ಶಿಕ್ಷಕರ ಮಾರ್ಗದರ್ಶನವೇ ಬದುಕಿನ ಬೆಳಕು: ಟಿ. ನಾರಾಯಣಸ್ವಾಮಿ

KannadaprabhaNewsNetwork |  
Published : Sep 08, 2026, 02:15 AM IST
ಪೋಟೋ | Kannada Prabha

ಸಾರಾಂಶ

ಚಿಕ್ಕಮಗಳೂರುಶಿಕ್ಷಕರ ಮಾರ್ಗದರ್ಶನವೇ ಬದುಕಿನ ಬೆಳಕು, ಕತ್ತಲನ್ನು ಕಳೆದು ಗುರಿಯ ದಾರಿ ತೋರಿಸುವ ಗುರು ಗಳ ಮಾರ್ಗದರ್ಶನದಲ್ಲಿ ನಡೆದರೆ ಜ್ಞಾನದ ಗಿರಿ ಏರಲು ಸಾಧ್ಯ ಎಂದು ಲಯನ್ಸ್ ಸಂಸ್ಥೆ ಅಧ್ಯಕ್ಷ ಟಿ. ನಾರಾಯಣಸ್ವಾಮಿ ಹೇಳಿದರು.

ಲಯನ್ಸ್ ಸಂಸ್ಥೆಯಿಂದ ಶಿಕ್ಷಕರ ದಿನಾಚರಣೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಶಿಕ್ಷಕರ ಮಾರ್ಗದರ್ಶನವೇ ಬದುಕಿನ ಬೆಳಕು, ಕತ್ತಲನ್ನು ಕಳೆದು ಗುರಿಯ ದಾರಿ ತೋರಿಸುವ ಗುರು ಗಳ ಮಾರ್ಗದರ್ಶನದಲ್ಲಿ ನಡೆದರೆ ಜ್ಞಾನದ ಗಿರಿ ಏರಲು ಸಾಧ್ಯ ಎಂದು ಲಯನ್ಸ್ ಸಂಸ್ಥೆ ಅಧ್ಯಕ್ಷ ಟಿ. ನಾರಾಯಣಸ್ವಾಮಿ ಹೇಳಿದರು.ನಗರದ ಮಧುವನ ಬಡಾವಣೆ ಲಯನ್ಸ್ ಭವನದಲ್ಲಿ ಲಯನ್ಸ್ ಸಂಸ್ಥೆ ಯಿಂದ ಆಯೋಜಿಸಿದ್ದ ಶಿಕ್ಷಕರ ದಿನಾ ಚರಣೆಯಲ್ಲಿ ಮಾತನಾಡಿ ಯಾರು ಯಾವ ಹುದ್ದೆಯಲ್ಲಿದ್ದರೂ, ಎಂತಹ ಸ್ಥಾನಮಾನದಲ್ಲಿದ್ದರೂ ಗುರುವಿನ ಮುಂದೆ ಗೌರವದಿಂದ ತಲೆಬಾಗುತ್ತಾರೆ. ಅವತಾರ ಪುರುಷರಾದ ರಾಮ- ಕೃಷ್ಣರೂ ತಮ್ಮ ಗುರುಗಳ ಮಾತನ್ನು ಮೀರಲಿಲ್ಲ ಎಂಬುದು ನಮ್ಮ ನೆಲದ ಆದರ್ಶ ಎಂದರು.‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂದು ದಾಸರು ಹೇಳಿರುವುದು ಗುರುವಿನ ಮಹತ್ವ ಮತ್ತು ಗೌರವವನ್ನು ಸಾರುತ್ತದೆ. ಶಿಕ್ಷಕರು ಸಮಾಜಕ್ಕೆ ದಾರಿ ತೋರುವ ಜವಾಬ್ದಾರಿಯುತ ವ್ಯಕ್ತಿಗಳು ಎಂದು ಹೇಳಿದರು.