ನ್ಯಾಯ ಕೇಳಿದ ಸಂಘಟನೆಗಳ ಮುಖಂಡರಿಗೆ ತಾಪಂ ಇಒ ಧಮ್ಕಿ

KannadaprabhaNewsNetwork |  
Published : Feb 08, 2025, 12:33 AM IST
7ಕೆಜಿಎಲ್ 14 ಕೊಳ್ಳೇಗಾಲ ತಾಪಂ ಆವರಣದಲ್ಲಿ ಮಹಿಳೆ ಪರ ನ್ಯಾಯ ಕೇಳಿ ಬಂದ ಸಂಘಟನೆಗಳ ಮುಖಂಡರಿಗೆ ಇಓ ಧಮ್ಕಿ ಹಾಕಿದ ಹಿನ್ನೆಲೆ ಮಾತಿನ ಚಕಮಕಿ  ಜರುಗಿತು. | Kannada Prabha

ಸಾರಾಂಶ

ಕೊಳ್ಳೇಗಾಲ ತಾಪಂ ಆವರಣದಲ್ಲಿ ಮಹಿಳೆ ಪರ ನ್ಯಾಯ ಕೇಳಿ ಬಂದ ಸಂಘಟನೆಗಳ ಮುಖಂಡರಿಗೆ ಇಒ ಧಮ್ಕಿ ಹಾಕಿದ ಹಿನ್ನೆಲೆ ಮಾತಿನ ಚಕಮಕಿ ಜರುಗಿತು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ತಾಲೂಕಿನ ಧನೆಗೆರೆ ಗ್ರಾಪಂ ವ್ಯಾಪ್ತಿಯ ಸರಗೂರು ಗ್ರಾಮದ ಮಹಿಳೆಯೊಬ್ಬರ ಪರ ಇ-ಸ್ವತ್ತು ನೀಡುವ ವಿಚಾರದಲ್ಲಿ ನ್ಯಾಯ ಕೇಳಿ ಪ್ರತಿಭಟನೆಗಿಳಿದಿದ್ದ ಕನ್ನಡಪರ ಸಂಘಟನೆಗಳು ಹಾಗೂ ರೈತ ಸಂಘಟನೆಗಳ ಮುಖಂಡರನ್ನು ಮಧ್ಯವರ್ತಿಗಳು ನನಗೆ ಅವಶ್ಯಕತೆ ಇಲ್ಲ, ನೀವ್ಯಾಕೆ ಇಲ್ಲಿಗೆ ಬಂದಿದ್ದೀರಿ ಎಂದು ಪ್ರಶ್ನಿಸಿ ಧಮ್ಕಿ ಹಾಕಿರುವ ಘಟನೆ ತಾಪಂ ಆವರಣದಲ್ಲಿ ಜರುಗಿದೆ. ಗೌರಮ್ಮ ವೀರಭದ್ರಸ್ವಾಮಿ ಅವರು ಗ್ರಾಮದಲ್ಲಿ ಮನೆ ನಿರ್ಮಿಸಲು ಇ-ಸ್ವತ್ತು ಅವಶ್ಯಕತೆ ಇದೆ. ಹಾಗಾಗಿ ಇ-ಸ್ವತ್ತು ನೀಡಿ ಎಂದು ಗ್ರಾಮ ಪಂಚಾಯಿತಿ ಕಚೇರಿಗೆ ತೆರಳಿದರೆ ಅಲ್ಲಿನ ಅಧಿಕಾರಿಗಳು ಸ್ಪಂದಿಸುತ್ತಿಲ್ಲ, ಕೋರ್ಟ್‌ನಲ್ಲಿದೆ ಎಂದು ಸಬೂಬೂ ಉತ್ತರಗಳನ್ನು ನೀಡಿ ಅಲೆಸುತ್ತಿದ್ದಾರೆ. ಈ ಬಗ್ಗೆ ತಾಲೂಕು ಪಂಚಾಯಿತಿ ಇಒ ಸ್ಪಂದಿಸಿಲ್ಲ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು. ಗೌರಮ್ಮ ಪರ ಸಾಥ್ ನೀಡಿ ನ್ಯಾಯ ಒದಗಿಸುವಂತೆ ಆಗ್ರಹಿಸಿ ರೈತ ಸಂಘದ ಜಿಲ್ಲಾಧ್ಯಕ್ಷ ಗೌಡಹಳ್ಳಿ ಸೋಮಣ್ಣ, ತಾಲೂಕು ಅಧ್ಯಕ್ಷ ನಾಗರಾಜು ಸರಗೂರು, ಕಾರ್ಯದರ್ಶಿ ರಾಮಕೃಷ್ಣ, ಗೌರವಾಧ್ಯಕ್ಷ ಮಧುವನಹಳ್ಳಿ ಚಂದ್ರಪ್ಪ, ತೇರಂಬಳ್ಳಿ ಶಿವಮೂರ್ತಿ, ಗುಂಡೇಗಾಲ ರಾಜು, ವಾಸು, ನಂಜುಂಡಸ್ವಾಮಿ, ಕರವೇ ತಾಲೂಕು ಅಧ್ಯಕ್ಷ ಅಯಾಜ್ ಕನ್ನಡಿಗ, ಸಾಮಾಜಿಕ ಕಾರ್ಯಕರ್ತ ದಶರಥ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಇದರಿಂದ ಕುಪಿತಗೊಂಡ ಸ್ಥಳಕ್ಕೆ ಆಗಮಿಸಿದ ತಾಪಂ ಇಒ ಗುರುಶಾಂತಪ್ಪ ಬೆಳ್ಳುಂಡಗಿ, ಪ್ರತಿಭಟನಾನಿರತರಿಗೆ ನಿಮ್ಮ ಅಹವಾಲುಗಳೇನು, ನಿವ್ಯಾಕೆ ಬಂದಿದ್ದೀರಿ ಎಂದು ಬೆದರಿಕೆ ಹಾಕುವ ರೀತಿ ಉದ್ಧಟತನ ವರ್ತಿಸಿದ್ದಾರೆ. ಮಾತ್ರವಲ್ಲ ಧರಣಿ ನಿರತ ಮಹಿಳೆಯನ್ನು ಉದ್ದೇಶಿಸಿ ಗುಂಪುಕಟ್ಟಿಕೊಂಡು ಗಲಾಟೆ ಮಾಡಲು ಬಂದಿದ್ದಿಯಾ ಎಂದು ನ್ಯಾಯ ಕೇಳಲು ಬಂದ ನೊಂದ ಮಹಿಳೆಗೂ ಧಮ್ಕಿ ಹಾಕಿ ಉದ್ಧಟತನ ರೀತಿ ವರ್ತಿಸಿದ್ದಾರೆ. ಈ ಕುರಿತು ಇಒ ದುರ್ವತನೆ ವಿಡಿಯೋ ವೈರಲ್ ಆಗಿದ್ದು ಜಾಲತಾಣದಲ್ಲಿ ನಾನಾ ರೀತಿಯ ಚರ್ಚೆಗೂ ಆಸ್ಪದ ಮಾಡಿಕೊಟ್ಟಿದೆ. ನೊಂದ ಮಹಿಳೆಯರ ಪರ ನ್ಯಾಯಕೇಳಿ ಬಂದ ಇತರೆ ಸಂಘಟನೆಗಳ ಮುಖಂಡರನ್ನು ಮಧ್ಯವರ್ತಿಗಳು ಎಂದು ಟೀಕಿಸಿದ್ದಕ್ಕೆ ಅಯಾಜ್ ಕನ್ನಡಿಗ, ದಶರಥ್ ಸೇರಿದಂತೆ ಇನ್ನಿತರರು ಆಕ್ರೋಶ ಹೊರಹಾಕಿದ್ದು ಪ್ರತಿಭಟನಾಕಾರರಿಗೆ ಈ ರೀತಿ ಟೀಕೆ ಸರಿಯಲ್ಲ ಎಂದು ಖಂಡಿಸಿದರು. ಈ ರೀತಿ ಯಾವ ಅಧಿಕಾರಿಗಳು ನಡೆದುಕೊಂಡಿಲ್ಲ ಎಂದು ಆಕ್ರೋಶ ಹೊರಹಾಕಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ವಾತಾವರಣ ತಿಳಿಗೊಳಿಸಿ ಪ್ರತಿಭಟನಾಕಾರರನ್ನು ಸಮಾಧಾನಗೊಳಿಸಿದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...