ಮಕ್ಕಳಿಗೆ ಮಾನವೀಯ ಮೌಲ್ಯ ತಿಳಿಸಿ

KannadaprabhaNewsNetwork |  
Published : Sep 06, 2024, 01:01 AM IST
5GDG16 | Kannada Prabha

ಸಾರಾಂಶ

ಅವರ ತಪ್ಪು ಅವರಿಗೆ ತಿಳಿಯಬೇಕು ಅವರಿಗೆ ಮನವರಿಕೆ ಆಗುವ ಹಾಗೇ ಬೋಧನೆ ಮಾಡಿದಾಗ ಮಾತ್ರ ಶಿಕ್ಷಕ ವೃತ್ತಿಗೆ ಗೌರವ ದೊರೆಯುತ್ತದೆ

ಮುಂಡರಗಿ: ಸ್ಥಳೀಯ ಜಗದ್ಗುರು ತೋಂಟದಾರ್ಯ ಸಿಬಿಎಸ್ ಇ ವಸತಿ ಶಾಲೆಯಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ ಜನ್ಮದಿನಾಚರಣೆಯನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸ್ಥಾನಿಕ ಆಡಳಿತ ಮಂಡಳಿಯ ಅಧ್ಯಕ್ಷ ಎಸ್.ಎಸ್. ಪಾಟೀಲ, ಮಕ್ಕಳಿಗೆ ಓದು, ಬರ ಲೆಕ್ಕಾಚಾರ ತಿಳಿಸಿದರೆ ಮಾತ್ರ ಸಾಲದು ಅವರಿಗೆ ಮಾನವೀಯ ಮೌಲ್ಯ ಕಲಿಸಬೇಕು, ಅವರ ತಪ್ಪು ಅವರಿಗೆ ತಿಳಿಯಬೇಕು ಅವರಿಗೆ ಮನವರಿಕೆ ಆಗುವ ಹಾಗೇ ಬೋಧನೆ ಮಾಡಿದಾಗ ಮಾತ್ರ ಶಿಕ್ಷಕ ವೃತ್ತಿಗೆ ಗೌರವ ದೊರೆಯುತ್ತದೆ. ಇಲ್ಲದಿದ್ದರೆ ನಾವು ವ್ಯರ್ಥ ಪ್ರಯತ್ನ ಮಾಡಿದಂತಾಗುತ್ತದೆ ಎಂದರು.

ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಪುರಸಭೆ ಉಪಾಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಸದಸ್ಯ ನಾಗೇಶ ಹುಬ್ಬಳ್ಳಿ ಮಾತನಾಡಿ, ಮಕ್ಕಳೇ ಮುಂದಿನ ಭಾವಿನಾಯಕರು ಅವರ ಭವಿಷ್ಯ ನಾಲ್ಕುಗೋಡೆಗಳ ನಡುವೆ ರೂಪಿಸಲಾಗುತ್ತದೆ. ಅದನ್ನು ಶಿಕ್ಷಕರು ಸಮರ್ಥವಾಗಿ ನಿಭಾಯಿಸಿದರೆ ನಮಗೊಬ್ಬ ಒಳ್ಳೆಯ ಡಾಕ್ಟರ್‌, ಎಂಜೀನಿಯರ್‌, ರಾಜಕೀಯ ನಾಯಕ, ಉತ್ತಮ ಆಟಗಾರ, ನಟ ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಶಾಲಾ ಪ್ರಾಚಾರ್ಯ ಶ್ರೀ ಶರಣಕುಮಾರ ಬುಗುಟಿ ಮಾತನಾಡಿ, ಹರಮುನಿದರೂ ಗುರು ಕಾಯುವ ಎಂಬಂತೆ ನಾವು ಎಷ್ಟೇ ಎತ್ತರದ ಹುದ್ದೆಯಲ್ಲಿದ್ದರೂ ಕೂಡಾ ನಮಗೆ ಮಾರ್ಗದರ್ಶನ ಮಾಡಿದ್ದು ನಮಗೆ ವಿದ್ಯಾರ್ಜನೆ ಮಾಡಿದ ಗುರು ಹಾಗೂ ತಾಯಿಯನ್ನು ನಾವು ಮರೆಯಲು ಸಾಧ್ಯವಿಲ್ಲ. ಏಕೆಂದರೆ ಮನೆಯೇ ಮೊದಲು ಪಾಠಶಾಲೆ ಜನನಿ ತಾನೆ ಮೊದಲಗುರು ಎಂದು ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಡಾ. ರಾಧಾಕೃಷ್ಣನ್‌ರವರ ಬಗ್ಗೆ ಹಾಗೂ ತಮ್ಮ ನೆಚ್ಚಿನ ಗುರುಗಳ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಆಡಳಿತ ಮಂಡಳಿಯ ಸದಸ್ಯ ಹೇಮಗರೀಶ ಹಾವಿನಾಳ, ಕೋಟ್ರೇಶ ಅಂಗಡಿ ಹಾಗೂ ಶಾಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು, ಶ್ರೀರಕ್ಷಾ ಅಳವಂಡಿ ನಿರೂಪಿಸಿದರು. ಗುರುಮೂರ್ತಿ ಟಿ ಹಿರೇಮಠ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ನಿರಾಶ್ರಿತರಿಗೆ 5ರ ನಂತರ ವಸತಿ ಭಾಗ್ಯ
ಹೊಸ ವರ್ಷಕ್ಕೆ ಶೇ.40 ಮದ್ಯ ಮಾರಾಟ ಹೆಚ್ಚಳ!