ಶಿಕ್ಷಕ ವೃತ್ತಿ ಜಗತ್ತಿನಲ್ಲಿಯೇ ಅತ್ಯಂತ ಶ್ರೆಷ್ಠವಾದುದು ಎಂದು ಚಲನಚಿತ್ರ ಸಾಹಿತಿ ವಿ. ನಾಗೇಂದ್ರ ಪ್ರಸಾದ ಹೇಳಿದರು.
ರಾಣಿಬೆನ್ನೂರು: ಶಿಕ್ಷಕ ವೃತ್ತಿ ಜಗತ್ತಿನಲ್ಲಿಯೇ ಅತ್ಯಂತ ಶ್ರೆಷ್ಠವಾದುದು ಎಂದು ಚಲನಚಿತ್ರ ಸಾಹಿತಿ ವಿ. ನಾಗೇಂದ್ರ ಪ್ರಸಾದ ಹೇಳಿದರು. ನಗರದ ಎಪಿಎಂಸಿ ರೈತ ಸಮುದಾಯ ಭವನದಲ್ಲಿ ಗುರುವಾರ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರವರ 136ನೇ ಜನ್ಮ ದಿನದ ಅಂಗವಾಗಿ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಹಾಗೂ ತಾಲೂಕು ಪಂಚಾಯತ್, ರಾಣಿಬೆನ್ನೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ತಂದೆ-ತಾಯಿಗಳಿಗಿಂತ ಶಿಕ್ಷಕರ ಜತೆ ಹೆಚ್ಚು ಸಮಯ ಕಳೆಯುತ್ತಾರೆ. ಶಿಕ್ಷಕರು ಪ್ರಾತಃಸ್ಮರಣೀಯರಾಗಿದ್ದು ನನ್ನ ಬೆಳವಣಿಗೆ, ಏಳಿಗೆಗೆ ಸೇತುವೆಯಾಗಿ ಕೆಲಸ ಮಾಡಿದ್ದಾರೆ. ಶಿಕ್ಷಕರು, ನನ್ನ ಬಾಲ್ಯದಲ್ಲಿ ನಾನು ಬರೆಯುವ ಪದ್ಯಗಳಿಗೆ ಪೋತ್ಸಾಹ ನೀಡದೇ ಹೋಗಿದ್ದರೆ ನಾನು ಇವತ್ತು ಇಲ್ಲಿ ಇರುತ್ತಿರಲಿಲ್ಲ. ನಾನು ಕಲಿತಿದ್ದು ಸರ್ಕಾರಿ ಶಾಲೆಯಲ್ಲಿಯೇ. ಶಿಕ್ಷಕರು ಏಣಿ ಇದ್ದಂತೆ, ವಿದ್ಯಾರ್ಥಿಗಳನ್ನು ಮೇಲೆ ಹತ್ತಿಸುವ ಕೆಲಸ ಮಾಡುತ್ತಾರೆ. ಸಮಾಜದ ಗಣ್ಯವ್ಯಕ್ತಿಗಳಾಗಿ ಬದುಕುತ್ತಿದ್ದಾರೆ ಎಂದರೆ ಅಲ್ಲಿ ಒಬ್ಬ ಶಿಕ್ಷಕನ ಪಾತ್ರವಿರುತ್ತದೆ ಎಂದರು. ಶಾಸಕ ಪ್ರಕಾಶ ಕೋಳಿವಾಡ ಅಧ್ಯಕ್ಷತೆ ವಹಿಸಿದ್ದರು. ತಾಪಂ ಇಓ ಪರಮೇಶ, ನಗರಸಭೆ ಪೌರಾಯುಕ್ತ ಎಫ್.ಐ. ಇಂಗಳಗಿ, ಸಾಶಿಇ ಆಡಳಿತ ಉಪನಿರ್ದೇಶಕ ಸುರೇಶ ಹುಗ್ಗಿ, ಉಪನಿರ್ದೇಶಕರು (ಅಭಿವೃದ್ಧಿ) ಡಯಟ್ ಗಿರೀಶ ಪದಕಿ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮಸುಂದರ ಅಡಿಗ, ಕೆ.ಎಚ್. ಮುಕ್ಕಣ್ಣನವರ, ಎಂ.ಡಿ. ದ್ಯಾಮಣ್ಣನವರ, ಎನ್.ಎಂ. ಚವಡಣ್ಣನವರ, ಎಚ್.ಪಿ. ಬಣಕಾರ, ಬಿ.ಎಫ್. ದೊಡ್ಡಮನಿ, ರಮೇಶ ಅಳಲಗೇರಿ, ಡಾ. ಮಾಲತೇಶ ಚಲವಾದಿ, ನಾಗರಾಜ ನಲವಾಗಲ, ಇಸ್ಮಾಯಿಲ್ ಐರಣಿ, ಹೇಮಂತ ಎಸ್.ಕೆ, ಬಸವರಾಜ ಗುಡಿಹಿಂದ್ಲರ, ಎಸ್.ಎನ್.ಇಂಗಳಗೊಂದಿ, ಅಬ್ದುಲ್ ಹೊನ್ನಳ್ಳಿ, ಎಂ.ಕೆ. ಸಾಲಿಮಠ, ಪ್ರಕಾಶ ಚೌಟಗಿ, ಚನ್ನಬಸಪ್ಪ ಸಂಗಪ್ಪನವರ, ರಾಣಿಬೆನ್ನೂರು ತಾಲೂಕು ಶಿಕ್ಷಕರ ಸಂಘದ ನಿಕಟಪೂರ್ವ ಅಧ್ಯಕ್ಷೆ ಸರೋಜಿನಿ ಭರಮಗೌಡರ, ಎಂ.ಎನ್. ರಡ್ಡಿ, ವಿಮಲಾ ಶಿಡಗನಾಳ, ರೇಣುಕಾ ಬಸೆನಾಯಕರ ಮತ್ತಿತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.