ಕುಮಟಾ: ಅತಿವೇಗದಿಂದ ಚಲಾಯಿಸಿಕೊಂಡು ಬಂದ ಲಾರಿಯೊಂದು ರಸ್ತೆಯಂಚಿಗೆ ವ್ಯಾಪಾರ ಮಾಡುತ್ತಿದ್ದ ಎಳನೀರು ವ್ಯಾಪಾರಿ ಮೇಲೆ ಹರಿದು ಆತ ಸ್ಥಳದಲ್ಲೇ ಮೃತಪಟ್ಟ ಘಟನೆ ಪಟ್ಟಣದ ಎಪಿಎಂಸಿ ದ್ವಾರದ ಬಳಿ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಗುರುವಾರ ನಡೆದಿದೆ.
ಇದೇ ವೇಳೆ ಲಾರಿಯು ಪಕ್ಕದಲ್ಲಿದ್ದ ಎಳನೀರು ರಾಶಿಯ ಮೇಲೆ ಹರಿದು ವ್ಯಾಪಾರ ಮಾಡುತ್ತಿದ್ದ ಉಮೇಶ ನಾರಾಯಣ ಹರ್ಮಲಕರ್‌ಗೆ ಡಿಕ್ಕಿ ಹೊಡೆದಿದೆ. ಆತ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಲಗೇಜ್ ರಿಕ್ಷಾ ಚಾಲಕ ಬಗ್ಗೋಣದ ವಸಂತ ಮಾದೇವ ನಾಯ್ಕ ತೀವ್ರ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗೆ ಕಾರವಾರ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.ಅಪಘಾತಕ್ಕೆ ಕಾರಣನಾದ ಆರೋಪಿ ಲಾರಿ ಚಾಲಕ ಹಾಗೂ ಹೆದ್ದಾರಿ ಕಾಮಗಾರಿ ಸಮರ್ಪಕವಾಗಿ ನಿರ್ವಹಿಸದೇ, ರಸ್ತೆಯಲ್ಲಿ ಡಿವೈಡರ್ ಅಳವಡಿಸದೇ ಇರುವ ಐಆರ್‌ಬಿ ಕಂಪನಿ ವಿರುದ್ಧ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪರಿಚಿತ ವಾಹನ ಬಡಿದು ವ್ಯಕ್ತಿ ಸಾವು
ಮಿರ್ಜಾನ ಎತ್ತಿನಬೈಲ ನಿವಾಸಿ ಚಾಲಕ ವೃತ್ತಿಯ ಭರತ ನಕುಲ ಪಟಗಾರ(೩೫) ಮೃತ ವ್ಯಕ್ತಿ. ನಾಗೂರ ಕ್ರಾಸ್ ಬಳಿ ಹೆದ್ದಾರಿ ದಾಟುವಾಗ ಅಪರಿಚಿತ ವಾಹನವು ಅತಿವೇಗದಿಂದ ಬಂದು ಗುದ್ದಿ ಪರಾರಿಯಾಗಿದೆ. ಇದರಿಂದ ತಲೆ ಹಾಗೂ ಮೈಗೆ ತೀವ್ರ ಗಾಯಗೊಂಡ ಭರತ ಪಟಗಾರ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ಮೃತನ ತಂದೆ ನಕುಲ ಗಣೇಶ ಪಟಗಾರ ನೀಡಿದ ದೂರಿನಂತೆ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.