ಕನ್ನಡಪ್ರಭ ವಾರ್ತೆ ತರೀಕೆರೆ
ಅವರು ಮಂಗಳವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿ, ಸಮೂಹ ಸಂಪನ್ಮೂಲ ಕೇಂದ್ರ, ಕಸಬಾ ನಗರ ಬೇಲೇನಹಳ್ಳಿ, ನ್ಯಾಷನಲ್ ಇಂಗ್ಲೀಷ್ ಹೈಯರ್ ಪ್ರೈಮರಿ ಸ್ಕೂಲ್ ಇವರ ಸಂಯುಕ್ತಾಶ್ರಯದಲ್ಲಿ ನ್ಯಾಷನಲ್ ಇಂಗ್ಲೀಷ್ ಹೈಯರ್ ಪ್ರೈಮರಿ ಸ್ಕೂಲ್ ಅವರಣದಲ್ಲಿ ಏರ್ಪಡಿಸಿದ್ದ ಕಸಬಾನಗರ ಮತ್ತು ಬೇಲೇನಹಳ್ಳಿ ಕ್ಲಸ್ಟರ್ ಮಟ್ಟದ ಹಿರಿಯ ಕಿರಿಯ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿಭೆ ಒಬ್ಬರ ಸ್ವತ್ತಲ್ಲ, ಪ್ರತಿಭೆ ಅನಾವರಣ ಆಗಬೇಕು, ಮಕ್ಕಳು ತಾಲೂಕು, ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ವಿಜೇತರಾಗಿ ತರೀಕೆರೆಗೆ ಕೀರ್ತಿ ತರಬೇಕು ಎಂದು ಅವರು ಶುಭ ಹಾರೈಸಿದರು.ಮಾಜಿ ಶಾಸಕ ಟಿ.ಎಚ್.ಶಿವಶಂಕರಪ್ಪ ಅವರ ಪತ್ನಿ ಧನಲಕ್ಷ್ಮಿ ಟಿ.ಎಚ್.ಶಿವಶಂಕರಪ್ಪ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ, ತಾಲೂಕಿಗೆ, ಜಿಲ್ಲೆಗೆ ಕೀರ್ತಿ ತರಬೇಕು ಎಂದು ಶುಭ ಕೋರಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜಪ್ಪ ಮಾತನಾಡಿ, ಪ್ರತಿಭಾ ಕಾರಂಜಿ ಕಾರ್ಯಕ್ರಮ ಅಚ್ಚುಕಟ್ಟಾಗಿ ನೆಡೆದಿದೆ, ಶಿಕ್ಷಕರು ಮಕ್ಕಳ ಪ್ರತಿಭೆಯನ್ನು ಹೊರತರುತ್ತಾರೆ, ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಶಾಲೆಗಳ ಅಭಿವೃದ್ಧಿಗೆ ಅನುದಾನ ಒದಗಿಸಿಕೊಡಬೇಕೆಂದು ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ನಿರ್ದೇಶಕರಾದ ಟಿ.ಎಸ್.ಪ್ರಕಾಶ್ ವರ್ಮ ಅವರಲ್ಲಿ ಮನವಿ ಮಾಡಿದರು.
ನ್ಯಾಷನಲ್ ಇಂಗ್ಲೀಷ್ ಹೈಯರ್ ಪ್ರೈಮರಿ ಸ್ಕೂಲ್ ಕಾರ್ಯದರ್ಶಿ ಹೇಮಲತ ರೇವಣ್ಣ, ಲೇಖಕ ತ.ಮ.ದೇವಾನಂದ್, ಶಿಕ್ಷಕರಾದ ತಿಪ್ಪೇಶಪ್ಪ, ಶಿವಕುಮಾರ್, ಹರೀಶ್, ಧರ್ಮರಾಜ್, ನಟರಾಜ್, ಶೇಖರಪ್ಪ, ಶಾಲೆ ಮುಖ್ಯೋಪಾಧ್ಯಾಯರಾದ ಲೀಲಾವತಿ, ಶಿಲ್ಪಾ, ಮಂಜುಳ ಇತರರು ಭಾಗವಹಿಸಿದ್ದರು.