ನ.೪ ರಂದು ಬೆಳಗ್ಗೆ ೧೦.೩೦ಕ್ಕೆ ಧನ್ವಂತರಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಮತ್ತು ರಿಸರ್ಚ್ ಸೆಂಟರ್ ಸಿದ್ದಾಪುರದಿಂದ ಆಯುರ್ವೇದ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಸಂಜೆ ೪.೧೫ರಿಂದ ಭಗವದ್ಗೀತಾ ಪಠಣ ; ೪.೩೦ರಿಂದ ಮೇಧಾ ಭಟ್ಟ ಅಗ್ಗೆರೆ ಮತ್ತು ವಾಣಿ ರಮೇಶ ಹೆಗಡೆ ತಂಡದಿಂದ ಸಂಗೀತ ಕಾರ್ಯಕ್ರಮ; ೬ರಿಂದ ಮುಕ್ತಾ ಶಂಕರ ಮತ್ತು ಡಾ.ಶಿವರಾಮ ಭಾಗ್ವತ ಶಾರದಾಂಬಾ ಇವರಿಂದ ಗಮಕ ವಾಚನ ಮತ್ತು ಪ್ರವಚನ ನಡೆಯಲಿದೆ.೬.೩೦ಕ್ಕೆ ಸಮಾರೋಪ ಕಾರ್ಯಕ್ರಮದಲ್ಲಿ ರಾಮಚಂದ್ರಾಪುರ ಮಠದ ಶ್ರೀಮದ್ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಆಶೀರ್ವಚನ ನೀಡುವರು. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಹಿರಿಯ ನ್ಯಾಯವಾದಿ ಅರುಣ ಶ್ಯಾಂ, ತಿಂಗಳೆ ಪ್ರತಿಷ್ಠಾನ ಉಡುಪಿಯ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗಡೆ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ವಿದ್ವಾಂಸ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ, ಅನಂತ ಪ್ರತಿಷ್ಠಾನದ ಅಧ್ಯಕ್ಷ ಅನಂತಮೂರ್ತಿ ಹೆಗಡೆ, ವಿಶ್ವ ಹಿಂದೂ ಪರಿಷದ್ ಜಿಲ್ಲಾಧ್ಯಕ್ಷ ಎಸ್.ಎನ್. ಭಟ್ಟ ಏಕಾನ, ವಜ್ರಳ್ಳಿ ಸಹಕಾರಿ ಸಂಘದ ಅಧ್ಯಕ್ಷ ದತ್ತಾತ್ರೇಯ ಭಟ್ಟ, ಅಖಿಲ ಭಾರತ ಸಾಹಿತ್ಯ ಪರಿಷತ್‌ನ ಗಣಪತಿ ಬೋಳಗುಡ್ಡೆ, ಇಡಗುಂದಿ ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ ಭಟ್ಟ, ಕಣ್ಣೀಗೇರಿ ಸಹಕಾರಿ ಸಂಘದ ಅಧ್ಯಕ್ಷ ಶೇಷಗಿರಿ ಭಟ್ಟ, ಸಿದ್ಧಿವಿನಾಯಕ ಸಹಕಾರಿ ಸಂಘದ ಅಧ್ಯಕ್ಷ ಸುಬ್ಬಣ್ಣ ಗಾಣಗದ್ದೆ ಉಪಸ್ಥಿತರಿರುವರು. ಈ ಸಂದರ್ಭ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ. ನಾರಾಯಣ ಹುಳ್ಸೆಗೆ ಸಂಕಲ್ಪ ಪ್ರಶಸ್ತಿ ಪ್ರದಾನ ಮಾಡಲಾಗುವುದು.೮.೩೦ ರಿಂದ ಪ್ರದರ್ಶನವಾಗುವ ಪಾಂಚಜನ್ಯ ಯಕ್ಷಗಾನದ ಹಿಮ್ಮೇಳದಲ್ಲಿ ಹಿಲ್ಲೂರು ರಾಮಕೃಷ್ಣ ಹೆಗಡೆ, ಅನಿರುದ್ಧ ವಗೀಸುರ, ಗಜಾನನ ಸಾಂತುರು; ಮುಮ್ಮೇಳದಲ್ಲಿ ಕಾರ್ತಿಕ ಚಿಟ್ಟಾಣಿ, ಸುಬ್ರಹ್ಮಣ್ಯ ಚಿಟ್ಟಾಣಿ, ಸುಧೀರ ಉಪ್ಸೂರು, ನಾಗೇಂದ್ರ ಮೂರೂರು, ಅಶೊಕ ಭಟ್ಟ, ಶ್ರೀಧರ ಅಣಲಗಾರ ಭಾಗವಹಿಸುವರು. ಸಮಾರೋಪ ಕಾರ್ಯಕ್ರಮದ ವೇದಿಕೆಯಲ್ಲಿ ನಿವೃತ್ತ ಯೋಧರಿಗೆ ಸನ್ಮಾನ ಮಾಡಲಾಗುವುದು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.