ಕನ್ನಡಪ್ರಭ ವಾರ್ತೆ ತುರುವೇಕೆರೆ
ಶರಣ ಪರಂಪರೆಯಲ್ಲಿ ಶರಣ ವಚನಗಳು ಇಂದಿಗೂ ಅನುಕರಣಿಯವಾಗಿವೆ. ವಿಶ್ವಗುರು ಶ್ರೀ ಬಸವೇಶ್ವರ ಕಾಲದಲ್ಲಿನ ವಚನ ಸಾಹಿತ್ಯ ಬಹಳ ಕ್ರಾಂತಿಯನ್ನೇ ಮಾಡಿತ್ತು. ವಚನಗಳನ್ನು ಎಲ್ಲರೂ ಕಲಿಯಬೇಕಿದೆ. ತಮ್ಮ ಮಕ್ಕಳಿಗೆ ಬಸವಣ್ಣ, ಸಿದ್ದರಾಮೇಶ್ವರ, ಅಲ್ಲಮಪ್ರಭು, ಅಕ್ಕಮಹಾದೇವಿ ವಚನಗಳನ್ನು ಕಲಿಸಿದರೆ ಮಕ್ಕಳು ಉತ್ತಮ ಸಂಸ್ಕಾರಯುತವಾಗಿ ಬೆಳಸಲು ಸಾಧ್ಯ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಹ್ಯಾದ್ರಿ ಜಂಗಮ್ ಶರಣೆ ಅಕ್ಕಮಹಾದೇವಿ ಬಗ್ಗೆ ಉಪನ್ಯಾಸ ನೀಡಿದರು. ಅಮ್ಮಸಂದ್ರ ಅಕ್ಕನ ಬಳಗದ ಶರಣೆ ಇಂದ್ರಮ್ಮರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಅಕ್ಕನ ಬಳಗದ ಅಧ್ಯಕ್ಷರಾದ ದೇವಮ್ಮ ಶಂಕರಪ್ಪ, ಪ್ರಧಾನ ಕಾರ್ಯದರ್ಶಿ ಗೀತಾ ಸುರೇಶ್, ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಿಳಾ ಘಟಕದ ಅಧ್ಯಕ್ಷೆ ಟಿ.ಆರ್.ಪುಷ್ಪಾವತಿ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷೆ ರೂಪಶ್ರೀ, ಪ್ರಧಾನ ಕಾರ್ಯದರ್ಶಿ ಸುನಿಲ್ ಬಾಬು, ವೀರಶೈವ ಲಿಂಗಾಯಿತ ಮಹಾಸಭಾದ ತಾಲೂಕು ಕಾರ್ಯದರ್ಶಿ ಶಿವಾನಂದ್, ಮಹಾಸಭಾ ಸದಸ್ಯರು, ಅಕ್ಕನ ಬಳಗದ ಸದಸ್ಯರು ಇತರರು ಇದ್ದರು.