- ಗ್ರೀನ್ ಕರ್ನಾಟಕ ಅಸೋಸಿಯೇಷನ್ ಅಧ್ಯಕ್ಷ ಚನ್ನು
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಹು-ಧಾ ಮಹಾನಗರವನ್ನು ಹಸಿರು ನಗರವನ್ನಾಗಿ ಮಾಡುವ ಗುರಿ ಹೊಂದಲಾಗಿದ್ದು, ಕಳೆದ 7 ತಿಂಗಳಲ್ಲಿ 19 ಸಾವಿರ ಸಸಿಗಳ ವಿತರಣೆ, ವಿವಿಧ ಬಡಾವಣೆಗಳಲ್ಲಿ 6 ಸಾವಿರ ಸಸಿ ನೆಡಲಾಗಿದೆ ಎಂದು ಗ್ರೀನ್ ಕರ್ನಾಟಕ ಅಸೋಸಿಯೇಷನ್ ಅಧ್ಯಕ್ಷ ಚನ್ನು ಹೊಸಮನಿ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರೀನ್ ಕರ್ನಾಟಕ ಅಸೋಸಿಯೇಷನ್, ವಸುಂದರ ಫೌಂಡೇಶನ್ಹಾ ಗೂ ವಿ-ಕೇರ್ ಫೌಂಡೇಶನ್ ವತಿಯಿಂದ ಕಳೆದ 7 ತಿಂಗಳಿಂದ ನಿರಂತರವಾಗಿ ಪರಿಸರ ಸಂರಕ್ಷಣಾ ಕೆಲಸ ಮಾಡುತ್ತಾ ಬರಲಾಗುತ್ತಿದೆ.
ಈ ಕಾರ್ಯಕ್ರಮಕ್ಕೆ ಕಳೆದ ಜೂ. 4ರಂದು ಇಲ್ಲಿನ ತೋಳನಕೆರೆಯಲ್ಲಿ ರನ್ ಫಾರ್ ನೇಚರ್ ಕಾರ್ಯಕ್ರಮಕ್ಕೆ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರಿಂದ ಚಾಲನೆ ನೀಡಲಾಯಿತು.ಈಗಾಗಲೇ ತೊಳನಕೆರೆ, ನೃಪತುಂಗ ಬೆಟ್ಟ, ಪಿರಾಮಿಡ್ ದ್ಯಾನ ಮಂದಿರ, ಕೆಸಿಡಿ ಕಾಲೇಜು ಸರ್ಕಲ್, ಉಣಕಲ್ ಉದ್ಯಾನವನ, ಜಿಮ್ಖಾನ್ ಕ್ಲಬ್ ಗ್ರೌಂಡ್, ನುಗ್ಗಿಕೇರಿ ಹನುಮಂತ ದೇವಸ್ಥಾನ, ಗ್ಲಾಸ್ ಹೌಸ್, ಸಿದ್ದಾರೂಢಮಠ ಹಾಗೂ ವಿವಿಧ ಸಂಘ ಸಂಸ್ಥೆಗಳಿಗೆ ಹಾಗೂ ಶಾಲೆಗಳಿಗೆ 19 ಸಾವಿರ ಸಸಿಗಳನ್ನು ಜನಸಾಮಾನ್ಯರಿಗೆ ವಿತರಣೆ ಮಾಡಲಾಗಿದೆ. ಸುಮಾರು 6 ಸಾವಿರ ಗಿಡಗಳನ್ನು ವಿವಿಧ ಬಡಾವಣೆಗಳ ಉದ್ಯಾನವನಗಳಲ್ಲಿ ಹಾಗೂ ವಿವಿಧ ಪ್ರದೇಶಗಳ ಕೆರೆಗಳ ದಂಡೆಗಳ ಮೇಲೆ ನೆಡಲಾಗಿದೆ. ಈ ಪರಿಸರ ಕಾಳಜಿ ಕಾರ್ಯಕ್ರಮಕ್ಕೆ ವಿವಿಧ ಸಂಘ ಸಂಸ್ಥೆಗಳು ಹಾಗೂ ಉದ್ಯಮಗಳು ಸಹಾಯ ಸಹಕಾರ ನೀಡಿದ್ದಾರೆ.ಮುಂಬರುವ ಮಳೆಗಾಲದಲ್ಲಿ ಸ್ಥಳೀಯ ಉದ್ಯಮಿಗಳ ಸಹಕಾರದಿಂದ ಇನ್ನು ಹೆಚ್ಚಿನ ಗುರಿ ಇಟ್ಟುಕೊಂಡಿದ್ದು, ಸುಮಾರು 30-40 ಸಾವಿರ ಸಸಿಗಳನ್ನು ನೆಡುವ ಮೂಲಕ ಹಸಿರು ನಗರವನ್ನಾಗಿಸುವ ಗುರಿ ಹೊಂದಲಾಗಿದೆ ಎಂದರು.
