ಒತ್ತಡದಲ್ಲಿ ಕೆಲಸ ಮಾಡುವುದು ಶಿಕ್ಷಕರಿಗೆ ಕಷ್ಟವಾಗುತ್ತಿದೆ-ಡಾ. ಎ.ಸಿ. ವಾಲಿ ಮಹಾರಾಜರು

KannadaprabhaNewsNetwork |  
Published : Feb 21, 2026, 02:30 AM IST
ಶಿಗ್ಗಾಂವಿ ತಾಲೂಕಿನ ಹೊತನಳ್ಳಿ ಗ್ರಾಮದ ವಸತಿ ನಿಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು. | Kannada Prabha

ಸಾರಾಂಶ

ಹಿಂದಿನ ಕಾಲದಲ್ಲಿ ಗುರುವಾಗಿದ್ದವರು, ಬರು ಬರುತ್ತಾ ಮಾಸ್ತರ ಆಗಿ, ಟೂಟರ್ ಆಗಿ, ಪೆಸಿಲೇಟರ್ ಆಗಿ ಉಳಿದಿದ್ದು, ಶಿಕ್ಷಣವು ಕೆಳ ಹಂತಕ್ಕೆ ಇಳಿಯುತ್ತಿರುವುದಕ್ಕೆ ಸಾಕ್ಷಿಕರಿಸುತ್ತಿದೆ ಎಂದು ಡಾ. ಎ.ಸಿ.ವಾಲಿ ಮಹಾರಾಜರು ಹೇಳಿದರು.

ಶಿಗ್ಗಾಂವಿ: ಹಿಂದಿನ ಕಾಲದಲ್ಲಿ ಗುರುವಾಗಿದ್ದವರು, ಬರು ಬರುತ್ತಾ ಮಾಸ್ತರ ಆಗಿ, ಟೂಟರ್ ಆಗಿ, ಪೆಸಿಲೇಟರ್ ಆಗಿ ಉಳಿದಿದ್ದು, ಶಿಕ್ಷಣವು ಕೆಳ ಹಂತಕ್ಕೆ ಇಳಿಯುತ್ತಿರುವುದಕ್ಕೆ ಸಾಕ್ಷಿಕರಿಸುತ್ತಿದೆ ಎಂದು ಡಾ. ಎ.ಸಿ.ವಾಲಿ ಮಹಾರಾಜರು ಹೇಳಿದರು.

ತಾಲೂಕಿನ ಹೋತನಹಳ್ಳಿ ಗ್ರಾಮದ ದೇವರಾಜ ಅರಸು ಮೆಟ್ರಿಕ್ ಪೂರ್ವ ಬಾಲಕರ ವಸತಿನಿಲಯದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ, ಸರಸ್ವತಿ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಂದಿನ ಶಿಕ್ಷಕರು ಒತ್ತಡದಲ್ಲಿ ಕೆಲಸ ಮಾಡುತ್ತಿರುವುದರಿಂದ ಶಿಕ್ಷಣವನ್ನು ದಾನ ಮಾಡುವುದು ಅವರಿಗೆ ಕಷ್ಟಕರವಾಗುತ್ತಿದೆ. ನಮ್ಮ ಶೈಕ್ಷಣಿಕ ವ್ಯೆವಸ್ಥೆಯಲ್ಲಿ ಪಠ್ಯ ರಚನೆಯೇ ಗೊಂದಲದಲ್ಲಿ ಇದ್ದು, ಯಾರೋ ರಚನೆ ಮಾಡಿದ ಪಠ್ಯವನ್ನು ಶಿಕ್ಷಕರು ಮಕ್ಕಳಿಗೆ ಮುಟ್ಟಿಸುವ ವ್ಯರ್ಥ ಕಾರ್ಯಮಾಡುತ್ತಿದ್ದಾರೆ. ಇದರಿಂದ ಮೌಲ್ಯಯುತ ಶಿಕ್ಷಣ ಅಂಧರಿತ ಶಿಕ್ಷಣವಾಗಿ ವಿಜೃಂಭಿಸುತ್ತಿದೆ. ಪಾಠ ಮಾಡುವ ಶಿಕ್ಷಕ ತನ್ನ ಮಕ್ಕಳಿಗೆ ಬೇಕಾಗುವ ಪಠ್ಯವನ್ನು ರಚನೆ ಮಾಡಿದಾಗ ಮಾತ್ರ ಶಿಕ್ಷಣವು ಪ್ರತಿಯೊಬ್ಬ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಪ್ರಬುದ್ಧನನ್ನಾಗಿ ಮಾಡುವಲ್ಲಿ ಸಾಧ್ಯವಾಗುತ್ತದೆ ಎಂದರು.

