ಕನ್ನಡಪ್ರಭ ವಾರ್ತೆ ರಾಯಚೂರು/ ಲಿಂಗಸುಗೂರುಬೆಳಗಾವಿ ಸುವರ್ಣಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಮಾದಿಗ ಮತ್ತು ಮಾದಿಗ ಸಂಬಂಧಿತ ಉಪ ಜಾತಿಗಳು, ಹೊಲೆಯ ಉಪಜಾತಿಗಳಿಗೆ ಒಳ ಮೀಸಲಾತಿ ಜಾರಿ ಮಾಡಲು ಧ್ವನಿ ಶಾಸಕರು ಎತ್ತಬೇಕು ಎಂದು ಆಗ್ರಹಿಸಿ ಒಳ ಮೀಸಲಾತಿ ಜಾರಿಗಾಗಿ ಐಕ್ಯ ಹೋರಾಟ ಸಮಿತಿ ತಮಟೆ ಚಳವಳಿಯನ್ನು ಶನಿವಾರ ನಡೆಸಿದರು. ರಾಯಚೂರು ನಗರದಲ್ಲಿ ಸಚಿವ ಎನ್.ಎಸ್.ಬೋಸರಾಜು, ಶಾಸಕರಾದ ಡಾ.ಶಿವರಾಜ ಪಾಟೀಲ್ ಮತ್ತು ಬಸನಗೌಡ ದದ್ದಲ್ ಅವರುಗಳ ಮನೆಗಳಿಗೆ ತೆರಳಿದ ಹೋರಾಟಗಾರರು ತಮಟೆ ಚಳವಳಿ ನಡೆಸಿದರು ಅದೇ ರೀತಿ ಲಿಂಗಸುಗೂರು ಪಟ್ಟಣದಲ್ಲಿ ಶಾಸಕ ಮಾನಪ್ಪ ವಜ್ಜಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.ಸುಪ್ರೀಂ ಕೋರ್ಟ ಒಳ ಮೀಸಲು ಜಾರಿಗೆ ಆದೇಶ ಮಾಡಿದ ತಕ್ಷಣ ಹರಿಯಾಣದ ಬಿಜೆಪಿ ಸರ್ಕಾರ ಕೂಡಲೇ ಒಳ ಮೀಸಲು ಜಾರಿ ಮಾಡಿದೆ. ಆದರೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ತೀರ್ಪು ಬಂದು ನಾಲ್ಕು ತಿಂಗಳು ಗತಿಸಿದರು ಒಳ ಮೀಸಲು ಜಾರಿ ಮಾಡಿಲ್ಲ. ಸುಪ್ರೀಂ ಕೋರ್ಟ ತೀರ್ಪಿನಲ್ಲಿ ಆಯಾ ರಾಜ್ಯ ಸರ್ಕಾರಗಳು ಒಳ ಮೀಸಲು ಜಾರಿ ಮಾಡಬೇಕೆಂದು ಸ್ಪಷ್ಟವಾಗಿ ಹೇಳಿದೆ. ಆದರೆ ರಾಜ್ಯ ಸರ್ಕಾರ ಒಳ ಮೀಸಲು ಜಾರಿ ಮಾಡದೇ ಕಾಲಹರಣ ಮಾಡುತ್ತಿದೆ. ನಾಮಕವಾಸ್ತೆ ಆಯೋಗ ರಚನೆ ಮಾಡಿ ಆಯೋಗಕ್ಕೆ ಸೂಕ್ತ ಕಚೇರಿ ಸೇರಿದಂತೆ ಇತರೇ ಸವಲತ್ತುಗಳನ್ನು ಕಲ್ಪಿಸದೇ ನಿರ್ಲಕ್ಷ ವಹಿಸಿದೆ. 2011 ಜನ ಗಣಿತಿ ಆಧಾರದ ಮೇಲೆ ವರ್ಗೀಕರಣ ಮಾಡಿ ಜಾರಿ ಮಾಡಬೇಕು ಆದರೆ ಸರ್ಕಾರಕ್ಕೆ ಒಳ ಮೀಸಲಾತಿ ಜಾರಿ ಮಾಡುವ ಮನಸ್ಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಅಧಿವೇಶನದಲ್ಲಿ ಒಳ ಮೀಸಲು ಜಾರಿಗೆ ಹೋರಾಟ ಮಾಡುವ ಮೊದಲೇ ರಾಜ್ಯದ ಎಲ್ಲ ಶಾಸಕರು ಒಳ ಮೀಸಲು ಜಾರಿಗೆ ಸದಸನದಲ್ಲಿ ಧ್ವನಿ ಎತ್ತಬೇಕು ಇಲ್ಲದೇ ಹೋದರೆ ಬೆಳಗಾವಿ ಸವವರ್ಣಸೌಧದ ಮುಂದೆ ಇದೇ 16ರಂದು ಸರ್ಕಾರದ ವಿರುದ್ದ ತಮಟೆ ಚಳುವಳಿ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಕೂಡಲೇ ಶಾಸಕ ಮಾನಪ್ಪ ವಜ್ಜಲ್ ರವರು ಒಳ ಮೀಸಲು ಜಾರಿಯ ಕುರಿತು ಸದನದಲ್ಲಿ ಸರ್ಕಾರದ ಗಮನ ಸೆಳೆಯಬೇಕೆಂದು ಆಗ್ರಹಿಸಿದರು. ರಾಯಚೂರಿನ ಹೋರಾಟದಲ್ಲಿ ಸಮಿತಿ ಮುಖಂಡರಾದ ನರಸಪ್ಪ ದಂಡೋರಾ, ರವೀಂದ್ರ ಜಲ್ದಾರ್, ಪಿ.