ಎಐ ಪೂರ್ತಿಯಾಗಿ ಆವರಿಸುವ ಮುನ್ನ ಮಕ್ಕಳಿಗೆ ಕೌಶಲ್ಯ ಕಲಿಸಿ: ಪ್ರೊ.ಶ್ರೀಧರ ಉದಗಟ್ಟಿ

KannadaprabhaNewsNetwork |  
Published : Nov 24, 2025, 02:30 AM IST
23ಡಿಡಬ್ಲೂಡಿ10ಪಂ. ಪುಟ್ಟರಾಜ  ಗವಾಯಿಗಳ ಕಲಾ ಪ್ರತಿಷ್ಠಾನವು ಕೆ.ಇ ಬೋರ್ಡ್ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಎಐ ತಂತ್ರಜ್ಞಾನದ ಜಾಗೃತಿ ಅಭಿಯಾನದಲ್ಲಿ ಬಾಬಾ ಆಟೋಮಿಕ್ ರಿಸರ್ಚ್ ಸೆಂಟರ್ ನ ವಿಜ್ಞಾನಿ ಪ್ರೊ. ಶ್ರೀಧರ ಉದಗಟ್ಟಿ ಅವರನ್ನು ಗೌರವಿಸಲಾಯಿತು.  | Kannada Prabha

ಸಾರಾಂಶ

ಮಕ್ಕಳಿಗೆ ಕೃತಕ ಬುದ್ದಿಮತ್ತೆ, ಡೇಟಾ ಕೌಶಲ್ಯ, ಸಂವಹನ ಮತ್ತು ವಿಮರ್ಶಾತ್ಮಕ ಚಿಂತನೆ ಕಲಿಸುವುದು ಅಗತ್ಯ ವಿಜ್ಞಾನಿ ಪ್ರೊ. ಶ್ರೀಧರ ಉದಗಟ್ಟಿ ಹೇಳಿದರು.

ಧಾರವಾಡ: ಆಧುನಿಕ ಯುಗದಲ್ಲಿ ಪೋಷಕರು ಮಕ್ಕಳಿಗೆ ಕೃತಕ ಬುದ್ದಿಮತ್ತೆ, ಡೇಟಾ ಕೌಶಲ್ಯ, ಸಂವಹನ ಮತ್ತು ವಿಮರ್ಶಾತ್ಮಕ ಚಿಂತನೆ ಕಲಿಸುವುದು ಅಗತ್ಯ ಎಂದು ಬಾಬಾ ಆಟೋಮಿಕ್ ರಿಸರ್ಚ್ ಸೆಂಟರ್ ನ ವಿಜ್ಞಾನಿ ಪ್ರೊ. ಶ್ರೀಧರ ಉದಗಟ್ಟಿ ಹೇಳಿದರು.

ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ ಕೆ.ಇ. ಬೋರ್ಡ್ ಪ್ರೌಢಶಾಲೆ ಆಶ್ರಯದಲ್ಲಿ 2ನೇ ಯುವ ಚಿಂತನಾ ಸಮಾವೇಶದ ಅಂಗವಾಗಿ ಏರ್ಪಡಿಸಿದ್ದ ಎಐ ತಂತ್ರಜ್ಞಾನದ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದ ಅವರು, ಈಗಾಗಲೇ ಎಐ ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಆವರಿಸುತ್ತಿದ್ದು, ಮಕ್ಕಳಲ್ಲಿ ಈ ಕೌಶಲ್ಯ ಅಳವಡಿಕೆ ಅನಿವಾರ್ಯ ಎಂದರು.

ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ. ಶ್ರೀಧರ್ ಜೋಶಿ, ಎಐ ಬಹುತೇಕ ಮಟ್ಟಿಗೆ ಕೆಲಸಗಳನ್ನು ನಿಭಾಯಿಸುವಂತಾಗಿದೆ. ಹಿಂದೆಲ್ಲಾ ಮೂರು ನಾಲ್ಕು ಜನರು ಮಾಡುವ ಕೆಲಸವನ್ನು ಈಗ ಎಐ ಕ್ಷಣ ಮಾತ್ರದಲ್ಲಿಯೇ ಮಾಡಿಕೊಡುತ್ತಿದೆ. ಹಾಗಾಗಿ ಭವಿಷ್ಯದಲ್ಲಿ ಈ ತಂತ್ರಜ್ಞಾನ ಸರಳ ಹಾಗೂ ಸುಲಭವಾಗಲಿದೆ. ಎಐ ಪ್ರಭಾವದಿಂದ ತಮ್ಮ ಮಕ್ಕಳಿಗೆ ಭವಿಷ್ಯದಲ್ಲಿ ಉದ್ಯೋಗ ಸಿಗಲಿದೆಯೇ ಎಂಬ ಆತಂಕವೂ ಪೋಷಕರಿಗಿದೆ ಎಂದರು.

ಸರ್ವಾಧ್ಯಕ್ಷ ಸುನೀಲ ಬಾಗೇವಾಡಿ ಯುವ ಚಿಂತನಾ ಸಮಾವೇಶದ ಗುರಿ-ಉದ್ದೇಶಗಳ ಬಗ್ಗೆ ಮಾಹಿತಿ ನೀಡಿದರು. ಕೆ.ಇ. ಬೋರ್ಡ್ ಪ್ರೌಢಶಾಲೆಯ ಪ್ರಾಂಶುಪಾಲರಾದ ಎನ್.ಎಸ್. ಗೋವಿಂದರೆಡ್ಡಿ, ವಿಮಾ ತಜ್ಞರಾದ ಎಂ.ಎನ್. ಪಾಟೀಲ, ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನದ ಅಧ್ಯಕ್ಷ ಎಂ.ಎಸ್. ಫರಾಸ, ಸಂಯೋಜಕ ಅರುಣಕುಮಾರ ಶೀಲವಂತ, ವಿಷ್ಣು ಹುಕ್ಕೇರಿ, ಶಿಕ್ಷಣತಜ್ಞ ವಿನಾಯಕ ಜೋಶಿ ಮಾತನಾಡಿದರು. ಮಾರ್ತಾಂಡಪ್ಪ ಕತ್ತಿ ಸ್ವಾಗತಿಸಿದರು. ಸುರೇಶ ಬೆಟಗೇರಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಜೆಪಿ ಎಷ್ಟು ಕೇಸ್‌ ಸಿಬಿಐಗೆ ನೀಡಿದೆ? : ಸಿಎಂ
ರಾಷ್ಟ್ರಧ್ವಜ ತಯಾರಿಸ್ತಿ ದ್ದ ಕೈಗಳಲ್ಲೀಗ ಕೆಲಸವಿಲ್ಲ!