ಯುಗಕ್ಕೆ ಒಬ್ಬ ಶರಣ ಬರಬೇಕೆಂದು ಕಾಲ ಕೇಳಿಕೊಳ್ಳುತ್ತಿರುತ್ತದೆ. ಅದರಂತೆ ೧೨ನೇ ಶತಮಾನದಲ್ಲಿ ಬಸವಣ್ಣ ಬಂದು ನಮ್ಮನ್ನೆಲ್ಲ ಮೇಲೆತ್ತುವ ಕಾರ್ಯ ಮಾಡಿದರು. ಪ್ರಭುತ್ವ ಎಂಬುವುದು ದಿಕ್ಕು ತಪ್ಪಿಸುವ ವಿಷಯವಾಗಿದ್ದು, ನಮ್ಮನ್ನು ನಾವು ಹೆಚ್ಚು ಜ್ಞಾನವಂತರನ್ನಾಗಿ ಮಾಡಿಕೊಂಡು ದೃಢವಾದ ಪ್ರಭುತ್ವವನ್ನು ಸಾಧಿಸಿಕೊಳ್ಳಬೇಕು. ಧರ್ಮ, ಜಾತಿ, ಕುಲ, ಗೋತ್ರಗಳ ಹೆಸರಿನ ಗೋಡೆಗಳಲ್ಲಿ ನೀಡುತ್ತಿರುವ ಶಿಕ್ಷಣದಿಂದ ಮಾನವತ್ವದ ಬಯಲಲ್ಲಿ ಸಿಗುವ ಸರ್ವಾಂಗೀಣ ಶಿಕ್ಷಣವನ್ನು ಪಡೆಯುವರಾಗಬೇಕು ಎಂದು ಹೇಳಿದರು.ಶಿಗ್ಗಾಂವಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಶಶಿಕಾಂತ ರಾಠೋಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೋತನಹಳ್ಳಿಯ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ನಂದಿಹಳ್ಳಿ, ಗಂಗಣ್ಣ ಬಂಗಿ ಮಾತನಾಡಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ನಿಲಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.ಕಾರ್ಯಕ್ರಮದಲ್ಲಿ ನಿಲಯಪಾಲಕ ರಮೇಶ ಹರಿಜನ, ಮುಖಂಡ ಗಂಗಣ್ಣ ಬಂಗಿ, ಬಸವರಾಜ ಶಿಗ್ಗಾವಿ, ಸಿಡಿ ಯತ್ತಿನಹಳ್ಳಿ, ಶಂಭು ಕೇರಿ, ಇಂದೂಧರ, ಶಶಿಕಾಂತ ರಾಠೋಡ, ರವಿ ಕಡಕೋಳ, ಮಾಂತೇಶ ನಾಯ್ಕೋಡಿ, ಇಂದೂಧರ ಮುತ್ತಳ್ಳಿ, ಅರೂಣ ಹಿರೇಗೌಡ್ರ ಇತರರಿದ್ದರು.ಹೋತನಹಳ್ಳಿ ಗ್ರಾಮದ ಹಿರಿಯರ ಹೋರಾಟದ ಫಲದಿಂದ ಈ ಗ್ರಾಮದಲ್ಲಿ ವಸತಿ ನಿಲಯವನ್ನು ತೆರೆಯಲಾಗಿದ್ದು, ಇದರ ನಿಲಯ ಪಾಲಕರ ಕಳಕಳಿಯಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿದೆ. ಇಲ್ಲಿನ ಮಕ್ಕಳಿಗೆ ಕೃಷಿಯಲ್ಲಿ ಆಸಕ್ತಿ ಮೂಡಿಸುವ ಉದ್ದೇಶದಿಂದ ಕೈತೋಟಮಾಡಿ, ಅದರಲ್ಲಿ ತರಕಾರಿಗಳನ್ನು ಬೆಳೆಯಲಾಗುತ್ತಿದ್ದು, ನಿಲಯದ ವಿದ್ಯಾರ್ಥಿಗಳ ಹೆಸರುಗಳನ್ನೆ ಗಿಡಗಳಿಗೂ ಇಟ್ಟು ಪ್ರಕೃತಿಯನ್ನು ಪೋಷಿಸುವ ಕೆಲಸವನ್ನು ನಿಲಯ ಪಾಲಕ ರಮೇಶ ಮಾಡುತ್ತಿದ್ದಾರೆ ಎಂದು ಐಟಿಐ ಶಿಗ್ಗಾಂವಿಯ ತರಬೇತಿದಾರಶಶಿಕಾಂತ ರಾಠೋಡ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಧ ವಧುವಿಗೆ ಬಾಳುಕೊಟ್ಟ ವರ
ಸುತ್ತೋಲೆ ಇಲ್ಲದೇ ಕೈತೋಟದ ಸಸಿಗಳ ಹಣ ಪಾವತಿಗೆ ವಿರೋಧ