ಅಕ್ರಮ ಮರಳು ಗಣಿಗಾರಿಕೆ ಮೇಲೆ ತಹಸೀಲ್ದಾರ್ ತಂಡ ದಿಢೀರ್ ದಾಳಿ: ಟ್ರ್ಯಾಕ್ಟರ್ ವಶ

KannadaprabhaNewsNetwork | Published : Apr 3, 2024 1:34 AM

ಸಾರಾಂಶ

ಕೆ.ಆರ್.ಪೇಟೆ ತಾಲೂಕಿನ ಪಿಡಿಜಿ ಕೊಪ್ಪಲು ಗ್ರಾಮದ ಬಳಿ ಹೇಮಾವತಿ ನದಿಯಿಂದ ಟ್ರ್ಯಾಕ್ಟರ್‌ನಲ್ಲಿ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಮಂಗಳವಾರ ತಡರಾತ್ರಿ 1 ಗಂಟೆ ವೇಳೆಗೆ ತಹಸೀಲ್ದಾರ್ ಲೋಕೇಶ್ ತಮ್ಮ ಇಲಾಖಾ ಸಿಬ್ಬಂದಿ ಮೂಲಕ ಮರಳು ಗಣಿಗಾರಿಕೆ ಅಡ್ಡೆಯ ಮೇಲೆ ದಾಳಿ ನಡೆಸಿದರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಅಕ್ರಮ ಮರಳು ಗಣಿಗಾರಿಕೆ ಮೇಲೆ ದಿಢೀರ್ ದಾಳಿ ನಡೆಸಿದ ತಹಸೀಲ್ದಾರ್ ಡಾ.ಎಸ್.ವಿ.ಲೋಕೇಶ್ ಮರಳು ಸಾಗಣಿಕೆ ಮಾಡುತ್ತಿದ್ದ ಟ್ರ್ಯಾಕ್ಟರ್ ವಶಪಡಿಸಿಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ.

ತಾಲೂಕಿನ ಪಿಡಿಜಿ ಕೊಪ್ಪಲು ಗ್ರಾಮದ ಬಳಿ ಹೇಮಾವತಿ ನದಿಯಿಂದ ಟ್ರ್ಯಾಕ್ಟರ್‌ನಲ್ಲಿ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಮಂಗಳವಾರ ತಡರಾತ್ರಿ 1 ಗಂಟೆ ವೇಳೆಗೆ ತಹಸೀಲ್ದಾರ್ ಲೋಕೇಶ್ ತಮ್ಮ ಇಲಾಖಾ ಸಿಬ್ಬಂದಿ ಮೂಲಕ ಮರಳು ಗಣಿಗಾರಿಕೆ ಅಡ್ಡೆಯ ಮೇಲೆ ದಾಳಿ ನಡೆಸಿದರು.

ದಾಳಿ ವೇಳೆ ಮರಳು ತುಂಬಿದ ಟ್ರ್ಯಾಕ್ಟರ್ ಸ್ಥಳದಲ್ಲಿಯೇ ಬಿಟ್ಟು ಚಾಲಕ ಸೇರಿದಂತೆ ಎಲ್ಲರೂ ಪರಾರಿಯಾಗಿದ್ದಾರೆ. ಪಿಡಿಜಿ ಕೊಪ್ಪಲು ಗ್ರಾಮದ ನಾಗಾರ್ಜುನರಿಗೆ ಸೇರಿದ ಟ್ರ್ಯಾಕ್ಟರ್ ಅನ್ನು ಪೊಲೀಸರು ಗ್ರಾಮಾಂತರ ಠಾಣೆಗೆ ಒಪ್ಪಿಸಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.ಸ್ಮಶಾನ ಜಾಗಕ್ಕೆ ಕಿಡಿಗೇಡಿಗಳಿಂದ ಬೆಂಕಿ: ಅಪಾರ ನಷ್ಟ

ಭಾರತೀನಗರ:ಸ್ಮಶಾನ ಜಾಗಕ್ಕೆ ಕಿಡಿಗೇಡಿಗಳು ಹಚ್ಚಿದ ಬೆಂಕಿಯಿಂದ ಮರಗಳು ಸುಟ್ಟು ಅಪಾರ ನಷ್ಟ ಸಂಭವಿಸಿರುವ ಘಟನೆ ಅಣ್ಣೂರು ಗ್ರಾಮದ ಹೊರವಲಯದಲ್ಲಿ ನಡೆದಿದೆ.

ಗ್ರಾಮದ ಮೂರುವರೆ ಪ್ರದೇಶದಲ್ಲಿರುವ ಸ್ಮಶಾನದ ಭೂಮಿಯಲ್ಲಿ ತ್ಯಾಗ, ಬೇವು ಸೇರಿದಂತೆ ವಿವಿಧ ಮರಗಳು ಬೆಳೆದು ನಿಂತಿದ್ದವು. ಕಿಡಿಗೇಡಿಗಳು ಇಂದು ಹಚ್ಚಿದ ಬೆಂಕಿ ತಗುಲಿ ಹಲವು ಮರಗಳು ಸುಟ್ಟು ಅಪಾರ ನಷ್ಟವಾಗಿದೆ.ಬೆಂಕಿ ಸ್ಮಶಾನ ಜಾಗಕ್ಕೆ ಆವರಿಸುತ್ತಿದ್ದಂತೆ ಸ್ಥಳದಲ್ಲಿದ್ದ ಗ್ರಾಮಸ್ಥರು ಪಿಡಿಒಗೆ ದೂರು ನೀಡಿದ್ದಾರೆ. ತಕ್ಷಣ ಪಿಡಿಒ ಅಶ್ವಿನಿ ಅವರು ಅಗ್ನಿಶಾಮಕ ಠಾಣೆಗೆ ವಿಷಯ ಮುಟ್ಟಿಸಿದ ಮೇರೆಗೆ ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿನಂದಿಸುವಲ್ಲಿ ಮುಂದಾದರೂ ಸಹ 1 ಎಕರೆಯಷ್ಟು ಮರಗಳು ಸುಟ್ಟುಕರಕಲಾಗಿವೆ. ಹೆಚ್ಚಿನ ಅನಾಹುತವನ್ನು ತಪ್ಪಿಸುವಲ್ಲಿ ಅಗ್ನಿಶಾಮಕ ಠಾಣೆ ಯಶಸ್ವಿಯಾಗಿದೆ.

ಸ್ಥಳದಲ್ಲಿ ಗ್ರಾಪಂ ಸದಸ್ಯರಾದ ಸಿದ್ದೇಗೌಡ, ಪಂಚಾಯ್ತಿ ಎಸ್‌ಡಿಎ ಜಿ.ಆರ್.ರಾಮು ಮತ್ತು ಸಿಬ್ಬಂದಿ ಬೆಂಕಿ ನಂದಿಸಲು ಅಗ್ನಿಶಾಮ ಠಾಣೆಗೆ ಸಹಕಾರ ನೀಡಿದರು.

Share this article