ಈ ವೇಳೆ ವಸುಂಧರಾ ಫೌಂಡೇಶನ್ ಅಧ್ಯಕ್ಷ ಮೇಘರಾಜ್ ಕೆರೂರ, ವಿ-ಕೇರ್ ಫೌಂಡೇಶನ್ ಅಧ್ಯಕ್ಷ ಗಂಗಾಧರ ಗುಜಮಾಗಡಿ, ಜೀವನ ವಸ್ತ್ರದ, ವಿನಾಯಕ ನಾಯ್ಕರ ಸೇರಿದಂತೆ ಹಲವರಿದ್ದರು.ಸಸಿಗಳ ನೆಡುವ, ವಿತರಣೆ ಕಾರ್ಯಕ್ರಮ
ನಮ್ಮ ಗ್ರೀನ್ ಕರ್ನಾಟಕ ಅಸೋಸಿಯೇಷನ್, ವಸುಂದರ ಫೌಂಡೇಶನ್ ಹಾಗೂ ವಿ-ಕೇರ್ ಫೌಂಡೇಶನ್ ವತಿಯಿಂದ ಮಂಗಳವಾರ ಹುಬ್ಬಳ್ಳಿಯ ತೋಳನಕೆರೆಯಲ್ಲಿ ಹಸಿರು ನಗರವಾಗಿಸುವ ಸಂಕಲ್ಪದಡಿ ಸಾರ್ವಜನಿಕರಿಗೆ ಸಸಿಗಳ ನೆಡುವ ಹಾಗೂ ವಿತರಣಾ ಕಾರ್ಯಕ್ರಮ ನೆರವೇರಿತು.ಈ ವೇಳೆ ಪಾಲಿಕೆ ಮೇಯರ್ ವೀಣಾ ಬರದ್ವಾಡ, ಉದ್ಯಮಿ ವಿ.ಎಸ್.ವಿ. ಪ್ರಸಾದ, ವೆಂಕಟೇಶ ಕಾಟವೆ, ರಮೇಶ ಪಾಟೀಲ, ವಿಶ್ವನಾಥ ಸೋಮಾಪುರ, ಪ್ರಕಾಶ ಬಾಫನಾ, ಗಿರೀಶ ನಾಲ್ವಡಿ, ಸುನೀಲ ಧಾರವಾಡಶೆಟ್ಟರ, ಪಾಲಿಕೆ ಸದಸ್ಯ ರಾಮಣ್ಣ ಬಡಿಗೇರ, ಶಿವು ಮೆಣಸಿನಕಾಯಿ, ಸ್ಮಾರ್ಟ್ ಸಿಟಿಯ ಪರಿಸರ ಅಭಿಯಂತರರಾದ ಪನ್ನಘಾ ಪ್ರಸಾದ, ಮೂರುಸಾವಿರಪ್ಪ ಮೆಣಸಿನಕಾಯಿ, ರವಿ ಶೆರೇವಾಡ, ಶಂಭು ಅಳಗುಂಡಗಿ, ಕಿರಣ ತಗಲಕೊಂಬ ಸೇರಿದಂತೆ ಹಲವರಿದ್ದರು.