ಯಲ್ಲಪ್ಪ, ಮಂಚಾಲ ಭೀಮಣ್ಣ,ಶಂಶಾಲಂ, ನಾಗರಾಜ, ದುಳ್ಳಯ್ಯ, ಶ್ರೀನಿವಾಸ ಸೇರಿದಂತೆ ಅನೇಕರು ಇದ್ದರು.ಧರಣಿಯಲ್ಲಿ ಒಳ ಮೀಸಲು ಐಕ್ಯ ಹೋರಾಟ ಸಮಿತಿಯ ಹನುಮಂತಪ್ಪ ಕುಣೆಕೆಲ್ಲೂರು, ಡಿ.ಬಿ ಸೋಮನಮರಡಿ, ಲಿಂಗಪ್ಪ ಪರಂಗಿ, ಯಂಕಪ್ಪ ಚಿತ್ತಾಪುರ, ಹುಲಗಪ್ಪ ಕೆಸರಟ್ಟಿ, ಮಹಾದೇವಪ್ಪ ಪರಾಂಪುರ, ದುರುಗಪ್ಪ ಅಗ್ರಹಾರ, ನಾಗಪ್ಪ ಈಚನಾಳ, ಮೋಹನ್ ಗೋಸ್ಲೆ, ಪ್ರೇಮಜೀವಿ, ಶಿವಪ್ಪ ಭಟ್ಟರ್, ಶರಣಪ್ಪ ಕಟ್ಟಿಮನಿ, ಉಮೇಶ ಐಹೊಳೆ, ವಿಜಯ ಪೋಳ್, ನಾಗರಾಜ ಹಾಲಬಾವಿ, ಹಾಜಪ್ಪ ಕರಡಕಲ್, ಅನಿಲ ಕುಮಾರ, ಅಂಜನೇಯ, ಮೌನೇಶ ಐದನಾಳ ಸೇರಿದಂತೆ ಭಾಗವಹಿಸಿದ್ದರು.
ಒಳ ಮೀಸಲಾತಿ ಜಾರಿಗೆ ಸದನದಲ್ಲಿ ಧ್ವನಿಯಾಗಲು ಒತ್ತಾಯಮಸ್ಕಿ: ಒಳ ಮೀಸಲಾತಿ ಜಾರಿಗೆಗೊಳಿಸುವುದಕ್ಕಾಗಿ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಪರಮ ಅಧಿಕಾರ ನೀಡಿದ್ದು ಆದ್ದರಿಂದ ಕೂಡಲೇ ಒಳ ಮೀಸಲಾತಿ ಜಾರಿಗೊಳಿಸುವಂತೆ ಅಧಿವೇಶನದಲ್ಲಿ ಧ್ವನಿ ಎತ್ತುವಂತೆ ಒಳ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ತಮಟೆ ಚಳವಳಿ ನಡೆಸಿ ಅಗ್ರಹಿಸಿದರು.ಮಸ್ಕಿ ಪಟ್ಟಣದ ಬಸವೇಶ್ವರ ನಗರದಲ್ಲಿರುವ ಶಾಸಕರ ಕಛೇರಿ ಮುಂಭಾಗದಲ್ಲಿ ಶನಿವಾರ ಒಳ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ತಮಟೆ ಚಳುವಳಿ ನಡೆಸಿ ಖಾದಿ ಗ್ರಾಮದ್ಯೋಗ ನಿಗಮದ ಅಧ್ಯಕ್ಷ ಶಾಸಕ ಆರ್. ಬಸನಗೌಡ ತುರ್ವಿಹಾಳ ಅವರು ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಒಳ ಮೀಸಲಾತಿ ಜಾರಿಮಾಡುವಂತೆ ಧ್ವನಿ ಇಟ್ಟುವಂತೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು.ಕಳೆದ ಹಲವಾರು ದಶಕಗಳಿಂದ ಒಳ ಮೀಸಲಾತಿ ಜಾರಿ ಮಾಡುವಂತೆ ಅನೇಕ ಹೋರಾಟ ನಡೆಸಲಾಗಿತ್ತು. ಸುಪ್ರೀಂ ಕೋರ್ಟ್ ಒಳ ಮೀಸಲಾತಿ ಜಾರಿ ಮಾಡುವ ಪರಮಾಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಿ ನಾಲ್ಕೂ ತಿಂಗಳು ಗತಿಸುತ್ತಿದೆ. ಆದರೆ, ಈವರೆಗೆ ಸರ್ಕಾರ ಜಾರಿ ಮಾಡುವಲ್ಲಿ ವಿಳಂಬ ಮಾಡುತ್ತಿದೆ. ಆದ್ದರಿಂದ ಕೂಡಲೇ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಒಳ ಮೀಸಲಾತಿ ಜಾರಿ ಮಾಡುವಂತೆ ಅಗ್ರಹಿಸಿದರು.
