- ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ ನೀಡಿ ಸ್ವಾಗತ । ಖುಷಿಯಿಂದ ಶೈಕ್ಷಣಿಕ ವರ್ಷ ಆರಂಭ
ಬಾಲಕರ ಪಿಎಂಶ್ರೀ ಶಾಲೆಯಲ್ಲಿ ಶಿಕ್ಷಣ ಇಲಾಖೆಯಿಂದ ನೀಡಲಾಗಿದ್ದ ಪಠ್ಯಪುಸ್ತಕ, ಸಮವಸ್ತ್ರ, ಬ್ಯಾಡ್ಜ್, ಟೈ, ಗಳನ್ನು ಮಕ್ಕಳಿಗೆ ನೀಡುವ ಮೂಲಕ ಪುರಸಭೆ ಅಧ್ಯಕ್ಷೆ ವನಿತಾ ಮಧು ಬಾವಿನೆ ಮಕ್ಕಳನ್ನು ಸ್ವಾಗತಿಸಿ, ಮಾತನಾಡಿ, ಪೋಷಕರು ಖಾಸಗಿ ಶಾಲೆಗಳಿಗೆ ಒತ್ತು ನೀಡುವಂತೆ ಸರ್ಕಾರಿ ಶಾಲೆಗಳ ಉಳಿವಿಗಾಗಿ ಹೋರಾಟ ನಡೆಸಿದರೇ ಮಾತ್ರ ಸರ್ಕಾರಿ ಶಾಲೆ ಉಳಿಯುತ್ತವೆ. ಸರ್ಕಾರ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ಎಲ್ಲಾ ರೀತಿಯ ವಿದ್ಯಾಭ್ಯಾಸದ ಸವಲತ್ತು ಗಳನ್ನು ನೀಡುತ್ತಿದೆ. ಅದನ್ನು ಪೋಷಕರು ಬಳಸಿಕೊಳ್ಳಬೇಕು. ವಿದ್ಯಾರ್ಥಿಗಳು ಓದಿನ ಕಡೆ ಗಮನಹರಿಸಿ ಎಂದರು. ಮಕ್ಕಳು ಸಂಭ್ರಮದೊಂದಿಗೆ ಶಾಲೆಗೆ ಧಾವಿಸಿದರು. ಇದೇ ಸಂದರ್ಭ ಪೋಷಕರು ತಮ್ಮ ಮಕ್ಕಳಿಗೆ ಸಾಮೂಹಿಕವಾಗಿ ಅಕ್ಷರಾಭ್ಯಾಸ ಮಾಡಿಸಿದರು. ಈ ಸಂದರ್ಭದಲ್ಲಿ ಶಿಕ್ಷಕರ ಸಂಘದ ಅಧ್ಯಕ್ಷ ಬಸಪ್ಪ, ಕಾರ್ಯದರ್ಶಿ ಅಶೋಕ್, ಬಿ.ಆರ್.ಸಿ ಶೇಖರಪ್ಪ, ಟಿ.ಪಿಒಇ,ಒ ಜಯದೇವಪ್ಪ, ಹಳೇ ವಿದ್ಯಾರ್ಥಿ ಗಳ ಸಂಘದ ಅಧ್ಯಕ್ಷ ಗಿರೀಶ್, ಎಸ್.ಡಿ.ಎಂ.ಸಿ ಅಧ್ಯಕ್ಷ ಪ್ರಸನ್ನ, ಹಾಗೂ ಶಿಕ್ಷಣ ಇಲಾಖೆ ಎಲ್ಲಾ ಅನುಪಾಲನ ಅಧಿಕಾರಿಗಳು ಇದ್ದರು.
-- ಕೋಟ್--ಶೈಕ್ಷಣಿಕ ವಲಯದಲ್ಲಿ ಎಲ್ಲಾ ಶಾಲೆಗಳಲ್ಲಿ ಎಸ್ ಡಿ ಎಂಸಿ ಹಾಗೂ ಚುನಾಯಿತ ಪ್ರತಿನಿಧಿಗಳನ್ನು ಕರೆಸಿ ಮಕ್ಕಳಿಗೆ ಸ್ವಾಗತ ಕೋರಲಾಯಿತು. ವಲಯದಲ್ಲಿ ಈಗಾಗಲೇ ಶೇ 90ರಷ್ಟು ಪಠ್ಯಪುಸ್ತಕಗಳನ್ನು ಶಾಲೆಗಳಿಗೆ ತಲುಪಿಸಲಾಗಿದ್ದು, ಶಾಲೆಗೆ ಇಂದು ಹಾಜರಾದ ಮಕ್ಕಳಿಗೆ ವಿತರಿಸಿದ್ದಾರೆ. ಶಾಲೆಗೆ ಗೈರುಹಾಜರಾದ ಮಕ್ಕಳ ಪೋಷಕರನ್ನು ಆಯಾ ಶಾಲೆ ತರಗತಿ ಶಿಕ್ಷಕರು ಶಾಲೆಗೆ ಕರೆತರಲು ಗಮನಹರಿಸಿದ್ದು.ಸಿ.ಆರ್.ಪಿ ಗಳು ವಲಯ ವ್ಯಾಪ್ತಿಯಲ್ಲಿ ಶಾಲೆಗಳ ಮೇಲೆ ಪೂರ್ವಸಿದ್ಧತೆ ಬಗ್ಗೆ ಪರಿಶೀಲಿಸಲು ಮಿಂಚಿನ ಸಂಚಾರ ಕೈಗೊಂಡಿದ್ದಾರೆ. ಟಿ.ಆರ್.ರುದ್ರಪ್ಪ.
ಕ್ಷೇತ್ರಶಿಕ್ಷಣಾಧಿಕಾರಿಗಳು ,ಬೀರೂರು. 30ಬೀರೂರು 1ಬೀರೂರಿನ ಸರಕಾರಿ ಬಾಲಕರ ಶಾಲೆಯಲ್ಲಿ ನಡೆದ ಪ್ರಾರಂಭೋತ್ಸವದಲ್ಲಿ ಪುರಸಭೆ ಅಧ್ಯಕ್ಷೆ ವನಿತಾಮಧು ಹಾಗೂ ಬಿ.ಇ.ಒ ಟಿ.ಆರ್.ರುದ್ರಪ್ಪ, ಶಿಕ್ಷಕರ ಸಂಘದ ಅಧ್ಯಕ್ಷ ಬಸಪ್ಪ, ಮಕ್ಕಳಿಗೆ ಪಠ್ಯಪುಸ್ತಕ ಹಾಗೂ ಹೂಗುಚ್ಚ ನೀಡಿ ಸ್ವಾಗತಿಸಿದರು.