಿ 8ನೇ ತಾರೀಕಿನ ನಂತರ ದಿನಾಂಕ ನಿಗದಿ ಮಾಡಿ ಅತ್ಯಂತ ಅದ್ಧೂರಿಯಾಗಿ ಕನಕದಾಸರ ಜಯಂತಿ ಆಚರಿಸಲು ಎಲ್ಲರೂ ಸಹಕಾರ ನೀಡಬೇಕೆಂದರು.ಕನಕದಾಸರ ಜಯಂತಿಯಲ್ಲಿ ಕನಕಗುರು ಪೀಠದ ಬಾದಿಮನಾಳ ಗ್ರಾಮದ ಶಿವಸಿದ್ಧೇಶ್ವರ ಮಹಾಸ್ವಾಮೀಜಿ, ತಿಂಥಣಿಯ ಸಿದ್ಧರಾಮನಂದ ಪುರಿ ಮಹಾಸ್ವಾಮೀಜಿ, ಶಾಸಕ ದೊಡ್ಡನಗೌಡ ಪಾಟೀಲ ನೇತೃತ್ವದಲ್ಲಿ ಅನೇಕ ಗಣ್ಯರನ್ನು ಆಹ್ವಾನಿಸಲಾಗುತ್ತದೆ ಎಂದರು.
ಸಭೆಯ ನೇತೃತ್ವ ವಹಿಸಿದ್ದ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಹಾಲುಮತ ಸಮಾಜದ ಎಲ್ಲ ಹಿರಿಯರು ಸೇರಿಕೊಂಡು ದಿನಾಂಕ ನಿಗದಿ ಮಾಡುವ ಮೂಲಕ ಅತ್ಯಂತ ಅರ್ಥಪೂರ್ಣವಾಗಿ ಕನಕದಾಸರ ಜಯಂತಿ ಆಚರಣೆ ಮಾಡುವ ಮೂಲಕ ಉತ್ತಮ ಸಂದೇಶಗಳನ್ನು ಕೊಡಬೇಕಿದೆ.ಯುವ ಘಟಕದ ಅಧ್ಯಕ್ಷ ಕಲ್ಲೇಶ ತಾಳದ ಮಾತನಾಡಿ, ಸಮಾಜದ ಜಾಗೃತಿಗಾಗಿ ಹನುಮಸಾಗರದಲ್ಲಿ ಜಯಂತಿ ಮಾಡಲಾಗುತ್ತಿದ್ದು ಅಧಿಕ ಸಂಖ್ಯೆಯಲ್ಲಿ ಜನರು ಆಗಮಿಸಬೇಕು ಎಂದು ತಿಳಿಸಿದರು.
ಜಿಪಂ ಮಾಜಿ ಸದಸ್ಯ ಫಕೀರಪ್ಪ ಚಳಗೇರಿ ಮಾತನಾಡಿ, ಸಮಾಜದ ಒಳಿತಿಗಾಗಿ ಸರ್ವರೂ ಜೊತೆಗೂಡಿ ಕನಕದಾಸರ ಜಯಂತಿ ಆಚರಣೆ ಮೂಲಕ ಅವರ ತತ್ವಾದರ್ಶಗಳನ್ನು ಅಳವಡಿಸಿಕೊಂಡು, ಸುಂದರ ಜೀವನ ಸಾಗಿಸಬೇಕು ಎಂದು ಹೇಳಿದರು.ಸಭೆಯಲ್ಲಿ ಸಮಾಜದ ಮುಖಂಡರಾದ ದುರಗಪ್ಪ ವಡ್ಡಗೇರಿ, ಮಹಾಲಿಂಗಪ್ಪ ದೋಟಿಹಾಳ, ಸಂಗಪ್ಪ ಪಂಚಮ, ಸಂಗನಗೌಡ ಜೈನರ, ಸತ್ಯಪ್ಪ ರಾಜೂರು, ದೇವಪ್ಪ ಕಟ್ಟಿಹೊಲ, ವಕೀಲರಾದ ಯಮನೂರಪ್ಪ ಪೂಜಾರ, ಮಂಜುನಾಥ ನಾಲಗಾರ, ರಾಜು ನಾಲಗಾರ, ಪವಾಡೆಪ್ಪ ಚೌಡ್ಕಿ, ಶರಣಪ್ಪ ಚೂರಿ, ಕೊಳ್ಳಪ್ಪ ಬೂದರ, ಪರಶುರಾಮ ಕಟ್ಟಿಹೊಲ, ಕಾಂತರಾಜ ನಾಲಗಾರ, ಮರಿ ಸತ್ಯಪ್ಪ ಚೂರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.