ಮಕ್ಕಳ ವೈದ್ಯ ಡಾ. ಜೆ.ಪಿ. ಕೃಷ್ಣೇಗೌಡ ಮಾತನಾಡಿ ಗುರು ಶಿಷ್ಯರೊಂದಿಗೆ ಎಷ್ಟೇ ಆತ್ಮೀಯತೆ, ಪ್ರೀತಿ ಹಾಗೂ ವಿಶ್ವಾಸದಿಂದಿದ್ದರೂ ಶಿಕ್ಷಣದ ವಿಚಾರದಲ್ಲಿ ಗಟ್ಟಿ ನಿಲುವು ಹೊಂದಿರಬೇಕು. ಶಿಕ್ಷಕರ ಒಂದು ತಪ್ಪಿನಿಂದ ಒಂದು ಪೀಳಿಗೆಯೇ ದಾರಿ ತಪ್ಪುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.ಲಯನ್ಸ್ ಪ್ರಾಂತೀಯ ರಾಯಭಾರಿ ಬಿ.ಎನ್. ವೆಂಕಟೇಶ್ ಮಾತನಾಡಿ ಆಧುನಿಕ ಭರಾಟೆ ನಡುವೆಯೂ ಮಕ್ಕಳು ಗುರುವಿಗೆ ಗೌರವ ನೀಡುತ್ತಾರೆ. ಶಿಕ್ಷಕರು ಹೇಳುವ ಮಾತು ಸತ್ಯವೆಂದು ನಂಬುತ್ತಾರೆ. ಈ ಗೌರವ ಹಾಗೂ ನಂಬಿಕೆ ಎಲ್ಲಾ ಕ್ಷೇತ್ರಗಳ ಶಿಕ್ಷಕರಿಗೂ ಅನ್ವಯಿಸುತ್ತದೆ ಎಂದರು.ಸಮಾರಂಭದಲ್ಲಿ ಕಳಸಾಪುರ ಕಾಲೇಜು ಪ್ರಾಚಾರ್ಯ ನಾಗರಾಜರಾವ್ ಎಚ್.ಎಂ., ಜ್ಯೂನಿಯರ್ ಕಾಲೇಜಿನ ಉಪನ್ಯಾಸಕ ತ್ಯಾಗರಾಜ್, ಆವತಿ ಶಿಕ್ಷಕಿ ರೇಖಾ ನಾಗರಾಜರಾವ್, ಕುರುವಂಗಿಯ ಶಿಕ್ಷಕಿ ಡಾ. ಮಂಜುಳ ಸೇರಿದಂತೆ ಶಿಕ್ಷಕರನ್ನು ಸನ್ಮಾನಿಸಲಾಯಿತು. ಭಗವತಿ ಹರೀಶ್, ಅಣ್ಣಾವೇಲು, ಸರಳ ಶ್ರೀಧರ್, ಡಾ. ಜ್ಯೋತಿ ಕೃಷ್ಣೇಗೌಡ, ಡಾ. ಗೌರಿವರುಣ್, ಎಸ್.ಆರ್. ವೈದ್ಯ, ಕುಮಾರ್, ಗೋಪಿಕೃಷ್ಣ, ಬಾಲಕೃಷ್ಣ, ರತ್ನಾಕರ್, ಕವಿತಾ ರಮೇಶ್, ಕವಿತಾ ಶಂಕರ್, ಕೇಶವಮೂರ್ತಿ, ವಿಜಯ ಕೇಶವ್ ಮೊದಲಾದವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೋಪಿನಾಥಂನಲ್ಲಿ ₹3 ಕೋಟಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ: ಶಾಸಕ ಮಂಜುನಾಥ್
ಮನಸಿಗೆ ನೆಮ್ಮದಿ ನೀಡುವ ಶಿಕ್ಷಕ ವೃತ್ತಿ: ದಿನೇಶ ಶೆಟ್ಟಿ