ಈ ಸಂದರ್ಭದಲ್ಲಿ ದೊಡ್ಡಪ್ಪ ಮುರಾರಿ, ದಾನಪ ನಿಲೋಗಲ್. ಮೌನೇಶ ಮುರಾರಿ, ದುರ್ಗಪ್ರಸಾದ, ರವಿಕುಮಾರ ಬೆಳಿಗಿನೂರ, ತಿಕ್ಕಯ್ಯ ಬಳಗನೂರ, ಬಸವರಾಜ ಉದ್ಬಾಳ, ಮೌನೇಶ ಬಳಗನೂರ, ಖಾಸಿಂ ಮುರಾರಿ, ಕಿರಣ್ ಮುರಾರಿ, ಮರಿಸ್ವಾಮಿ, ಪ್ರಶಾಂತ ಮುರಾರಿ, ಅಶೋಕ್ ಮುರಾರಿ, ಸಿದ್ದು ಮುರಾರಿ ಇತರರು ಇದ್ದರು.ಮಾನ್ವಿ ಶಾಸಕರ ನಿವಾಸ ಮುಂದೆ ತಮಟೆ ಚಳವಳಿಮಾನ್ವಿ: ಒಳ ಮೀಸಲಾತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಮಾನ್ವಿ ತಾಲೂಕಿನ ಬಲ್ಲಟಗಿ ಗ್ರಾಮದಲ್ಲಿರುವ ಶಾಸಕ ಜಿ.ಹಂಪಯ್ಯ ನಾಯಕ ಅವರ ನಿವಾಸದ ಮುಂದೆ ತಮಟೆ ಚಳವಳಿಯನ್ನು ಶನಿವಾರ ನಡೆಸಲಾಯಿತು.ಒಳಮೀಸಲಾತಿ ಜಾರಿಗಾಗಿ ಐಕ್ಯ ಹೋರಾಟ ಸಮಿತಿ ಮಾನ್ವಿ-ಸಿರವಾರ ಘಟಕದ ನೇತೃತ್ವದಲ್ಲಿ ಹೋರಾಟ ನಡೆಸಿ ಶಾಸಕರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬಸವರಾಜ ನಕ್ಕುಂದಿ,ಅಬ್ರಾಹಂ ಹೊನ್ನಟಗಿ, ಅಜೀತ್ ಹೊನ್ನಟಗಿ,ಯಲ್ಲಪ್ಪ ಹಿರೇಬಾದರದಿನ್ನಿ, ಪರಶುರಾಮ್ ಬಾಗಲವಾಡ,ಸುದರ್ಶನ್,ಸಂಪತ್ರಾಜ್ ಜಾಗೀರ್ ಪನ್ನೂರ್,ಭಾಸ್ಕರ್ ಜಗ್ಲಿ , ಚಂದ್ರು ಜಾನೇಕಲ್,ಮುತ್ತಣ್ಣ ಚಾಗಬಾವಿ, ಅಮರೇಶ ಹಿರೇಬಾದರದಿನ್ನಿ, ಯಲ್ಲಪ್ಪ ಸೀಕಲ್,ಜಯಪ್ಪ ಸಿರವಾರ, ಚನ್ನಪ್ಪ ಬೂದೆನಾಳ್,ಗಣೇಶ ಸಂಗಾಪೂರ್, ಸೇರಿದಂತೆ ಮಾನ್ವಿ ಮತ್ತು ಸಿರವಾರ ತಾಲೂಕುಗಳ ನೂರಾರು ಜನ ಸಮುದಾಯದವರು ಭಾಗವಹಿಸಿದರು.