ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಪಟ್ಟಣದ ಮಹಿಳಾ ಸರ್ಕಾರಿ ಗೃಹ ವಿಜ್ಞಾನ ಕಾಲೇಜಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಚಕೋರ ವೇದಿಕೆಯು ಹಾಗೂ ಕನ್ನಡ ವಿಭಾಗದ ಸಹಯೋಗದಲ್ಲಿ ಏರ್ಪಡಿಸಿದ್ದ ಪೂರ್ಣಚಂದ್ರ ತೇಜಸ್ವಿ-ಸಾಹಿತ್ಯ ಕಥನ ಕುರಿತು ಉಪನ್ಯಾಸವನ್ನು ಉದ್ಘಾಟಿಸಿ ಅವರು ಮಾತನಾಡಿದರು. ತೇಜಸ್ವಿಯವರು ತಂದೆ ಕುವೆಂಪು ಅವರ ಆದರ್ಶವನ್ನು ಮೈಗೂಡಿಸಿಕೊಂಡು, ತಂದೆಯ ನೆರಳಿನಲ್ಲಿ ಬೆಳೆಯಲು ಇಚ್ಛಿಸಲಿಲ್ಲ, ತಾವು ಬದುಕಿದ ಪರಿಸರವನ್ನು ಅಪಾರವಾಗಿ ಪ್ರೀತಿಸಿದರು ಮತ್ತು ಇಂಗ್ಲಿಷ್‌ನ ದಬ್ಬಾಳಿಕೆ ಎದುರು ಕನ್ನಡವನ್ನು ಕಟ್ಟಿ ಬೆಳೆಸಿದರು. ಅಪಾರ ಓದುಗರನ್ನು ಸೃಷ್ಟಿ ಮಾಡಿದ ತೇಜಸ್ವಿ ಸಾಧನೆ ಅನುಕರಣೀಯ ಎಂದರು.
ಹಾಸನ ಎ.ವಿ.ಕೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಿ.ಚ.ಯತೀಶ್ವರ ಅವರು ಮಾತನಾಡಿ, ತೇಜಸ್ವಿ ಯಾವುದೇ ಪಂಥಕ್ಕೆ ಸಿಲುಕದ ಅಪರೂಪದ ಲೇಖಕ. ಸಾಮಾನ್ಯ ಪಾತ್ರಗಳ ಮೂಲಕ ವೈಚಾರಿಕ ಸಂದೇಶವನ್ನು ಸಾರಿದವರು. ಮಂತ್ರ ಮಾಂಗಲ್ಯದ ಮೂಲಕ ಸರಳ ಮದುವೆಯ ಪರಂಪರೆಗೆ ನಾಂದಿ ಹಾಡಿದವರು. ಆ ಕಾಲದ ಎಲ್ಲ ಹೋರಾಟಗಳಿಗೆ ಪ್ರೇರಣೆ ಆಗಿದ್ದರು ಎಂದು ಸ್ಮರಿಸಿದರು.ಚಕೋರ ಹಾಸನ ಜಿಲ್ಲಾ ಸಂಚಾಲಕ ಡಾ. ಎಚ್.ಎಲ್.ಮಲ್ಲೇಶ ಗೌಡ ಅವರು ಇತ್ತೀಚೆಗೆ ನಮ್ಮನ್ನು ಅಗಲಿದ ಎಸ್.ಎಲ್.ಭೈರಪ್ಪ ಅವರಿಗೆ ಗೌರವ ಸಲ್ಲಿಸಿ ಮಾತನಾಡಿ, ಕನ್ನಡದಲ್ಲಿ ಅಸಂಖ್ಯಾತ ಓದುಗರು ಮೆಚ್ಚಿದ ಲೇಖಕರು. ಅವರ ಜೀವನ ಶ್ರದ್ಧೆ, ತಮ್ಮ ಬರಹಕ್ಕೆ ಮಾಡಿಕೊಳ್ಳುತ್ತಿದ್ದ ಪೂರ್ವ ತಯಾರಿ, ಪಾತ್ರಗಳನ್ನು ಜೀವಂತಿಕೆಯಿಂದ ಸೃಷ್ಟಿಸುತ್ತಿದ್ದ ರೀತಿ ಅನನ್ಯವಾದುದು. ಕನ್ನಡಕ್ಕೆ ಹಲವು ಮಹತ್ವದ ಕಥನಗಳನ್ನು ಕೊಡುಗೆಯಾಗಿ ನೀಡಿದ ಅವರ ಸೇವೆ ಸದಾ ಸ್ಮರಣೀಯ ಎಂದು ನುಡಿದರು.ಅಕಾಡೆಮಿಯ ಸದಸ್ಯ ಸಂಚಾಲಕರಾದ ಸುಜಾತ ಎಚ್.ಆರ್ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಾಂಶುಪಾಲರಾದ ಡಾ. ಅಶೋಕ್ ಎಚ್.ಕೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳಾದ ಆಶಾ ಸ್ವಾಗತಿಸಿ, ರುಚಿತ ಹಾಗೂ ರಶ್ಮಿ ಕಾರ್ಯಕ್ರಮ ನಿರೂಪಿಸಿದರು ಹಾಗೂ ಕನ್ನಡ ಪ್ರಾಧ್ಯಾಪಕ ಡಾ. ಗಣೇಶ ವಂದಿಸಿದರು. ಐಕ್ಯುಎಸಿ ಘಟಕದ ಜಗದೀಶ ಸಿ.ಬಿ, ಇಂಗ್ಲಿಷ್ ವಿಭಾಗದ ಮಧುಶ್ರೀ, ವಿಜ್ಞಾನ ವಿಭಾಗದ ಫಕೀರಮ್ಮ ಮುರಗೋಡ್, ದೈಹಿಕ ಶಿಕ್ಷಣ ವಿಭಾಗದ ಎಂ.ಎಸ್. ಜಯಚಂದ್ರ, ವಾಣಿಜ್ಯಶಾಸ್ತ್ರ ವಿಭಾಗದ ಸುನಿಲ್, ಗಣಿತಶಾಸ್ತ್ರ ವಿಭಾಗದ ಡಾ. ಜಗದೀಶ್, ಮುಂತಾದವರು ಉಪಸ್ಥಿತರಿದ್ದರು.