ತಾಲೂಕು ವ್ಯವಸೋಯೋತ್ಪನ್ನ ಮಾರಾಟ ಸಹಕಾರ ಸಂಘದ 2025-26 ನೇ ಸಾಲಿನ ಸರ್ವಸದಸ್ಯರ ಸಭೆ
ಬುಧವಾರ ಟಿಎಪಿಸಿಎಂಎಸ್ ಕೇಂದ್ರ ಕಚೇರಿಯಲ್ಲಿ ನಡೆದ ಸಂಘದ 2025-26 ನೇ ಸಾಲಿನ ಸರ್ವ ಸದಸ್ಯರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಮ್ಮ ಸಂಘ 59 ನೇ ವರ್ಷಕ್ಕೆ ಕಾಲಿಟ್ಟಿದ್ದು ಅಭಿವೃದ್ಧಿ ಪಥದತ್ತ ಸಾಗಿದೆ. ತಾಲೂಕಿನ ಹೊನ್ನೇಕೊಡಿಗೆ ಗ್ರಾಮ ಪಂಚಾಯಿತಿಯ ಹಂತುವಾನಿಯಲ್ಲಿ ಗೊಬ್ಬರದ ಗೋದಾಮು ನಿರ್ಮಿಸಲು ತೀರ್ಮಾನಿಸಿದ್ದೇವೆ. ನಮ್ಮ ಸಂಘದ ಅಕ್ಕಿ ಮಿಲ್ಲಿನ ದುರಸ್ಥಿ ಕಾರ್ಯ ಹಾಗೂ ಅಲ್ಲಿ ಶೌಚಾಲಯ ನಿರ್ಮಿಸಲಾಗುವುದು. ನಮ್ಮ ಸಂಘದ ಕಚೇರಿ ಸಮೀಪದ ಗೋದಾಮು ಪಕ್ಕದ ಉಳಿದ ಜಾಗದಲ್ಲಿ ವ್ಯಾಪಾರ ಮಳಿಗೆ ನಿರ್ಮಿಸಲು ತೀರ್ಮಾನಿಸಲಾಗಿದೆ. ಅಲ್ಲದೆ ಸದಸ್ಯರ ಸಲಹೆಯಂತೆ ಮುಂದಿನ ದಿನಗಳಲ್ಲಿ ಅಡಕೆ ದಾಸ್ತಾನು ಸಾಲ ನೀಡಲು ಚಿಂತನೆ ನಡೆಸಲಾಗಿದೆ ಎಂದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಕಾಂತರಾಜು ವಾರ್ಷಿಕ ವರದಿ ವಾಚನ ಮಾಡಿ ಜಮಾ ಮತ್ತು ಖರ್ಚು ಮಂಡಿಸಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಕೆ.ಎಸ್.ಸೀತಾರಾಮ್, ನಿರ್ದೇಶಕರಾದ ಜಿ.ಎಂ.ಪ್ರಕಾಶ್, ಬಿ.ಪಿ. ಮೋಹನ್, ಎಸ್.ಗೋಪಾಲ್. ಕೆ.ಸಿ.ಜಯಪಾಲ್, ಕೆ.ಎಂ.ಜಗದೀಶ್, ವಿ.ಕೆ.ಸುಧಾಕರ, ಎಂ.ಟಿ.ಕುಮಾರ್, ಕೆ.ಪಿ.ಮೀನಾಕ್ಷಿ ಕಾಂತರಾಜ್, ಎಚ್.ಡಿ.ಮಿಥುನ, ಬಿ.ಎಂ.ರಾಮಚಂದ್ರ, ಬಿ.ಎ.ರಾಜಪ್ಪಗೌಡ, ಎಸ್.ರಂಗಪ್ಪ ಇದ್ದರು. ಮೀನಾಕ್ಷಿ ಕಾಂತರಾಜ್ ವಂದಿಸಿದರು.ಸರ್ವ ಸದಸ್ಯರ ಸಭೆಯಲ್ಲಿ ಸದಸ್ಯರಾದ ಪಿ.ಆರ್.ಸದಾಶಿವ, ಯಡಗೆರೆ ಸುಬ್ರಮಣ್ಯ, ಸುರೇಂದ್ರ ಹಿರೇಬಿಸು, ಕೀರ್ತನ್, ಆನೆಗದ್ದೆ ವೆಂಕಟೇಶ್ ಮುಂತಾದವರು ಚರ್ಚೆಯಲ್ಲಿ ಭಾಗವಹಿಸಿ ಸಂಘದ ಅಭಿವೃದ್ದಿಗಾಗಿ ಹಲವು ಸಲಹೆ ನೀಡಿದರು.